ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಮುಸ್ಲಿಂ ಬಾಂಧವರು ಶನಿವಾರ ಸಾಮೂ ಹಿಕ ಪ್ರಾರ್ಥನೆ ಮೂಲಕ ಈದ್ ಉಲ್ ಫಿತರ್ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಮಂಗಳೂರಿನಲ್ಲಿ ಸಂಭ್ರಮದ ಈದ್ ಆಚರಣೆ
ತಲೆಗೆ ಬಿಳಿ ಪಗಡಿ ಧರಿಸಿ, ಶುಭ್ರ ಶ್ವೇತ ವಸ್ತ್ರಧಾರಿಗಳಾಗಿ ನಗರದ ವಿವಿಧ ಮಸೀದಿ, ಈದ್ಗಾಗಳಲ್ಲಿ ಜಮಾಯಿಸಿದ ಮುಸ್ಲಿ ಮರು, ತುಂತುರು ಸುರಿಯುತ್ತಿದ್ದ ಮಳೆ ಯಲ್ಲೇ ಲೋಕ ಕಲ್ಯಾಣ ಕ್ಕಾಗಿ ಅಲ್ಲಾಹುಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಒಂದು ತಿಂಗಳ ರಂಜಾನ್ ಉಪವಾಸ ವ್ರತವನ್ನು ಅಂತ್ಯಗೊಳಿಸಿದರು.
ಹಿರಿಯರು, ಯುವಕರು, ಪುಟಾಣಿ ಗಳು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು, ಭ್ರಾತೃತ್ವಕ್ಕೆ ಬೆಸುಗೆ ಹಾಕಿದರು. ಪ್ರತಿಯೊಂದು ಮುಸ್ಲಿಮರ ಮನೆ ಯಲ್ಲಿ ಹಬ್ಬದ ಕಳೆಕಟ್ಟಿತ್ತು. ಮಹಿಳೆ ಯರು, ಯುವತಿಯರು, ಪುಟಾಣಿಗಳು ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಿದ್ದುದು ಕಂಡುಬಂತು.
ಉಡುಪಿಯಲ್ಲಿ ಸಂಭ್ರಮದ ಈದ್ ಆಚರಣೆ
ಮುಂಜಾನೆ ಪಟ್ಟಣದಲ್ಲಿ ಮಳೆಯ ವಾತಾವರಣ ಉಂಟಾಗಿದ್ದರಿಂದ ನಗರದ ಕೆಲವು ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಪ್ರಾರ್ಥನೆ ಹಾಗೂ ಮೆರವಣಿಗೆ ಸ್ಥಗಿತಗೊಳಿಸಿ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಪರಸ್ಪರ ಶುಭಾಷಯ ಕೋರಿದರು. ಈ ವೇಳೆ ವಿವಿಧ ಸಂಘಟನೆಗಳ ಪದಾ ಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಮಸೀದಿ ಬಳಿ ತೆರಳಿ ಮುಸ್ಲಿಂ ಭಾಂಧವರಿಗೆ ಶುಭಾಷಯ ಕೋರಿದರು.
ಹಬ್ಬ ಆಚರಣೆಗೆ ಅಡ್ಡಿಯಾಗದಂತೆ ಪಟ್ಟಣದಲ್ಲಿ ಸೂಕ್ಷ್ಮ ಬಂದೋ ಬಸ್ತ್ ನಡೆಸಿದ ಪೊಲೀಸ್ ಇಲಾಖೆ ಪೊಲೀಸ್ ಪಹರೆ ನೀಡಿ ಅಹಿತಕರ ಘಟನೆಗಳು ನಡೆಯಂದತೆ ಕ್ರಮ ವಹಿ ಸಿತ್ತು.