ದೆಹಲಿ ಕರ್ನಾಟಕ ಸಂಘದಲ್ಲಿ ಆಹೋರಾತ್ರಿ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ
ದೆಹಲಿ: ದೆಹಲಿ ಕರ್ನಾಟಕ ಸಂಘದಲ್ಲಿ ಬಡಗು ತಿಟ್ಟಿನ ಭೀಷ್ಮ ವಿಜಯ ಮತ್ತು ನಾಗಶ್ರೀ ಅಹೋರಾತ್ರಿ ಯಕ್ಷಗಾನ ಬಹಳ ಅದ್ದೂರಿಯಾಗಿ ನಡೆದು ನೆರೆದ ಕಲಾರಸಿಕರನ್ನು ತನ್ಮಯಗೊಳಿಸಿತು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾಪೋಷಕ ಸಂಘಟಕ ಮತ್ತು ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ ಇದರ ವ್ಯವಸ್ಥಾಪಕರೂ ಆಗಿರುವ ಶ್ರೀ ಕಿಷನ್ ಪಿ.ಹೆಗ್ಡೆ ಹಾಗೂ ಶ್ರೀಮತಿ ಶಿಲ್ಪಾ ಹೆಗ್ಡೆ ದಂಪತಿಗಳನ್ನು ಅತ್ಯಂತ ಪ್ರೀತಿ ಆದರ ಹಾಗೂ ಗೌರವದಿಂದ ನೆರೆದಿದ್ದ ಕಲಾರಸಿಕರು ಮತ್ತು ದೆಹಲಿಯ ಕನ್ನಡಿಗರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಶ್ರೀ ವಿಶ್ವನಾಥ ಶೆಟ್ಟಿ, ದೆಹಲಿ ತುಳುಸಿರಿ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಗೋಕರ್ಣ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್, ಬಂಟ್ಸ್ ಕಲ್ಚರಲ್ ಅಸೋಸಿಯೇಷನ್‍ನ ಶಿವಪ್ರಸಾದ ಶೆಟ್ಟಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ನವದೆಹಲಿಯ ಬಾಬುರಾಜ್ ಪೂಜಾರಿ, ಸಂಘದ ಸಿ.ಎಂ.ನಾಗರಾಜ, ಖಜಾಂಚಿ ಶ್ರೀ ಕೆ.ಎಸ್.ಜಿ. ಶೆಟ್ಟಿ, ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾದ ಸಖಾರಾಮ ಉಪ್ಪೂರು, ಈ ಯಕ್ಷಗಾನ ಕಾರ್ಯಕ್ರಮದ ವಿಶೇಷ ಸಂಚಾಲಕರಾದ ರಾಧಾಕೃಷ್ಣ, ಸಂಘದ ಉಪಾಧ್ಯಕ್ಷರುಗಳಾದ ಆಶಾಲತ ಮತ್ತು ಹೇಮಲತ, ಸಂಘದ ಜತೆ ಕಾರ್ಯದರ್ಶಿಗಳಾದ ಟಿ.ಪಿ.ಬೆಳ್ಳಿಯಪ್ಪ, ಸಂಘದ ಎಲ್ಲ ಪದಾಧಿಕಾರಿಗಳು, ಹಿರಿಯ ಸದಸ್ಯರುಗಳು, ಕರ್ನಾಟಕ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಮತ್ತು ಸಿಂಡಿಕೇಟ್ ಬ್ಯಾಂಕ್‍ನ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು, ಅಷ್ಟೇ ಅಲ್ಲದೆ ಸಭಾಂಗಣದಲ್ಲಿ ತುಂಬಿ ನೆರೆದಿದ್ದ ದೆಹಲಿಯ ಕನ್ನಡದ ಕಲಾರಸಿಕರು, ಮಹಿಳೆಯರು ಮತ್ತು ಮಕ್ಕಳು ಈ ಸರಳ ಸುಂದರ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಶ್ರೀ ಕಿಶನ್ ಹೆಗ್ಡೆ ದಂಪತಿಗಳನ್ನು ಶಾಲು ಹೊದೆಸಿ, ಫಲಪುಷ್ಪಗಳನ್ನು ನೀಡಿ ಸಂಘದ ಸ್ಮರಣಿಕೆ ಹಾಗೂ ಸನ್ಮಾನ ಪತ್ರದೊಂದಿಗೆ ನೆರೆದ ಸಭಿಕರ ಬಾರಿ ಕರತಾಡನದೊಂದಿಗೆ ಅಭಿನಂದಿಸಲಾಯಿತು.
ದೆಹಲಿ ಕರ್ನಾಟಕ ಸಂಘದ ಜೊತೆ ಜೊತೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರ್ಕಾರ ಬೆಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ, ಕರ್ನಾಟಕ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ದೆಹಲಿ ತುಳುಸಿರಿ, ಬಂಟ್ಸ್ ಕಲ್ಚರಲ್ ಅಸೋಸಿಯೇಷನ್, ನವದೆಹಲಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ನವದೆಹಲಿ, ಗೋಕರ್ಣ ಮಂಡಳ ನವದೆಹಲಿ, ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಹಕರಿಸಿದ್ದನ್ನು ದೆಹಲಿ ಕರ್ನಾಟಕ ಸಂಘದ ಪರವಾಗಿ ಕೃತಜ್ಞತೆಗಳನ್ನು ಹೃತ್ಫೂರ್ವಕವಾಗಿ ಸಲ್ಲಿಸಿದರು.
ಭೀಷ್ಮ ವಿಜಯದ ಅಂಬೆ, ಸಾಲ್ಯ, ಭೀಷ್ಮ ಪಾತ್ರಗಳು ಹಾಗೂ ನಾಗಶ್ರೀ ಪ್ರಸಂಗದ ಕೈರವ, ದಾರಿಕೆ, ನಾಗಶ್ರೀ ಪಾತ್ರಗಳು ಹಾಗೂ ಕಂಚಿನ ಕಂಠದ ಭಾಗವತರು, ಅಮೋಘವಾದ ಮದ್ದಳೆ ಮತ್ತು ಚಂಡೆವಾದನ ರಸಿಕರ ಮನಗೆದ್ದವು. ಇದೇ ಮೊದಲ ಬಾರಿಗೆ ವೃತ್ತಿಪರ ತಂಡವೊಂದನ್ನು ದೆಹಲಿಗೆ ಕರೆಸಿಕೊಂಡು ಆಹೋರಾತ್ರಿ ಒಂದು ಉತ್ತಮವಾದ ಯಕ್ಷಗಾನವನ್ನು ನಡೆಸಲು ಅನುವು ಮಾಡಿಕೊಟ್ಟ ದೆಹಲಿ ಕರ್ನಾಟಕ ಸಂಘವನ್ನು ಮತ್ತು ಮಳೆ ಇದ್ದರೂ ಸಹ ಇಂತಹ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಾತ್ರಿಯಿಡೀ ಕುಳಿತು ಯಕ್ಷಗಾನವನ್ನು ಅನುಭವಿಸಿ ಕಲಾವಿದರನ್ನು ಪ್ರೋತ್ಸಾಹಿಸಿದ ದೆಹಲಿಯ ಪ್ರೇಕ್ಷಕರನ್ನು ಮತ್ತು ಕರ್ನಾಟಕ ಸಂಘದ ಸಮಸ್ತ ಪದಾಧಿಕಾರಿಗಳು, ಸದಸ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ ಮೇಳದ ವ್ಯವಸ್ಥಾಪಕರೂ ಹಾಗೂ ಭಾಗವತರು ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.