ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಗೆ ಧಾಳಿ ಒರ್ವನ ಬಂಧನ
ಮಂಗಳೂರು: ಹಂಪನಕಟ್ಟೆಯ ಲಾಡ್ಜ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಧಾಳಿ ನಡೆಸಿದ ಪಾಂಡೇಶ್ವರ ಪೋಲಿಸರು ಯುವಕನೋರ್ವನನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನನ್ನು ಕಡಗೋಡು ಬೆಂಗಳೂರು ನಿವಾಸಿ ಶಬರಿ ಯಾನೆ ವಿಕ್ರಮ್ (26) ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿ ಪೋಲಿಸ್ ಆಯುಕ್ತ ಚಂದ್ರ ಶೇಖರ್ ಅವರು ಜುಲೈ 21 ರಂದು ಮದ್ಯಾಹ್ನ ಮಹಿಳಾ ಪೊಲೀಸ್ ಠಾಣಾ ಪೊಲೀಸ್ ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಕಲಾವತಿ ರವರು ಖಚಿತ ಮಾಹಿತಿ ಮೇರೆಗೆ ಹಂಪನಕಟ್ಟೆ ಬಸ್ಸು ನಿಲ್ದಾಣದ ಬಳಿ ಇರುವ ಸೂರ್ಯ ಲಾಡ್ಜಿನ ರೂಂ ನಂ 103 ರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ತಿಳಿದು ಬಂದಿದ್ದು ಸಿಬ್ಬಂದಿಗಳಾದ ಎಎಸ್ಐ ಪೂರ್ಣಿಮಾ ಹಾಗೂ ಮ.ಪಿ.ಸಿ ನಾಗರತ್ನರವರನ್ನು ಕರೆದುಕೊಂಡು ಧಾಳಿ ನಡೆಸಿದಾಗ ವಿಕ್ರಮ್ ಎನ್ನುವ ವ್ಯಕ್ತಿ ಅಡುಗೆ ಕೆಲಸ ಮಾಡಿಕೊಂಡಿದ್ದು, “LOCANTO” ಎಂಬ ವೆಬ್ ಸೈಟ್ ಮೂಲಕ ಫೋನ್ ನಂಬರ್ 8880708075 ರನ್ನು ನೀಡಿ ಹುಡುಗಿಯರ ಬಗ್ಗೆ ಮಾಹಿತಿ ಹಾಕಿ, ಗಿರಾಕಿಗಳನ್ನು ಆಕರ್ಷಿಸಿ, ಬೆಂಗಳೂರು, ಮಂಗಳೂರಿನಲ್ಲಿ ವೇಶ್ಯಾ ವೃತ್ತಿಯನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ವಿಕ್ರಮ್ ಈತನು ಸುಮಾರು ವರ್ಷಗಳಿಂದ ಕೆಟರಿಂಗ್ ಸೇವೆಯಲ್ಲಿದ್ದು, ಸುಮಾರು 2 ವರ್ಷಗಳಿಂದ ಬೆಂಗಳೂರು, ಮಂಗಳೂರು ಮತ್ತಿತ್ತರ ನಗರ ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದುದಾಗಿ ತಿಳಿದು ಬಂದಿದೆ. ಈತ ಮದುವೆ ಸಮಾರಂಭಗಳಲ್ಲಿ ಸ್ವಾಗತಕಾರಿಣಿಯರ ಸೇವೆ ಸಲ್ಲಿಸುವ ಯುವತಿಯರನ್ನು ತನ್ನ ಜಾಲಕ್ಕೆ ಸೆಳೆದು ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದುದು ಕಂಡು ಬಂದಿದೆ. ಶಬರಿ ಯಾನೆ ವಿಕ್ರಮ್ನ ಜೊತೆ ಒಬ್ಬ ಮಂಜುನಾಥ್ @ ಮಂಜು ಎಂಬುವವನು ಈ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಇಬ್ಬರೂ ತಮ್ಮ ಮೊಬೈಲ್ ಸಂಖ್ಯೆಗಳನ್ನು “LOCANTO” ಎಂಬ Private Classifieds ವೆಬ್ ಸೈಟ್ನಲ್ಲಿ ಜಾಹೀರಾತುಗೊಳಿಸಿ ವೇಶ್ಯಾವಾಟಿಕೆಗೆ ಆಸಕ್ತ ಗ್ರಾಹಕರನ್ನು ಸೆಳೆಯುತ್ತಿರುತ್ತಾರೆ. ಈ ಪ್ರಕರಣದಲ್ಲಿ ವೇಶ್ಯಾವಾಟಿಕೆಯನ್ನು ಪ್ರೋತ್ಸಾಹಿಸಿದ್ದಕ್ಕಾಗಿ LOCANTO Classifieds ವಿರುದ್ದವು ತನಿಖೆ ಕೈಗೊಳ್ಳಲಾಗಿದ್ದು ಸೈಬರ್ ಅಪರಾಧಗಳ ತಜ್ಞರ ನೆರವನ್ನು ಕೋರಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಮಹಿಳೆಯರು ಹಾಗೂ ಪ್ರಮುಖ ರೂವಾರಿ ಮಂಜುನಾಥ ಯಾನೆ ಮಂಜು ಮತ್ತಿತರರ ಪತ್ತೆ ಕಾರ್ಯ ಜಾರಿಯಲ್ಲಿದೆ ಎಂದರು.
There is nothing hitech about sharing a mobile number to pimp girls.
Prostitution is another area of confusion for many societies. What’s the big deal if two consulting adults decide to have sex in their privacy? As long as there is no threat, force or deception, there is nothing morally wrong about this. However, many societies have turned sex into a taboo and criminalized these natural acts.