25 ವರ್ಷ ಕಳೆದರೂ ಅಳಿಯದ ಮಾನವೀಯತೆಯ ಅತ್ಯಂತ ಹೆಮ್ಮೆಯ, ಅವಿಸ್ಮರಣೀಯ ಘಟನೆ
ಮಂಗಳೂರು: ಇದೊಂದು 25 ವರ್ಷಗಳ ಹಿಂದಿನ ಘಟನೆ, ಅಂದು ನವ ಮಂಗಳೂರಿನ NMPT ಸಮೀಪ ಒಂದು ಟ್ರಕ್ ಗೆ ಒಂದು ಕಾರು ಬಲವಾಗಿ ಹೊಡೆದು ಭೀಕರ ಅವಘಡ ವಾಯಿತು. ಕಾರಿನಲ್ಲಿದ್ದ ಉಡುಪಿ ಕಡೆಯ ಬಂಟ್ಸ್ ಸಮುದಾಯದ ಇಬ್ಬರು ಗಂಡ ಹೆಂಡತಿ ತೀವ್ರ ವಾಗಿ ಜಖಂ ಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ಕ್ಷಣದಲ್ಲಿ ಸ್ಥಳಕ್ಕೆ ಧಾವಿಸಿದ ಶರೀಫ್ (proprietor of Shan Construction & logestic) ಎಂಬವರು ಆ ಕೂಡಲೇ ಈ ಅಪರಿಚಿತ ದಂಪತಿಗಳನ್ನು ಎತ್ತಿ ತನ್ನ ಕಾರಿನಲ್ಲಿ ಆಸ್ಪತ್ರೆ ಗೆ ಕೊಂಡು ಹೋಗಿ ಅಡ್ಮಿಟ್ ಮಾಡಿದರು. ಅಷ್ಟಕ್ಕೇ ನಿಲ್ಲದೆ ಇಬ್ಬರೂ ಸಂಪೂರ್ಣ ಗುಣವಾಗಿ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗುವ ವರೆಗೆ ಅವರ ಆರೈಕೆ ಯನ್ನು ಮಾಡಿದರು. ತನ್ನ ಸೇವೆ ಆದ ನಂತರ ಶರೀಫ್ ರವರು ಘಟನೆ ಯನ್ನು ಮರೆತಿದ್ದರು.
ಆದರೆ ಈ ಬಂಟ್ಸ್ ದಂಪತಿಗಳು ಹಾಗೂ ಅವರ ಇಡೀ ಕುಟುಂಬ ಈ ಉಪಕಾರ ವನ್ನು ಮರೆಯಲಿಲ್ಲ. ಕಳೆದ 25 ವರ್ಷ ಗಳಿಂದ ಶರೀಫ್ ರವರಿಗೆ ಕರೆಯನ್ನು ಮಾಡುತ್ತಾ ತಮ್ಮ ಕಡೆ ಬರಲು ಆಮಂತ್ರಿಸುತ್ತಿದ್ದರು. ಒಂದು ದಿನ ಆ ಬಂಟ್ಸ್ ರವರ ಒತ್ತಾಯಕ್ಕೆ ಓಗೊಟ್ಟು ಉಡುಪಿಗೆ ತನ್ನ ಪರಿವಾರ ದೊಂದಿಗೆ ಭೇಟಿ ನೀಡಿದಾಗ, ಅವರಿಗೆ ನಂಬಲೇ ಅಸಾಧ್ಯ ಎಂಬಂತೆ ಆ ಹಿಂದೂ ಸಂಸಾರ ಅಲ್ಲಿಯ ದೊಡ್ಡ ಸಭಾ ಮಂದಿರದಲ್ಲಿ ಶರೀಫ್ ರವರನ್ನು ವಿಜೃಂಭಣೆ ಯಿಂದ ಬರಮಾಡಿ, ಸಮಾರಂಭಕ್ಕೆ ತಮ್ಮ ಕುಟುಂಬ ಹಾಗೂ ಹಿತೈಷಿ ಗಳನ್ನು ಆಮಂತ್ರಿಸಿ ಅವರಿಗೆ ಅತ್ಯಂತ ಗೌರವ ಪೂರ್ವಕ ಸನ್ಮಾನ ನಡೆಸಿದರು. ಹಾಗೂ ನೆನಪಿನ ಕಾಣಿಕೆ ಗಳನ್ನು ನೀಡಿದರು.
ಉಪಕಾರ ಮಾಡಿದವರನ್ನು ಮರುಕ್ಷಣವೇ ಮರೆತು ಬಿಡುವ ಈ ಕಾಲದಲ್ಲಿ ತಮ್ಮ ಜೀವ ಉಳಿಸಿದ ಈ ಆಪತ್ಭಾಂದವ ಬೇರೆ ಧರ್ಮ ದವನಾದರೂ 25 ವರ್ಷ ಸಂದರೂ ತಮ್ಮ ಕೃತಜ್ನ್ಯತೆ ಯನ್ನು ಅರ್ಪಿಸಳು ಮರೆಯದ ಈ ಬಂಟ್ಸ್ ಸಂಸಾರಕ್ಕೆ, ಅವರ ಸೌಹಾರ್ದತೆಗೆ ಎಲ್ಲರೂ ತಲೆ ಬಾಗಿಸಲೇ ಬೇಕು.