28 ಸಾವಿರ ಕೋಟಿ ವಿದ್ಯುತ್ ಹಗರಣ; ಶೋಭಾ ರಾಜೀನಾಮೆಗೆ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ
ಉಡುಪಿ: ಕರ್ನಾಟಕ ರಾಜ್ಯದಲ್ಲಿ ಮಾನ್ಯ ಯುಡಿಯಾರಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ ಬಿ.ಜೆ.ಪಿ ಪಕ್ಷದ ಪ್ರಭಾವಿ ನಾಯಕಿ ಪ್ರಸ್ತುತ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿರುವ ಶೋಭಾ ಕರಂದ್ಲಾಜೆಯವರು 2010ರಲ್ಲಿ ಕರ್ನಾಟಕ ಸರಕಾರದ ಇಂಧನ ಸಚಿವರಾಗಿ ವಿದ್ಯುತ್ ಖರೀದಿ ಒಪ್ಪಂದಲ್ಲಿ ಭಾರೀ ಬ್ರಷ್ಟಚಾರ ಮಾಡಿ 28 ಸಾವಿರ ಕೋಟಿಯ ಹಗರಣವಾಗಿದೆ ಎಂದು ತನಿಖಾಧಿಕಾರಿಗಳು ಸದನ ಸಮಿತಿಗೆ ವರದಿ ನೀಡಿದ್ದು . ಇದನ್ನು ಸರಕಾರ ತಕ್ಷಣ ಬಹಿರಂಗ ಪಡಿಸಬೇಕು ಸಂಸದರು ಸ್ವಾಭಿಮಾನವಿದ್ದರೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷರಾದ ವಿಶ್ವಾಸ್ ವಿ. ಅಮೀನ್ ಒತ್ತಾಯಿಸಿದ್ದರೆ.
ದಿನನಿತ್ಯ ಮಾಧ್ಯಮಗಳ ಮುಂದೆ ನಿಂತು ಆಧಾರರಹಿತವಾದ ಆರೋಪಗಳನ್ನು ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಸಂಸದರು ಕ್ಷೇತ್ರದ ಜನರ ಪಾಲಿಗೆ ಕಾಣೆಯಾಗಿದ್ದರೆ . ಇದೀಗ ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಒಬ್ಬ ಮಹಿಳಾ ಜನಪ್ರತಿನಿಧಿ ಬಹು ಸಾವಿರ ಕೋಟಿ ಹಗರಣ ಮಾಡಿರುವ ಪ್ರಕರಣ ನಾಚಿಕೆಗೇಡು ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಜಾರಿಯಲ್ಲದ್ದ 25 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದವನ್ನು ಪ್ರತಿ ವರ್ಷ ಟೆಂಡರ್ ಮಾಡುವಂತೆ ಬದಲಾಯಿಸಿ ಉದ್ದಿಮದಾರರಿಗೆ ಸಹಕರಿಸಿದ್ದಲ್ಲದೆ. ಪ್ರತಿ ಯೂನಿಟ್ ವಿದ್ಯುತ್‍ನ್ನು ಸರಕಾರ ರೂ.3.24 ಪೈಸಗೆ ಖರೀದಿಸುತ್ತಿದ್ದು ಇದನ್ನು ರೂ.6.28 ಪೈಸೆಗೆ ಏರಿಸಿ ಜನ ಸಾಮಾನ್ಯರ ಮೇಲೆ ಆರ್ಧಿಕ ಹೊರೆಯೊಂದಿಗೆ ಈ ಬಗ್ಗೆ 28 ಸಾವಿರ ಕೋಟಿ ಹಗರಣವಾಗಿದ್ದು ದೊಡ್ಡ ಮೊತ್ತದ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಸೂಕ್ತ ತನಿಖೆಯಾಗಿ ನಿಜ ಬಣ್ಣ ಬಯಲಾಗಲಿ ಎಂದು ಯುವ ಕಾಂಗ್ರೇಸ್ ರಾಜ್ಯದ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದೆ.
ಜೈಲು- ಸುಗಮವಾಗಲಿ :- ತಮ್ಮ ಗುರು ಮಾಜಿ ಮುಖ್ಯಮಂತ್ರಿ ಯುಡಿಯೂರಪ್ಪನವರು ಭಾರೀ ಭ್ರಷ್ಟಚಾರದಡಿ ಜೈಲು ಪಾಲಾಗಿದ್ದರು. ಇದೀಗ ಅವರ ದಾರಿಯನ್ನೇ ಹಿಡಿದ ತಮ್ಮ ಸಂಸದರ ಪಾಡೇನೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು ಜೈಲು ಇವರಿಗೆ ಸುಗಮವಾಗಲಿ ಎಂದು ಯುವಕಾಂಗ್ರೇಸ್ ಹಾರೈಸುತ್ತಿದೆ.ನಮ್ಮ ಪ್ರಧಾನ ಮಂತ್ರಿಗಳಾದ ಮೋದಿಯವರ ಅಚ್ಚಾದಿನ್ , ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಇವರು ಮಾದರಿ .ಇವರು ಕಾಂಗ್ರೇಸ್ ಮುಕ್ತ -ಭಾರತ ಮಾಡುವ ಮೊದಲು ಜೈಲು ಮುಕ್ತ -ಬಿ.ಜೆ.ಪಿಗರೆಂಬ ಅಂದೋಲನ ಮಾಡಲಿ, ಮೋದಿಯವರು ಸಂಸದೆ ಶೋಭಾರವರ ಮೇಲೆ ಕ್ರಮಕೈಗೊಳ್ಳುವಂತೆ ಯುವ ಕಾಂಗ್ರೇಸ್ ಕಾರ್ಡ್ ಚಳುವಳಿ , ಟ್ವಿಟರ್ ಕ್ಯಾಂಪೇನ್ ಮಾಡುವುದಲ್ಲದೆ ಉಡುಪಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಸಂಸದರ ರಾಜೀನಾಮೆ ಕೋರಿ ಪ್ರತಿಭಟನೆ ನಡೆಸಲಾಗುವುದೆಂದು ವಿಶ್ವಾಸ್ ವಿ. ಅಮೀನ್ ತಿಳಿಸಿದ್ದಾರೆ.