Home Mangalorean News Kannada News ಕರುಣಾಕರ ಹೆಜ್ಮಾಡಿ ಪತ್ರಕ್ಕೆ ಉತ್ತರಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ

ಕರುಣಾಕರ ಹೆಜ್ಮಾಡಿ ಪತ್ರಕ್ಕೆ ಉತ್ತರಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ

Spread the love

ಕರುಣಾಕರ ಹೆಜ್ಮಾಡಿ ಪತ್ರಕ್ಕೆ ಉತ್ತರಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ

ಮುಂಬಯಿ: ಉಪನಗರ ಭಯಂದರ್ ಪೂರ್ವದ ಜೆಸ್ಸಲ್‍ಪಾರ್ಕ್ ಅಲ್ಲಿನ ಹೆಜಮಾಡಿ ಮೊಗವೀರ ಸಭಾದ ಕರುಣಾಕರ ಹೆಜ್ಮಾಡಿ ಅವರು ಪರಿಸರದ ಕಡಲ ಕಿನಾರೆಯತ್ತ ಗಮನಹರಿಸಿ ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕೋರಿ ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು ಅದಕ್ಕೆ ಉತ್ತರವಾಗಿ ಪ್ರಧಾನ ಮಂತ್ರಿ ಸಚಿವಾಲಯದ ಕಾರ್ಯಾಲಯವು ಮಹಾರಾಷ್ಟ್ರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರ ಮುಖೆನ ಕರುಣಾಕರ ಹೆಜ್ಮಾಡಿ ಪತ್ರಕ್ಕೆ ಉತ್ತರಿಸಿದೆ.

karunakara-hejmady-b

ಒಂದು ಕಾಲಕ್ಕೆ ಸೊಬಗಿನ ನಿಸರ್ಗಸೌಂದರ್ಯ ಶುಚಿಯಾದ ಪರಿಸರ ಸ್ವಚ್ಛ ನದಿ ಕಡಲ ತೀರಗಳಿಗೆ ಹೆಸರು ವಾಸಿಯಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಕಲುಷಿತ ವಾತಾವರಣಕ್ಕೆ ಕುಖ್ಯಾತಿ ಪಡೆಯುತ್ತಿರುವುದು ತುಂಬಾ ವಿಷಾದದ ಸಂಗತಿ. ದಕ್ಷಿಣ ಕನ್ನಡ ಜಿಲ್ಲೆಯ ಕಾಡಿನ ಹಸಿರು ಸೂರೆಯಾಗುತ್ತಿದ್ದಂತೆ ನದಿತೀರ ಕಡಲತೀರ ತ್ಯಜ್ಯ ವಸ್ತುಗಳ ಕಣಜಿವಾಗುತ್ತಿರುವುದು ತುಂಬಾ ದುಃಖದ ಸಂಗತಿ. ಕಡಲ ತೀರ ಸ್ವಚ್ಛಗಾಳಿಗೆ, ಮಕ್ಕಳ ಆಟಕ್ಕೆ ಸಮುದ್ರ ಸ್ನಾನಕ್ಕೆ ವಾಯು ವಿಹಾರಕ್ಕೆ ಕಾಲ್ನಡಿಗೆಗೆ ಒಂದು ಕಾಲದಲ್ಲಿ ಪ್ರಶಸ್ತ್ಯ ಸ್ಥಳವಾಗಿತ್ತು. ಶುದ್ಧ ಆಮ್ಲಜನಕ ನೀಡುವ ಪ್ರದೇಶವೆಂದು ಖ್ಯಾತಿಗೊಂಡಿರುವ ಕಡಲ ಕಿನಾರೆ ಇಂದು ದುರ್ನಾಶ ಅಪಾಯಕಾರಿ ವಿಷಪೂರಿತ ವಸ್ತುಗಳಿರುವ ಪ್ರದೇಶವೆಂದು ಅಪಕೀರ್ತಿ ಪಡೆದಿದೆ.

ಕಡಲ ಕಿನಾರೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲ, ನೀರಿನ ಬಾಟಲು, ಗಾಜು ರಬ್ಬರ್ ಅಲ್ಲದೆ ಇತರ ತ್ಯಾಜ್ಯಗಳು ತುಂಬಿ ತುಳುಕುತ್ತದೆ. ಇವುಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಇಲ್ಲ. ಕಡಲ ಕಿನಾರೆಯಲ್ಲಿ ಬೀಡು ಬಿಟ್ಟಿರುವ ತಿಂಡಿ ಅಂಗಡಿಗಳು ತಮ್ಮ ಕಸಗಳನ್ನು ಅಲ್ಲಿಯೇ ಬಿಸಾಡಿ ಪರಿಸರವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಇಲ್ಲ. ಅಂತಾರಾಷ್ಟ್ರೀಯ ಕರಾವಳಿ ಶುಚಿತ್ವದಿಂದ   (ಇಂಟರ್‍ನ್ಯಾಷನಲ್ ಕ್ಲೀನಿಂಗ್‍ಡೇ)ಯನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದರೂ ಅದು ಕೇವಲ ನಾಮ್‍ಕೇ ವಾಸ್ತೆ ಆಚರಿಸಲಾಗುತ್ತದೆ. ಶಾಲಾ ವಿದ್ಯಾಥಿರ್sಗಳಿಂದ ಬಿಸಿಲಲ್ಲಿ ಕಸತೆಗೆಯುವ ಕೆಲಸ ಮಾಡಲಾಗುತ್ತದೆ. ಈ ಬಗ್ಗೆ ಸರಕಾರಿ ವ್ಯವಸ್ಥೆ ಆಸಕ್ತಿ ವಹಿಸದೇ ಇರುವುದು ವಿಷಾದದ ಸಂಗತಿ ಎಂದು ಕರುಣಾಕರ ಹೆಜ್ಮಾಡಿ ತನ್ನ ಮನವಿಯಲ್ಲಿ ಕಳಕಳಿ ವ್ಯಕ್ತಪಡಿಸಿದ್ದರು.

ಕರ್ನಾಟಕದ ಕರಾವಳಿಯಲ್ಲಿ ಬರುವ ಸೋಮೇಶ್ವರ, ಉಳ್ಳಾಲ, ತಣ್ಣಿರುಬಾವಿ, ಪಣಂಬೂರು, ಸುರತ್ಕಲ್, ಕಾಪು, ಮಲ್ಪೆ, ಭಟ್ಕಳ, ಮುರ್ಡೇಶ್ವರ ಉತ್ತರ ಗೋಕರ್ಣ ಬೀಚುಗಳು ಇಂದು ತಮ್ಮ ಆಕರ್ಷಣೆ, ಸೌಂದರ್ಯವನ್ನು ಕಳಕೊಂಡಿದೆ. ಇನ್ನೂ ಮುಂದಾದರೂಪ್ರತಿಯೊಂದು ಗ್ರಾಮದ ಗ್ರಾಮ ಪಂಚಾಯತ್‍ಗಳು ತಮ್ಮ ಪರಿಸರದ ಕಡಲ ಕಿನಾರೆಯತ್ತ ಗಮನಹರಿಸಿ ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದೂ  ಪ್ರಧಾನ ಮಂತ್ರಿ ಮೋದಿ ಅವರಿಗೆ ವಿನಂತಿಸಿದ್ದರು.


Spread the love

Exit mobile version