3ನೇ ವರ್ಷದ ದೀಪಾವಳಿ ಸಂಭ್ರಮಾಚರಣೆಯ ಆಮಂತ್ರಣ ಪತ್ರ ಬಿಡುಗಡೆ

Spread the love

3ನೇ ವರ್ಷದ ದೀಪಾವಳಿ ಸಂಭ್ರಮಾಚರಣೆಯ ಆಮಂತ್ರಣ ಪತ್ರ ಬಿಡುಗಡೆ

ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ 3ನೇ ವರ್ಷದ  ದೀಪಾವಳಿ ಸಂಭ್ರಮಾಚರಣೆಗೆ ಆಮಂತ್ರಣ ಪತ್ರಿಕೆಯನ್ನು ಡಾ| ಕವಿತಾ ಡಿ’ಸೋಜಾ ರವರು ಬಿಡುಗಡೆ ಮಾಡಿದರು.

ಈ  ಕಾರ್ಯಕ್ರಮದ ದಿನಾಂಕ: 06-11-2018ನೇ ಮಂಗಳವಾರ ಮದ್ಯಾಹ್ನ 3:00ರಿಂದ ರಾತ್ರಿ 10ರವರೆಗೆ ನಗರದ ಟೌನ್ ಹಾಲ್‍ನಲ್ಲಿ  ನಡೆಯಲಿರುವುದು. ಭಾಷಣ ಸ್ಪರ್ಧೆ, ಗೂಡುದೀಪ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆಯು ನಡೆಯಲಿದ್ದು, ಸುಮಾರು 500 ಮಂದಿಗೆ  ಅಕ್ಕಿ ವಿತರಣೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಇಂಟಕ್ ಯುವ ಅಧ್ಯಕ್ಷ ಪುನೀತ್ ಶೆಟ್ಟಿ, ಅನಿಲ್ ತೋರಸ್ , ಎನ್.ಪಿ. ಮನರಾಜ್,ಜೆಪ್ಪು, ಮಹೇಶ್ ಕೋಡಿಕಲ್  ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಮಾಜಿ ಕಾರ್ಪೋರೇಟರ್ ಆದ  ಜೆ. ನಾಗೇಂದ್ರ ಕುಮಾರ್ ಸ್ವಾಗತಿಸಿದರು


Spread the love