Home Mangalorean News Kannada News 3 ಗುಂಡಿಗೆಯ ಮೇಲ್ಕೋಣೆಹೊಂದಿದ್ದ ಮಗುವಿನ ಅಪರೂಪದ ಯಶಸ್ವಿ ಚಿಕಿತ್ಸೆ

3 ಗುಂಡಿಗೆಯ ಮೇಲ್ಕೋಣೆಹೊಂದಿದ್ದ ಮಗುವಿನ ಅಪರೂಪದ ಯಶಸ್ವಿ ಚಿಕಿತ್ಸೆ

Spread the love

3 ಗುಂಡಿಗೆಯ ಮೇಲ್ಕೋಣೆಹೊಂದಿದ್ದ ಮಗುವಿನ ಅಪರೂಪದ ಯಶಸ್ವಿ ಚಿಕಿತ್ಸೆ.

ಮಂಗಳೂರು: 2 ವರ್ಷದ ಪಾವನ (ಹೆಸರು ಬದಲಿಸಲಾಗಿದೆ) ಎಂಬ ಅಂಕೋಲದ ಮಗುವು ಆಟವಾಡುವಾಗ ಉಸಿರಾಟದ ತೊಂದರೆಯನ್ನುಅನುಭವಿಸುತ್ತಿತ್ತು. ಮಗುವು ಉಸಿರಾಟದ ಸಮಸ್ಯೆಯಿಂದಾಗಿ ಆಗಾಗ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತಿತ್ತು ಹಾಗೂ ತನ್ನ ವಯಸ್ಸಿನ ಇತರ ಮಕ್ಕಳಿಗಿಂತ ಬಿನ್ನವಾಗಿ ದೀಘಕಾಲಾವದಿಯವರಗೆ ಆಸ್ಪತ್ರೆವಾಸದಲ್ಲಿರುತ್ತಿತ್ತು.

aj-hosp-cardiac--surgery

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಗುವನ್ನು ಪರಶೀಲಿಸಿದ / ಪರೀಕ್ಷಿಸಿದ ಮಕ್ಕಳ ಹೃದ್ರೋಗ ತಜ್ಞರಾದ ಡಾ. ಪ್ರೇಮ್ ಆಳ್ವರವರು ಹೃದಯದ ಸ್ಕ್ಯಾನ್ (ಎಕೋ)ನ ಮೂಲಕ ಈ ಮಗುವಿಗೆ ಇರುವ ತೀರಾ ಅಪರೂಪದ ತೊಂದರೆ ಕೊರ್ಟ್ರಿಯೇಟ್ರಿಟಮ್‍ನ್ನು ಪತ್ತೆಹಚ್ಚಿದರು. ಇದೊಂದು ಹೃದಯದಲ್ಲಿ ಹೆಚ್ಚುವರಿ ಕೋಣೆ ಮತ್ತು ಎರಡು ರಂದ್ರ ಗಳನ್ನೊಳಗೊಂಡ ನ್ಯೂನತೆಯಾಗಿದೆ. ಹೃದಯದಲ್ಲಿ ನಾಲ್ಕು ಕೋಣೆಗಳಿದ್ದು 2 ಮೇಲ್ಕೋಣೆ ಮತ್ತು 2 ಕೆಳಕೋಣೆಗಳೆಂದು ಗುರುತಿಸಲಾಗುತ್ತದೆ. ಆದರೆ ಈ ಮಗುವಿಗೆ ಹೃದಯದಲ್ಲಿ 3 ಮೇಲ್ಕೋಣೆಗಳಿದ್ದು ಎರಡು ರಂದ್ರಗಳಿದ್ದವು. ಈ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಅಗತ್ಯವಿದ್ದು ಶಸ್ತ್ರಚಿಕಿತ್ಸೆಗಾಗಿ ಮಕ್ಕಳ ಹ್ರದ್ರೋಗ ಶಸ್ತ್ರಚಿಕಿತ್ಸಾ ತಜ್ಞರಾದಡಾ. ಗೌರವ್ ಶೆಟ್ಟಿಯವರು ಶಸ್ತ್ರಚಿಕಿತ್ಸೆಯನ್ನು ಕೈಗೆತ್ತಿಕೊಂಡರು.

ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಒಂದು ವಾರದೊಳಗೆ ಆಸ್ಪತ್ರೆಯಂದ ಬಿಡುಗಡೆ ಗೊಳಿಸಲಾಯಿತು. ಮುಖ್ಯ ಅರಿವಳಿಕೆ ತಜ್ಞರಾದಡಾ. ಗುರುರಾಜ್‍ ತಂತ್ರಿಯವರು ಅರಿವಳಿಕೆ ಮತ್ತು ತೀವ್ರ ನಿಘಾ ಘಟಕದ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

ಮಗುವು ಈಗ ಸಂಪೂರ್ಣ ಆರೋಗ್ಯದಿಂದಿದ್ದು ತನ್ನ ಮಿತ್ರರೊಂದಿಗೆ ಮನೆಯಲ್ಲಿ ಆರಾಮವಾಗಿ ಆಟವಾಡುತ್ತಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಸರಕಾರಿ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಮಾಡಲಾಯಿತು.

ಈ ಶಸ್ತ್ರಚಿಕಿತ್ಸೆಯ ಹೆಚ್ಚಿನ ಮಾಹಿತಿಗಾಗಿಡಾ. ಪ್ರೇಮ್ ಆಳ್ವ – 9611125844 ಮತ್ತುಡಾ. ಗೌರವ್ ಶೆಟ್ಟಿ– 9448485279 ಗೆ ಸಂಪರ್ಕಿಸಬಹುದು.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ಮಕ್ಕಳ ಹೃದ್ರೋಗ ವಿಭಾಗವು ನವಜಾತ ಶಿಶುಗಳು, ಶಿಶುಗಳು ಮತ್ತು ಮಕ್ಕಳ ಅನೇಕ ಜನ್ಮತಃ ಹೃದ್ರೋಗ ದೋಷಗಳಿಗೆ ಸರಳ ಮತ್ತು ಸಂಕೀರ್ಣ ರೀತಿಯ ಚಿಕಿತ್ಸೆಯನ್ನು ನೀಡಲು ವಿಶ್ವ ದರ್ಜೆಗೆ ಸಮನಾದ ಸೌಲಭ್ಯಗಳನ್ನು ಹೊಂದಿದೆ. ಈ ವಿಭಾಗವು ಮಕ್ಕಳ ಹೃದ್ರೋಗ ಚಿಕಿತ್ಸೆ, ಮಕ್ಕಳ ಹೃದ್ರೋಗಶಸ್ತ್ರಚಿಕಿತ್ಸೆ, ಮಕ್ಕಳ ಹೃದಯ ಅರಿವಳಿಕೆ, ಮಕ್ಕಳ ಹೃದಯತೀವ್ರ ನಿಗಾ ಘಟಕವನ್ನು ಒಳಗೊಂಡಿದ್ದು ವಿಶೇಷ ಪರಿಣತಿ ಹೊಂದಿರುವ ವೈದ್ಯರು, ದಾದಿಯರು, ಉಸಿರಾಟದ ಚಿಕಿತ್ಸಕರನ್ನು ಒಳಗೊಂಡಿದೆ.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ಸೌಲಭ್ಯಗಳು ಮತ್ತು ಪರಿಣತಿಯ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವ ಸಲುವಾಗಿ ಈ ಪ್ರಕಟಣೆಯನ್ನು ತಮ್ಮ ಪ್ರತಿಷ್ಟಿತ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ವಿನಂತಿ.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರ. ಡಾ. ಪ್ರಶಾಂತ್ ಮಾರ್ಲ ವೈದ್ಯಕೀಯ ನಿರ್ದೇಶಕರು


Spread the love

Exit mobile version