33ನೇ ವಾರದಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ

Spread the love

ರಾಮಕೃಷ್ಣ ಮಿಷನ್ ನೇತೃತ್ವದ 40ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” 33ನೇ ಸ್ವಚ್ಛತಾ ಅಭಿಯಾನವನ್ನು ದಿನಾಂಕ 3-1-2015ರಂದು ನಗರದ ನಂತೂರಿನಲ್ಲಿ ಹಮ್ಮಿಕೊಳ್ಳಲಾಯಿತು. ನಂತೂರ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಠದ ಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ ಹಾಗೂ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಇವರುಗಳ ಉಪಸ್ಥಿತಿಯಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ರಾಧಾಕೃಷ್ಣ ಕೆ ಹಾಗೂ ಆರ್ಟ್‍ಆಫ್ ಲೀವಿಂಗ್ ನ ಶ್ರೀ ಸದಾಶಿವ ಪ್ರಭು ಇವರುಗಳು ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿದರು.

ನಂತೂರ ವೃತ್ತದಲ್ಲಿ ಅಭಿಯಾನಕ್ಕೆ ಚಾಲನೆ ದೊರಕಿದ ಬಳಿಕ ಕಾರ್ಯಕರ್ತರೆಲ್ಲ ಐದು ತಂಡಗಳಾಗಿ ವಿಂಗಡಿಸಿಕೊಂಡು ಸ್ವಚ್ಛತಾ ಕಾರ್ಯಕ್ಕೆ ತೆರಳಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಹಿರಿಯ ಕಾರ್ಯಕರ್ತರು ಮುಖ್ಯ ವೃತ್ತದಲ್ಲಿ ಸ್ವಚ್ಛತೆ ನಡೆಸಿದರು. ಎರಡನೇ ಗುಂಪು ಶ್ರೀ ಸುರೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ರಸ್ತೆಯ ಮತ್ತೊಂದು ಭಾಗದತ್ತ ತೆರಳಿ ಕಾರ್ಯ ಪ್ರಾರಂಭಿಸಿದರು. ಪೂರ್ವ ಪ್ರಾಚಾರ್ಯ ಶ್ರೀ ಸತೀಶ್ ಭಟ್, ಶ್ರೀ ಉಮಾನಾಥ ಕೋಟೆಕಾರ್, ಶ್ರೀ ಮುಖೇಶ್ ಆಳ್ವ ತಲಾ ಒಂದೊಂದು ತಂಡಗಳನ್ನು ಮಾರ್ಗದರ್ಶಿಸಿ ಸ್ವಚ್ಛತೆಯನ್ನು ಕೈಗೊಂಡರು.

ನಂತೂರ ವೃತ್ತದ ಸ್ವಚ್ಛತೆ :ನಿತ್ಯ ಸಾವಿರಾರು ವಾಹನಗಳು ಹಾಗೂ ಅನೇಕ ಜನ ಸಂಚರಿಸುವ, ನಗರದ ಪ್ರವೇಶ ದ್ವಾರದಂತಿರುವ ನಂತೂರ ವೃv ಹುಲ್ಲು ಕಸ ಕಡ್ದಿ ಕೊಳೆ ತುಂಬಿತ್ತು. ಅಲ್ಲಲ್ಲಿ ಮಣ್ಣಿನ ರಾಶಿಯನ್ನೂ ಹಾಕಲಾಗಿತ್ತು. ಮೊದಲಿಗೆ ಹುಲ್ಲುನ್ನು ಕತ್ತರಿಸಲಾಯಿತು ನಂತರ ಸ್ವಚ್ಛತೆ ಮಾಡಿ ಕಸವನ್ನೆಲ್ಲ ತೆಗೆದು ಸ್ವಚ್ಛಗೊಳಿಸಲಾಯಿತು. ಕೊನೆಗೆ ಅಲ್ಲಲ್ಲಿ ರಾಶಿಯಾಗಿದ್ದ ಮಣ್ಣಿನ ರಾಶಿ ಮತ್ತುಕಸವನ್ನು ತೆರವುಗೊಳಿಸಲಾಯಿತು. ಇಂದು ಅದನ್ನು ಜೆಸಿಬಿ ಟಿಪ್ಪರ ಬಳಸಿ ತೆರವುಗೊಳಿಸಲಾಗಿದೆ. ಇದೀಗ ಆ ವೃತ್ತ ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ.

ರಸ್ತೆ ವಿಭಾಜಕಗಳಲ್ಲಿನ ಕಳೆ ತೆರವು: ಹೆದ್ದಾರಿಯಲ್ಲಿರುವ ಬೃಹತ್ ಮೂರು ರಸ್ತೆಯ ವಿಭಾಜಕಗಳನ್ನು ಇಂದು ಸ್ವಚ್ಛಗೊಳಿಸಲಾಯಿತು. ಕಳೆಕೊಚ್ಚುವ ಯಂತ್ರದ ಸಹಾಯದಿಂದ ಹಾಗೂ ರಥಬೀದಿ ಕಾಲೇಜಿನ ವಿದ್ಯಾರ್ಥಿಗಳ ಶ್ರಮದಿಂದ ಅನೇಕ ಸಮಯದಿಂದ ಶೇಖರವಾಗಿದ್ದ ಕಳೆ ಹಾಗೂ ಕಸವನ್ನು ಸಂಪೂರ್ಣವಾಗಿ ತೆಗೆದು ಹಾಕಿ ಶುಚಿಗೊಳಿಸಲಾಗಿದೆ. ಶ್ರೀ ನಿವೇದಿತ ಬಳಗದ ಸದಸ್ಯರು ಮಾರ್ಗದಲ್ಲಿ ಹೋಗುತ್ತಿದ್ದ ದಾರಿಹೋಕರಿಗೆ ಹಾಗೂ ನಂತೂರ ಪರಿಸರದಲ್ಲಿರುವ ಮನೆಮನೆಗೆ ತೆರಳಿ ಸ್ವಚ್ಚ ಪರಿಸರ ಕುರಿತ ಕರಪತ್ರ ಹಂಚಿ ಜಾಗೃತಿ ಮಾಡಿದರು.

ಬಸ್ ತಂಗುದಾಣಕ್ಕೆ ಬಣ್ಣ : ನಂತೂರ ವೃತ್ತದ ಬಳಿಯಿರುವ ಬಸ್ ತಂಗುದಾಣ ಕಸದಿಂದ ತುಂಬಿ ಹೋಗಿತ್ತಲ್ಲದೇ ಅಲ್ಲಲ್ಲಿ ಅಂಟಿಸಿದ್ದ ಭಿತ್ತಿಚಿತ್ರಗಳು ತಂಗುದಾಣದ ಅಂದಗೆಡಿಸಿದ್ದವು. ಮಂಗಳುರು ವಿಶ್ವವಿದ್ಯಾನಿಲಯದ ಡಾ. ಶರತಚಂದ್ರ ಇವರ ಜೊತೆಗೂಡಿ ಇತರೆ ಆರು ಜನ ಸ್ವಯಂಸೇವಕರು ಬಸ್ ತಂಗುದಾಣಕ್ಕೆ ಅಂಟಿಸಲಾಗಿದ್ದ ಪೆÇೀಸ್ಟರ್‍ಗಳನ್ನು ಕಿತ್ತು ಇಡೀ ತಂಗುದಾಣವನ್ನು ನೀರಿನಿಂದ ಶುಚಿಗೊಳಿಸಿದರು. ತದನಂತರ ಬಣ್ಣ ಹಚ್ಚಿ ಅಂದಗೊಳಿಸಿದರು. ಇದೀಗ ಬಸ್ ತಂಗುದಾಣ ಶುಚಿಯಾಗಿ, ಸುಂದರವಾಗಿಕಾಣುತ್ತಿದೆ.
ಅಭಿಯಾನದಕ್ಕೆ ನಮ್ಮೊಂದಿಗೆ :ಆರ್ಟ್ ಆಫ ಲೀವಿಂಗ ಇದರ ಸದಸ್ಯರು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಾಗೇ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರಾದ ಶ್ರೀ ಶೇಷಪ್ಪ ಅಮೀನ ಹಾಗೂ ಶ್ರೀ ಮಹೇಶ್ ಕೆ ಬಿ ಇವರ ಮಾರ್ಗದರ್ಶನದಲ್ಲಿ ಅಭಿಯಾನಕ್ಕೆ ಕೈಜೋಡಿಸಿದರು. ಹಿರಿಯರಾದ ಶ್ರೀ ವಿಠಲದಾಸ್ ಪ್ರಭು, ಶ್ರೀ ಎಂ ಆರ್ ವಾಸುದೇವಡಾ. ಸತೀಶ್‍ರಾವ್, ಶ್ರೀಮತಿ ಕಾತ್ಯಾಯನಿ, ಶ್ರೀ ಶುಭೋದಯ ಆಳ್ವ ಮತ್ತಿತರರು ಭಾಗವಹಿಸಿದ್ದರು. ಅನೇಕ ಪುಟ್ಟ ಪುಟ್ಟ ಮಕ್ಕಳು ಈ ಸಲದ 33ನೇ ಅಭಿಯಾನದಲ್ಲಿ ಭಾಗವಹಿಸಿ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಕೊಡುಗೆ ನೀಡಿದ್ದು ಬಹಳ ವಿಶೇಷವಾಗಿತ್ತು. ಈ ಅಭಿಯಾನಕ್ಕೆ ಎಂಆರ್‍ಪಿಎಲ್ ಸಂಸ್ಥೆ ಧನ ಸಹಾಯ ನೀಡಿ ಪೆÇ್ರೀತ್ಸಾಹಿಸುತ್ತಿದೆ.


Spread the love