36 ಗಂಟೆಗಳ ಕಾಲ ಸಮುದ್ರದಲ್ಲಿ ಸಿಲುಕಿ ವಿಸ್ಮಯಕಾರಿಯಾಗಿ ಬಚಾವಾದ ಮೀನುಗಾರ!
ಮಲ್ಪೆ: ಸತತ 36 ಗಂಟೆಗಳ ಕಾಲ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರೋರ್ವರು ಬದುಕಿ ಬಂದ ಘಟನೆ ವ್ಯಕ್ತಿ ಪಶ್ಚಿಮ ಕರಾವಳಿಯಲ್ಲಿ ಮಂಗಳವಾರ ಸಂಭವಿಸಿದೆ.
ಬದುಕಿ ಬಂದ ಮೀನುಗಾರನನ್ನು ಉಳ್ಳಾಲದ ಹೊಯ್ಗೆ ಬಜಾರ್ ನಿವಾಸಿ ಸುನಿಲ್ ಡಿಸೋಜಾ ಎಂದು ಗುರುತಿಸಲಾಗಿದೆ
ಭಾನುವಾರ ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳುವ ಬೋಟಿನ ಹಿಂಬಾಗಕ್ಕೆ ಕಟ್ಟಿದ ಸಣ್ಣ ದೋಣಿಯಲ್ಲಿ ಸುನಿಲ್ ಡಿಸೋಜ ಕೂಡ ತೆರಳಿದ್ದರು. ಹೀಗೆ ಮೀನುಗಾರಿಕೆಗೆ ತೆರಳಿದ ಬೋಟು ಸಮುದ್ರದ ಮಧ್ಯಭಾಗದಲ್ಲಿ ಬೋಟಿಗೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡ ಪರಿಣಾಮ ಹಿಂದೆಯಿದ್ದ ಸಣ್ಣ ದೋಣಿ ಬೇರೆಯಾದ ಪರಿಣಾಮ ಸುನಿಲ್ ಡಿಸೋಜ ದೋಣಿಯಲ್ಲೇ ಉಳಿದುಹೋಗಿದ್ದರು.
ಸುನೀಲ್ ಡಿಸೋಜಾ ರಕ್ಷಣೆಗೆ ಮುಂದೆ ಹೋಗುತ್ತಿದ್ದ ಬೋಟಿನವರಿಗೆ ಕೇಳಲೇ ಇಲ್ಲ. ಬಿಸಿಲು ಮಳೆ ಲೆಕ್ಕಿಸದೆ ಸಮುದ್ರದ ಮಧ್ಯಭಾಗದಲ್ಲಿ 36ಗಂಟೆಗಳ ಕಾಲ ಸಮಯ ಜೀವ ಉಳಿಸಿಕೊಳ್ಳಲು ಅನ್ನ, ನೀರಿಲ್ಲದೆ ಮಳೆ ನೀರನ್ನೇ ಕುಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮಂಗಳವಾರ ಸಮುದ್ರ ಮಧ್ಯದಲ್ಲಿ ತೇಲುತ್ತಿದ್ದ ದೋಣಿಯಲ್ಲಿ ಸುನೀಲ್ ಅವರನ್ನು ಮಲ್ಪೆ ಮೀನುಗಾರರಿಗೆ ಕಾಣಸಿಕ್ಕಿದ್ದು ಅವರನ್ನು ರಕ್ಷಣೆ ಮಾಡಿ ಮಲ್ಪೆ ಬಂದರಿಗೆ ಕರೆತಂದಿದ್ದಾರೆ.