360 ಮಂದಿ ರಿಕ್ಷಾಚಾಲಕರಿಗೆ ಅಕ್ಕಿ ಮತ್ತು ಅವಶ್ಯ ವಸ್ತುಗಳ ಕಿಟ್ ವಿತರಣೆ
ಮಂಗಳೂರು: ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಸುಮಾರು 360ಕ್ಕೂ ಅಧಿಕ ಆಟೋರಿಕ್ಷಾ ಚಾಲಕರಿಗೆ ಅಕ್ಕಿ ಮತ್ತು ದಿನಸಿ ವಸ್ತುಗಳ ಕಿಟ್ ನ್ನು ಕಂಕನಾಡಿ ಬೈಪಾಸ್ ರಿಕ್ಷಾ ನಿಲ್ದಾಣದ ಜಾಗದಲ್ಲಿ ಶಾಸಕರಾದ ಐವನ್ ಡಿಸೋಜಾ ವಿತರಿಸಿದರು. ರಿಕ್ಷಾ ಚಾಲಕರು 15ದಿನಗಳಲ್ಲಿ ಗಳಿಂದ ತಮ್ಮ ರಿಕ್ಷಾ ಚಲಾವಣೆ ಇಲ್ಲದೇ ಆಹಾರಕ್ಕಾಗಿ ತೊಂದರೆಯನ್ನು ಅನುಭವಿಸುತ್ತಿದ್ದು ಕಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಸರಕಾರದಿಂದ ಮತ್ತು ಕಾರ್ಮಿಕ ಇಲಾಖೆಯಿಂದ ರಿಕ್ಷಾ ಚಾಲಕರಿಗೆ ವಿಶೇಷ ಪ್ಯಾಕೇಜನ್ನು ರಾಜ್ಯ ಸರ್ಕಾರ ಈ ಹಿಂದೆಯೂ ನೀಡಬೇಕೆಂಬ ಬೇಡಿಕೆಯನ್ನು ರಾಜ್ಯದ ಕಾರ್ಮಿಕ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ವಿವರಿಸಲಾಗಿದೆ ನ್ಯಾಯಬೆಲೆ ಅಂಗಡಿಯಲ್ಲಿ ರಿಕ್ಷಾಚಾಲಕರಿಗೆ ಕನಿಷ್ಠ 15 ಕೆಜಿ ಅಕ್ಕಿ ಮತ್ತು ಎರಡು ಕೆಜಿ ತೊಗರಿಬೇಳೆಯನ್ನು ನೀಡಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕಾರ್ಮಿಕ ಸಚಿವರಾದ ಎಂ. ಶಿವರಾಮ್ ಹೆಬ್ಬಾರ್ ಇವರಿಗೆ ಫೋನ್ ಮೂಲಕ ವಿನಂತಿಸಲಾಗಿದೆ. ಇದಕ್ಕೆ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕರಿಗೆ ಅವಶ್ಯಕತೆ ಇದ್ದಲ್ಲಿ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದ್ದಾರೆ.
ದ. ಕ. ಜಿಲ್ಲೆಯಲ್ಲಿ 18,000ಕ್ಕೂ ಅಧಿಕ ರಿಕ್ಷಾಚಾಲಕರಿದ್ದು ಮಂಗಳೂರು ನಗರದಲ್ಲಿ ಸುಮಾರು ಎಂಟು ಸಾವಿರಕ್ಕಿಂತ ಅಧಿಕ ರಿಕ್ಷಾ ಚಾಲಕರಿದ್ದಾರೆ ಎಂದು ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರಾದ ಹಾಗೂ ಶಾಸಕರಾದ ಯುಟಿ ಖಾದರ್ ಮಾತನಾಡಿ ರಿಕ್ಷಾಚಾಲಕರಿಗೆ ಅವಶ್ಯಕ ವಸ್ತುಗಳನ್ನು ನೀಡುವ ಈ ಕಾರ್ಯ ಶಾಸಕರಾದ ಐವನ್ ಡಿ ಸೋಜಾ ಮಾಡಿದ ಕೆಲಸ ಶ್ಲಾಘನೀಯ ಎಂದು. ದುಡಿಯುವ ವರ್ಗಕ್ಕೆ ಆಗಿರುವ ತೊಂದರೆನಿವಾರಿಸಲು ಏಲ್ಲರೂ ಸಹಾಯಮಾಡಬೇಕೆಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಎಂಎಲ್ಸಿ ಹರೀಶ್ ಕುಮಾರ್ ಮಾಜಿ ಶಾಸಕರಾದ ಜೆ ಆರ್ ಲೋಬೋ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ, ಸ್ಥಳೀಯ ಕಾರ್ಪೊರೇಟರ್ ಆದ ನವೀನ್ ಡಿಸೋಜ, ಕೇಶವ ಮರಳಿ, ಅಬ್ದುಲ್ ರವೂಫ್, ಜೆಸಿಂತಾ ವಿಜಯ ಆಲ್ಫ್ರೆಡ್, ಮಾಜಿ ಕಾರ್ಪೊರೇಟರ್ ಗಳಾದ ನಾಗೇಂದ್ರಕುಮಾರ್’ ಸ್ಟೀಫನ್ ಮರಳಿ, ಮೊಂತುಲೋಬು, ಆಲ್ಟ್ಸೇನ್ ಆಭಿಬುಲ್ಲ ಜೇಮ್ಸ್ ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು