3ನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 12ನೇ ವಾರದ ವರದಿ
ಕರಂಗಲಪಾಡಿ: ಶ್ರೀ ಸುಬ್ರಮಣ್ಯ ಸಭಾದ ನೇತೃತ್ವದಲ್ಲಿ ಸುಬ್ರಮಣ್ಯ ಸದನದ ಮುಂಭಾಗ ಹಾಗೂ ಕಾಪುಚಿನ್ ಚರ್ಚ ಮುಂಭಾಗದ ರಸ್ತೆಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಸ್ವಾಮಿ ಜಿತಕಾಮಾನಂದಜಿ ಹಾಗೂ ಕಾಪುಚಿನ್ ಚರ್ಚ ಧರ್ಮ ಗುರುಗಳು ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವಚ್ಛತೆಗೆ ಆದ್ಯತೆ ನೀಡೋಣ ಸ್ವಚ್ಛ ಮಂಗಳೂರಿನ ಕನಸನ್ನು ಸಾಕಾರಗೊಳಿಸುವಂತೆ ಸ್ವಾಮಿ ಜಿತಕಾಮಾನಂದಜಿ ಸಂದೇಶದಲ್ಲಿ ತಿಳಿಸಿದರು. ಕಾಪುಚಿನ್ ಚರ್ಚ್ ಧರ್ಮಗುರುಗಳು ರಾಮಕೃಷ್ಣ ಮಿಷನ್ನಿನ ಕಾರ್ಯವನ್ನು ಶ್ಲಾಘಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಶ್ರೀ ದಿನೇಶ ಹೊಳ್ಳರ ಮಾರ್ಗದರ್ಶನದಲ್ಲಿ ಸುಬ್ರಮಣ್ಯ ಸದನದ ಎದುರಿನ ಆವರಣ ಗೋಡೆಗಳ ಮೇಲೆ ಸ್ವಚ್ಛತೆಯ ಸಂದೇಶವನ್ನು ಸಾರುವ ಅಂದವಾದ ಚಿತ್ರಗಳನ್ನು ಬರೆಸಲಾಗಿದೆ. ರಸ್ತೆಯ ಅಕ್ಕಪಕ್ಕಗಳನ್ನು ಸ್ವಚ್ಛಗೊಳಿಸಲಾಯಿತು. ಶ್ರೀ ಮನೀಶ್‍ರಾವ್, ಮನಪಾ ಸದಸ್ಯ ಶ್ರೀಪ್ರಕಾಶ ಸಾಲ್ಯಾನ್ , ಶ್ರೀರಂಗನಾಥ ಕಿಣಿ ಮುತ್ತಿತರರು ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಿದರು.
151) ಹಂಪಣಕಟ್ಟಾ: ಟೀಂ ಇನ್ಸ್ಪಿರೇಶನ್ ಗೆಳೆಯರಿಂದ ಲೇಡಿಗೋಶನ್ ಆಸ್ಪತ್ರೆಯ ಎದುರಿನ ಮುಖ್ಯ ರಸ್ತೆಯಲ್ಲಿ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪೋಲೀಸ್ ಉಪನಿರೀಕ್ಷಕ ಶ್ರೀ ಮದನ್ ಹಾಗೂ ಪ್ರೋ. ಶೇಷಪ್ಪ ಅಮೀನ್ ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಸಾಹಿಲ್ ಮಾರ್ಗದರ್ಶನದಲ್ಲಿ ಬಸ್ ತಂಗುದಾಣದ ಆವರಣ ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ಕಿತ್ತು ಸ್ವಚ್ಛಗೊಳಿಸಿದರು ನಂತರ ಕಲಾವಿದ ಶ್ರೀ ಗಜೇಂದ್ರ ಮತ್ತು ತಂಡ ಸುಂದರ ಕಲಾಕೃತಿಗಳನ್ನು ರಚಿಸಿದ್ದಾರೆ. ಪೋಲೀಸ್ ಅಧಿಕಾರಿ ಶ್ರೀ ಮದನ್ ಅಭಿಯಾನದುದ್ದಕ್ಕೂ ಯುವಕರನ್ನು ಮಾರ್ಗದರ್ಶಿಸಿಸುತ್ತಿದ್ದುದ್ದು ವಿಶೇಷವಾಗಿತ್ತು. ನಿಖಿಲ್ ಶೆಟ್ಟಿ, ವೆಂಕಟೇಶ್ ಕುಮಾರ್ ಇನ್ನಿತರ ಯುವಕರು ರಸ್ತೆ ಹಾಗೂ ಪುಟ್ಪಾಥ್‍ಗಳನ್ನು ಸ್ವಚ್ಛಗೊಳಿಸಿದರು. ಅಭಿಯಾನದ ಮುಖ್ಯ ಸಂಯೋಜಕ ಶ್ರೀ ಉಮಾನಾಥ್ ಕೋಟೆಕಾರ್ ಉಪಸ್ಥಿತರಿದ್ದರು.
152) ಗಣಪತಿ ಹೈಸ್ಕೂಲ್‍ರಸ್ತೆ: ಗಣಪತಿ ಹೈಸ್ಕೂಲ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಂದ ಜಿಎಚ್‍ಎಸ್ ರೋಡ್ ಹಾಗೂ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಸಾರಸ್ವತ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಎ ಎಸ್ ರಾಮಚಂದ್ರ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಶಿಕ್ಷಕರಾದ ಶ್ರೀಮತಿ ನಮೀತಾ ಹಾಗೂ ಶ್ರೀ ನಾಗರಾಜ್ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು. ಈ ವಾರವೂ ಆವರಣ ಗೋಡೆಯ ವರ್ಲಿಕಲಾಕೃತಿ ಬಿಡಿಸುವುದನ್ನು ಮುಂದುವರೆಸಿದರು. ಶ್ರೀ ಮಹೇಶ್ ಬೊಂಡಾಲ್ ಅಭಿಯಾನದ ಉಸ್ತುವಾರಿ ವಹಿಸಿದ್ದರು.
153) ಗೂಡ್ ಶೆಡ್‍ರಸ್ತೆ: ಶ್ರೀನಿತ್ಯಾನಂದ ಬಳಗದ ಸದಸ್ಯರಿಂದ ನಿರೇಶ್ವಾಲ್ಯ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಶ್ರೀಮಾಧವ ಶೆಟ್ಟಿ ಹಾಗೂ ಶ್ರೀ ನಾರಾಯಣ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀನಿತ್ಯಾನಂದ ಆಶ್ರಮದಿಂದ ನಿರೇಶ್ವಾಲ್ಯ ರಸ್ತೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಯಿತು. ಶ್ರೀಗೋಪಾಲಕೃಷ್ಣ ಕುಂಬ್ಳೆ ಮಾರ್ಗದರ್ಶನದಲ್ಲಿ ಅಲ್ಲಿಯೇ ಹತ್ತಿರವಿದ್ದ ನಾಗಸ್ಥಾನವನ್ನು ಕಸಮುಕ್ತವನ್ನಾಗಿಸಿದರು. ಬೆಳಿಗ್ಗೆ 7:30ರಿಂದ10 ಗಂಟೆಯವರೆಗೆ ಅಭಿಯಾನ ನಡೆಯಿತು.
154)ಮಂಗಳಾದೇವಿ: ನಿವೇದಿತಾ ಬಳಗದಿಂದ ಮಂಗಳಾದೇವಿ ರಸ್ತೆಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ನಡೆಯಿತು. ಶ್ರೀಶರತ್ ಚಂದ್ರ ಡೋಂಗ್ರೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಶ್ರೀಮತಿ ರತ್ನಾ ಆಳ್ವ ಮಾರ್ಗದರ್ಶನದಲ್ಲಿ ಸುಮಾರು 50 ಜನ ಯುವತಿಯರು ಮಂಗಳಾದೇವಿ ರಥಬೀದಿಯಿಂದ ಕಾಸ್ಸಿಯಾ ಪ್ರೌಢಶಾಲೆಯ ವರೆಗೆ ಸ್ವಚ್ಛತೆ ಮಾಡಿದರು. ಜೆಪ್ಪು ಉದ್ಯಾನವನದ ಮುಂಭಾಗ ಕಳೆದ ವಾರ ಪ್ರಾರಂಭಿಸಿದ ರೋಲರ್ ಪೇಂಟಿಗ್ ಕೆಲಸವನ್ನು ವರ್ಣೋಧರಡಾ. ಪ್ರದೀಪ ಪೂರ್ಣಗೊಳಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಸಂಯೋಜಿಸಿದರು.
155)ಜ್ಯೋತಿ: ಟೀಮ್ ಸಿಲ್ವರ್ ಫಾಕ್ಸ್ ವತಿಯಿಂದ ಜ್ಯೋತಿ ವೃತ್ತದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಸದಸ್ಯರು ಜ್ಯೋತಿ ವೃತ್ತ ಸೇರಿದಂತೆ ರಸ್ತೆಯ ನಾಲ್ಕೂ ರಸ್ತೆಗಳಲ್ಲಿ ಸ್ವಚ್ಛತೆಯ ಅಭಿಯಾನ ಕೈಗೊಂಡರು. ಅಲ್ಲದೇ ಹಳತಾದ ಶ್ರಿಶಿವರಾಮ್ ಕಾರಂತ ರಸ್ತೆಯ ಫಲಕವನ್ನು ಬಣ್ಣ ಬಳಿದು ನವೀಕರಿಸಿದರು. ಆಭಿಯಾನದ ಪ್ರಧಾನ ಸಂಯೋಜಕ ದಿಲ್ ರಾಜ್ ಆಳ್ವ, ಮನಪಾ ಸದಸ್ಯ ಶ್ರೀ ಎ ಸಿ ವಿನಯರಾಜ್ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡರು. ಧನುಷ್ಯ ಕಾರ್ಯಕ್ರಮ ಸಂಯೋಜಿಸಿದರು.
156) ಕಲ್ಲಡ್ಕ: ಶ್ರೀರಾಮ್ ವಿದ್ಯಾಕೇಂದ್ರ ಹಾಗೂ ಸ್ವಚ್ಛ ಭಾರತ ನಿರ್ಮಾಣ ಸಂಘದ ಆಶ್ರಯದಲ್ಲಿ ಸ್ವಚ್ಛ ಕಲ್ಲಡ್ಕ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಪ್ರಾಚಾರ್ಯರಾದ ಶ್ರೀಕೃಷ್ಣಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲ್ಲಡ್ಕ ಮುಖ್ಯ ಪೇಟೆಯಲ್ಲಿನ ರಸ್ತೆಯ ಬದಿಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಸುಮಾರು 50ಜನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
12 ನೇ ವಾರದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಇಂದು ಏಳು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಂತರ ಭಾಗವಹಿಸಿದವರಿಗೆಲ್ಲ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಅಭಿಯಾನಕ್ಕೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡುತ್ತಿವೆ.
150 ರಿಂದ156 ರವರೆಗಿನ ಕಾರ್ಯಕ್ರಮಗಳ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಚಮಂಗಳೂರುಅಭಿಯಾನ” ದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.
ಸ್ವಾಮಿಚಿದಂಬರಾನಂದ (ಪ್ರಧಾನ ಸಂಚಾಲಕ)
ಸಂಪರ್ಕ – 9448353162