400 ಮೀ ಓಟ: ಆರೋಕ್ಯ ರಾಜೀವ್, ಪೂವಮ್ಮಗೆ ಚಿನ್ನ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ದಿನದ  ಪುರುಷರ ಹಾಗೂ ಮಹಿಳಾ 400ಮೀ ಓಟದಲ್ಲಿ ಆರ್ಮಿಗೆಯ ಆರೋಕ್ಯ ರಾಜೀವ್ ಹಾಗೂ ಕರ್ನಾಟಕದ ಪೂವಮ್ಮ ಚಿನ್ನ ಗೆದ್ದಿದ್ದಾರೆ.

20150503_4D_bb (2)

ಪುರುಷರ 400ಮೀ ಓಟದ ದ್ವೀತಿಯ ಸ್ಥಾನದಲ್ಲಿ ವಾಯುಪಡೆಯ ವಿ.ಸಾಜಿನ್ ಬೆಳ್ಳಿ ಪಡೆದರೆ, ತೃತೀಯ ಸ್ಥಾನದಲ್ಲಿ ತಮಿಳುನಾಡಿನ ಎ. ದಾರುಣ್ ಕಂಚು ಗೆದ್ದಿದ್ದಾರೆ. ಮಹಿಳೆಯರ 400ಮೀ ಓಟದಲ್ಲಿ ಕೇರಳದ ಅನು ಆರ್ ಬೆಳ್ಳಿ ಗೆದ್ದಿದ್ದು, ಕೇರಳದ ಮತ್ತೋರ್ವ ಕ್ರೀಡಾಪಟು ಟಿಂಟು ಲೂಕ ಕಂಚು ಪಡೆದಿದ್ದಾರೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪೂವಮ್ಮ, ಫೆಡರೇಶನ್ ಕಪ್ ಗುರಿಯಾಗಿರಲಿಲ್ಲ, ಓಲಿಪಿಕ್ಸ್ಗಾಗಿ ತಯಾರಿ ಮಾಡುತ್ತಿದ್ದೇನೆ. ಇಲ್ಲಿನ ಹವಾಮಾನ ಕ್ರೀಡಾ ತಯಾರಿಗೆ ಪೂರಕವಾಗಿರಲಿಲ್ಲ. ಹಾಗಾಗಿ ಸರಿಯಾಗಿ ತಯಾರಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ಫೋಟೊಗಳಿಗೆ ಇಲ್ಲಿ ಕ್ಲಿಕ್ ಮಾಡಿ 


Spread the love