5 ಕುಖ್ಯಾತ ಆರೋಪಿಗಳ ಸೆರೆ, ಮಾದಕ ವಸ್ತು,  22 ಮದ್ದುಗುಂಡು ಮತ್ತು 2 ಪಿಸ್ತೂಲ್ ವಶ

Spread the love

5 ಕುಖ್ಯಾತ ಆರೋಪಿಗಳ ಸೆರೆ ಮಾದಕ ವಸ್ತು,  22 ಮದ್ದುಗುಂಡು ಮತ್ತು 2 ಪಿಸ್ತೂಲ್ ವಶ

 

ಮಂಗಳೂರು ನಗರದಲ್ಲಿ ಮಾದಕ ವಸ್ತು MDMA Crystal ಹಾಗೂ 2 ಪಿಸ್ತೂಲ್ ಮತ್ತು 22 ಮದ್ದುಗುಂಡು ಸಮೇತ 5 ಕುಖ್ಯಾತ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಮಂ. ದಕ್ಷಿಣ ರೌಡಿ ನಿಗ್ರಹದ ದಳದ  ಪೊಲೀಸರು ಯಶಸ್ವಿಯಾಗಿರುತ್ತಾರೆ.

ದಿನಾಂಕ 21-08-2018 ರಂದು ಮಧ್ಯಾಹ್ನ 12-00 ಗಂಟೆಗೆ ಮಂಗಳೂರು ದಕ್ಷಿಣ ಉಪ ವಿಭಾಗ ಮತ್ತು ದಕ್ಷಿಣ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರು, ತನ್ನ ರೌಡಿ ನಿಗ್ರಹ ದಳದ  ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿದ್ದ ಸಮಯ, ಮಾದಕ ವಸ್ತುಗಳನ್ನು  ಗಿರಾಕಿಗಳಿಗೆ ಮಾರಾಟ ಮಾಡುವ ಸಲುವಾಗಿ ಕೆಎಲ್-14-ವಿ-636 ನಂಬ್ರದ ವಾಹನದಲ್ಲಿ ಮಂಗಳೂರು ಕಡೆಯಿಂದ ಗುರುಪುರ ಬ್ರಿಡ್ಜ್ ನ ಕಡೆಗೆ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಬಂದಂತೆ ಸದ್ರಿ ಕಾರನ್ನು ಪರಾರಿ ಜಂಕ್ಷನ್ ಬಳಿ ತಡೆದು ಚೆಕ್ ಮಾಡಲಾಗಿ ಅದರಲ್ಲಿದ್ದ 5 ಜನರನ್ನು ವಶಕ್ಕೆ ಪಡೆದು   ಅವರಿಂದ ಮಾದಕವಸ್ತು, ಸಾಗಾಟಕ್ಕಾಗಿ ಉಪಯೋಗಿಸಿದ್ದ ಬಲೆನೋ ಕಾರು-1 ಇದರ ಬೆಲೆ ಸುಮಾರು ರೂ 7,00,000/-,  ಗಾಂಜಾದಿಂದ ತಯಾರಿಸಿದ ಉಂಡೆ-11 ಇದರ ಬೆಲೆ ಸುಮಾರು ರೂ 5,500/-, ಮಾದಕ ವಸ್ತು ಒಆಒಂ ಅಡಿಥಿsಣಚಿಟ -100 ಗ್ರಾಂ ಇದರ ಬೆಲೆ  ಸುಮಾರು ರೂ 1,80,000/- ಪಿಸ್ತೂಲ್ -2, ಮದ್ದುಗುಂಡುಗಳು-22 ಇದರ ಬೆಲೆ ಸುಮಾರು ರೂ. 1,15,000/-, ಮೊಬೈಲ್ ಪೋನ್ ಗಳು-11 ಇದರ ಬೆಲೆ  ಸುಮಾರು ರೂ. 81,000/- ಮತ್ತು ನಗದು ಹಣ ರೂ, 63,690/- ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ, 11,45,190/-. ಅಗಿರುತ್ತದೆ.

ಆರೋಪಿಯ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ, ಸದ್ರಿಯವರು ಮುಂಬಯಿಯಿಂದ ತಂದು ಕೇರಳದಲ್ಲಿ ಮತ್ತು ಇತರ ಕಡೆಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಆರೋಪಿಗಳ ವಿವರ:

ಟಿ.ಎಚ್.ರಿಯಾಜ್ (38) ತಂದೆ: ಹಸೈನಾರ್, ವಾಸ: ಪೆರಿಯತಡ್ಕ ಪನಿಯಾಲ, ಹೊಸದುರ್ಗಾ ಕಾಸರಗೋಡು, ಹಾಲಿ ವಾಸ: ಮುಟ್ಟಿಂಜೆ ಮನೆ, ಇನ್ನೋಳಿ, ಪಾವೂರು ಅಂಚೆ,  ಉಸ್ಮಾನ್ ರಫೀಕ್ @ ತಲ್ಕಿ ರಫೀಕ್ (29), ತಂದೆ: ಅಬೂಬಕ್ಕರ್, ವಾಸ: ಮೆದು ಮನೆ, ಸಾಲೆತ್ತೂರು ಅಂಚೆ, ಬಂಟ್ವಾಳ ತಾಲೂಕು, ಅಬ್ದುಲ್ ರವೂಪ್ ವಿ.ಎಸ್ (30) ದಿ: ಸಿದ್ಧಿಕ್ ವಿ.ಎಸ್ ವಾಸ: ಕಲಂದರ್ ಮಂಝಿಲ್, ಪತ್ವಾಡಿ ಮನೆ, ಮುಳಿಂಜ, ಉಪ್ಪಳ, ಕಾಸರಗೋಡು ಜಿಲ್ಲೆ,  ಇಮ್ತಿಯಾಜ್ ಅಹಮ್ಮದ್ (40) ತಂದೆ: ಮಹಮ್ಮದ್ ವಾಸ: ಸಬ್ ಜಾನ್ ಮೆನ್ಸನ್, ಹಿದಾಯತ್ ನಗರ ಉಪ್ಪಳ ಅಂಚೆ, ಕಾಸರಗೋಡು ಜಿಲ್ಲೆ   ಮತ್ತು   ಹಜ್ವರ್ (30) ತಂದೆ: ಮಹಮ್ಮದ್ ಆಲಿ, ವಾಸ: ಜೋಗಿ ಮಠ ರಸ್ತೆ, ವಿಟ್ಲ, ಬಂಟ್ವಾಳ ತಾಲೂಕು

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿತನಾದ ಟಿ.ಎಚ್.ರಿಯಾಜ್ ಎಂಬವನು ಕೇರಳ ರಾಜ್ಯದಲ್ಲಿ ಕುಖ್ಯಾತ ಆರೋಪಿತನಾಗಿದ್ದು, ಈತನ ವಿರುದ್ದ ಸುಮಾರು 40 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದು ಬಂದಿದೆ ಮತ್ತು ಈತನು ಮುಂಬಯಿಯಿಂದ ಮಾದಕ ವಸ್ತುವನ್ನು ತಂದು ಮಾರಾಟ ಮಾಡುವ ಪ್ರಮುಖ ಆರೋಪಿಯಾಗಿರುತ್ತಾನೆ.ಈತನ ಮೇಲೆ ಕೇರಳದ ಪಯಂಗಡಿ ಮತ್ತು ಬೇಕಲ ಠಾಣೆಗಳಲ್ಲಿ ವಾರಂಟು ಇರುತ್ತದೆ.

2 ನೇ ಆರೋಪಿಯಾದ ಉಸ್ಮಾನ್ ರಫೀಕ್ @ ತಲ್ಕಿ ರಫೀಕ್ ಸಹ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಸುಮಾರು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಕೇರಳದ ಮಂಜೇಶ್ವರ ಠಾಣೆಯಲ್ಲಿ ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ ಮತ್ತು ಈತನ ಮೇಲೆ ಬೆಂಗಳೂರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಸುಮಾರು 4 ತಿಂಗಳ ಹಿಂದೆ ಅನಧಿಕೃತ ಪಿಸ್ತೂಲ್ ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದು, ಇದೀಗ ಮತ್ತೊಂದು ಅನಧಿಕೃತ ಪಿಸ್ತೂಲ್ ಹಾಗೂ ಮದ್ದುಗುಂಡು ತುಂಬಿರುವ 2 ಮ್ಯಾಗ್ಸಿನ್ ಗಳನ್ನು ವಶಪಡಿಸಿಕೊಂಡಿರುವುದಾಗಿದೆ.

3 ನೇ ಆರೋಪಿಯಾದ ಅಬ್ದುಲ್ ರವೂಪ್ ವಿ.ಎಸ್ ಈತನ ವಶದಿಂದ ಒಂದು ನಾಡ ಪಿಸ್ತೂಲ್  ನ್ನು ವಶಪಡಿಸಿಕೊಳ್ಳಲಾಗಿದೆ. ಈತನು ಟಿ.ಹೆಚ್ ರಿಯಾಜ್ ನ ಮಾದಕ ವಸ್ತು ಮಾರಾಟ ಜಾಲದ ವ್ಯವಹಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾನೆ.

4 ನೇ ಆರೋಪಿ ಇಮ್ತಿಯಾಜ್ ಅಹಮ್ಮದ್  ಈತನ ವಿರುದ್ಧ ಕೇರಳ  ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿರುತ್ತದೆ. ಈತನೂ ಕೂಡಾ ಟಿ.ಹೆಚ್ ರಿಯಾಜ್ ನ ಮಾದಕ ವಸ್ತು ಮಾರಾಟ ಜಾಲದ ವ್ಯವಹಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾನೆ.

5 ನೇ ಆರೋಪಿ ಹಜ್ವರ್ ಈತನು ಉಸ್ಮಾನ್ ರಫೀಕ್ @ ತಲ್ಕಿ ರಫೀಕ್ ನ ಸಹಚರನಾಗಿರುತ್ತಾನೆ.

5 ಜನ ಆರೋಪಿಗಳನ್ನು ಮತ್ತು ಸ್ವಾಧೀನಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್‌.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಶ್ರೀ ಹನುಮಂತರಾಯ, ಐ.ಪಿ.ಎಸ್‌ ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಉಮಾಪ್ರಶಾಂತ್‌ (ಡಿಸಿಪಿ. ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ  ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಶ್ರೀ ಕೆ.ರಾಮರಾವ್ ರವರ ನಿರ್ದೇಶನದಂತೆ ಮಂಗಳೂರು  ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್.ಹೆಚ್ ಬಜಂತ್ರಿ, ಮಂಗಳೂರು ದಕ್ಷಿಣ ಉಪ-ವಿಭಾಗದ ರೌಡಿ ನಿಗ್ರಹ ದಳದ  ಸಿಬ್ಬಂದಿಗಳಾದ ಎ.ಎಸ್.ಐ. ಮೋಹನ್‌ ಕೆ.ವಿ, ರಂಜನ್ ಎಮ್.ಕೆ, ರಾಜಾರಾಮ ಕೂಟತ್ತಜೆ, ಮೊಹಮ್ಮದ್ ಶರೀಫ್‌, ರವಿಚಂದ್ರ, ಸುನಿಲ್ ಕುಮಾರ್, ದಾಮೋದರ, ಸುಧೀರ್ ಶೆಟ್ಟಿ, ಗಿರೀಶ್ ಸುವರ್ಣ, ದಯಾನಂದ, ರೆಜಿ ವಿ.ಎಮ್, ಮಹೇಶ್ ರವರುಗಳು  ಸಹಕರಿಸಿರುತ್ತಾರೆ.


Spread the love