5 ಕೋಟಿ ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಗೆ ಪೂರ್ಣ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ನಗರದಲ್ಲಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ 5 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು ಇದನ್ನು ಕೂಡಲೇ ಉದ್ಘಾಟಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು.
ಅವರು ಕದ್ರಿಯಲಿರುವ ಶಾಸಕರ ಕಚೇರಿಯಲ್ಲಿ ಮೆಸ್ಕಾಂ ಸಲಹಾ ಸಮಿತಿ ಸಭೆಯನ್ನುದ್ದೇಸಿ ಮಾತನಾಡುತ್ತಿದ್ದರು. ಕೇಬಲ ಅಳವಡಿ ಕಂಕನಾಡಿ ಕರಾವಳಿ ಸರ್ಕಲ್ ನಿಂದ ಸ್ಟೇಟ್ ಬ್ಯಾಂಕ್ ವರಗೆ ಪೂರ್ಣಗೊಂಡಿದೆ. ಅಲ್ಲಲ್ಲಿ ಇಂಟರ್ ಲಾಕ್ ಅಳವಡಿಗೆ ಹಾಗೂ ಬಿಟ್ಟಿರುವ ಸಣ್ಣ ಸಣ್ಣ ಕೆಲಸಗಳನ್ನು ಮುಗಿಸುವಂತೆ ಸೂಚಿಸಿದರು.
ಉರ್ವಾಮಾರ್ಕೇಟ್ ನಲ್ಲಿ 33 ಕೆವಿ ವಿದ್ಯುತ್ ಸೆಂಟರ್ ಗೆ ಸ್ಥಳವನ್ನು ಬಿಟ್ಟುಕೊಡುವಂತೆ ಹೇಳಿದ ಶಾಸಕ ಜೆ.ಆರ್.ಲೋಬೊ ಅವರು ನೆಹರೂ ಮೈದಾನದಲ್ಲೂ ಸ್ಥಳಾವಕಾಶ ಒದಗಿಸುವಂತೆ ಹಾಗೂ ಆ ಕಾಮಗಾರಿಯನ್ನು ಕೂಡಲೇ ಕೈಗೊಳ್ಳುವಂತೆಯೂ ಸೂಚಿಸಿದರು.
ಜೆಪ್ಪಿನಮೊಗರು ಉಪಕೇಂದ್ರ ನಿರ್ಮಿಸುವ ಬಗ್ಗೆಯೂ ಸಮಾಲೋಚಿಸಿದರು. ಮೆಸ್ಕಾಂ ಸಮಸ್ಯೆಗಳ ಬಗ್ಗೆ ಅವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಸಮಾಲೋಚಿಸಿದರು.
ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ದಾರಿ ದೀಪ ಅಳವಡಿಸುವಂತೆ ಸೂಚಿಸಿದ ಶಾಸಕ ಜೆ.ಆರ್.ಲೋಬೊ ಅವರು ಮೆಸ್ಕಾಂ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ತಮ್ಮ ಗಮನಕ್ಕೆ ತಂದು ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಕೆಲಸ ಮಾಡುವಂತೆಯೂ ಹೇಳಿದರು.
ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜಪ್ಪ , ಸುನಿಲ್ ಮೊಂತೇರೊ, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ಮೋಹನ್ ಮೆಂಡನ್ , ದುರ್ಗಾ ಪ್ರಸಾದ್, ಕಮಲಾಕ್ಷ ಕುಂದರ್, ವಿಜಯಾ ಲಕ್ಷ್ಮಿ, ಎಲಿಜಬೆತ್,ರು ಹಾಗೂ ಮಂಗಳ್ರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಮೆಸ್ಕಾಂ ಜೆಇ ಅಧಿಕಾರಿಗಳು ಉಪಸ್ಥಿತರಿದ್ದರು.