Home Mangalorean News Kannada News 5 ನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಥಮ ಭಾನುವಾರದ ಶ್ರಮದಾನಕ್ಕೆ ಚಾಲನೆ

5 ನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಥಮ ಭಾನುವಾರದ ಶ್ರಮದಾನಕ್ಕೆ ಚಾಲನೆ

Spread the love

5 ನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಥಮ ಭಾನುವಾರದ ಶ್ರಮದಾನಕ್ಕೆ ಚಾಲನೆ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾದ ಸ್ವಚ್ಛ ಮಂಗಳೂರು ಪ್ರಥಮ ಶ್ರಮದಾನಕ್ಕೆ 9 ದಶಂಬರ 2018 ರಂದು ಬೆಳಿಗ್ಗೆ 7-30 ಮಾರ್ನಮಿಕಟ್ಟೆ-ನಂದಿಗುಡ್ಡೆಯಲ್ಲಿ ಚಾಲನೆ ಕೊಡಲಾಯಿತು. ವೇದಘೋಷದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಮಿಷನ್ ಸಂಯೋಜಕರಾದ ಶ್ರೀಮತಿ ಮಂಜುಳಾ ಹಾಗೂ ಪೂರ್ವ ಶಾಸಕರಾದ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಜಂಟಿಯಾಗಿ ಪ್ರಥಮ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಶುಭಾರಂಭಗೊಳಿಸಿದರು. ಸ್ವಾಮಿ ಏಕಗಮ್ಯಾನಂದಜಿ, ಡಾ. ರಾಜೇಂದ್ರ ಪ್ರಸಾದ್, ಮೋಹನ್ ಕೊಟ್ಟಾರಿ, ಮಹ್ಮದ್ ಶಮೀಮ್ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ವಚ್ಛತೆ: ಅಭಿಯಾನದ ಪ್ರಧಾನ ಸಂಯೋಜಕ ದಿಲ್‍ರಾಜ್ ಆಳ್ವ ನೇತೃತ್ವದಲ್ಲಿ ಕಾರ್ಯಕರ್ತರು ಆರು ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಚ್ಛತಾ ಕಾರ್ಯ ನಡೆಸಿದರು. ನಂದಿಗುಡ್ಡೆ ಹಾಗೂ ಮಾರ್ನಮಿಕಟ್ಟೆಯ ನಡುವಿನ ರಸ್ತೆಯ ಅಕ್ಕಪಕ್ಕಗಳಲ್ಲಿ ಕಲ್ಲು ಮಣ್ಣುಗಳ ಅನೇಕ ರಾಶಿಗಳು ಬಿದ್ದುಕೊಂಡಿದ್ದವು. ಇಂದು ಅವುಗಳನ್ನು ಜೆಸಿಬಿ ಹಾಗೂ ಟಿಪ್ಪರ್‍ಗಳನ್ನು ಬಳಸಿಕೊಂಡು ತೆರವುಗೊಳಿಸಲಾಯಿತು. ನಿಟ್ಟೆ ಫಿಸಿಯೋಥೆರಫಿ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಂಶುಪಾ¯ರಾದ ಡಾ.ಧನೇಶ್ ಕುಮಾರ್, ವಿಠಲದಾಸ ಪ್ರಭು ಹಾಗೂ ಕೋಡಂಗೆ ಬಾಲಕೃಷ್ಣ ನಾೈಕ್ ಇವರುಗಳ ಮಾರ್ಗದರ್ಶನದಂತೆ ನಂದಿಗುಡ್ಡೆ ಪರಿಸರದಲ್ಲಿ ಶ್ರಮದಾನ ಮಾಡಿದರು. ಮಾರ್ನಮಿಕಟ್ಟೆ ರಸ್ತೆಯ ಬದಿಯಲ್ಲಿ ಕಳೆ ಕೊಚ್ಚುವ ಯಂತ್ರದ ಸಹಾಯದಿಂದ ಹುಲ್ಲನ್ನು ತೆಗೆದು ಹಸನು ಮಾಡಲಾಯಿತು. ಜೊತೆಗೆ ನಂದಿಗುಡ್ಡೆಯಲ್ಲಿರುವ ಮೈದಾನಕ್ಕೆ ಸಾಗುವ ದಾರಿಯಲ್ಲಿದ್ದ ಪ್ಲಾಸ್ಟಿಕ್ ಪೇಪರ್ ಹಾಗೂ ಮಣ್ಣಿನಿಂದ ಆವೃತವಾಗಿದ್ದ ಮೆಟ್ಟಿಲುಗಳನ್ನು ಸ್ವಯಂಸೇವಕರಾದ ದೀಕ್ಷಿತ್, ದೀಪಿಕಾ ಆಳ್ವ, ಸುಮಾ ಕೋಡಿಕಲ್ ಇನ್ನಿತರರು ಶುಚಿಗೊಳಿಸಿದರು. ನಂದಿಗುಡ್ಡೆ ವೃತ್ತದ ಬಳಿಯ ತೋಡುಗಳಲ್ಲಿದ್ದ ಕಸವನ್ನು ನಿವೇದಿತಾ ಬಳಗದ ಸದಸ್ಯರು ತೆಗೆದು ಸ್ವಚ್ಛ ಮಾಡಿದರು.

ತಂಗುದಾಣUಳ ಸ್ವಚ್ಛತೆ: ಮೊದಲಿಗೆ ನಂದಿಗುಡ್ಡೆ ಹಾಗೂ ಜೆಪ್ಪುನಲ್ಲಿರುವ ಎರಡು ತಂಗುದಾಣಗಳ ಸುತ್ತಮುತ್ತ ಕಸಗುಡಿಸಿ ಸ್ವಚ್ಛ ಗೊಳಿಸಲಾಯಿತು. ತದನಂತರ ಬಲೆ ತೆಗೆದು ಶುಚಿಗೊಳಿಸಿ, ನೀರಿನಿಂದ ತೊಳೆಯಲಾಯಿತು. ಬಳಿಕ ಬಣ್ಣ ಹಚ್ಚಿ ತಂಗುದಾಣಗಳು ಕಂಗೊಳಿಸುವಂತೆ ಮಾಡಲಾಯಿತು. ಸುಧೀರ್ ನರೋಹ್ನಾ, ಅವಿನಾಶ್ ಅಂಚನ್ ಹಾಗೂ ವಿಖ್ಯಾತ್ ಮತ್ತಿತರ ಕಾರ್ಯಕರ್ತರು ತಂಗುದಾಣಗಳ ಸ್ವಚ್ಛತಾ ಕಾರ್ಯ ಕೈಗೊಂಡರು.

ಬ್ಯಾನರ್-ಪೆÇೀಸ್ಟರ್ ತೆರವು: ಮಂಗಳೂರಿನ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಪೆÇೀಸ್ಟರ್-ಬ್ಯಾನರ್‍ಗಳನ್ನು ಇಂದು ತೆರವುಗೊಳಿಸಲಾಯಿತು. ಉದಯ್ ಕೆ ಪಿ, ಯೋಗಿಶ್ ಕಾಯರ್ತಡ್ಕ ಹಾಗೂ ಕಾರ್ಯಕರ್ತರು ನಗರದ ಅಲ್ಲಲ್ಲಿ ಹಾಕಲಾಗಿದ್ದ ಸುಮಾರು ಇನ್ನೂರಕ್ಕೂ ಅಧಿಕ ಅನಧಿಕೃತ ಬ್ಯಾನರ್‍ಗಳನ್ನು ತೆಗೆದು ಹಾಕಿದರು. ಅನಧಿಕೃತ ಬ್ಯಾನರ್ ಅಳವಡಿಸುವವರಿಗೆ ಕರೆ ಮಾಡಿ ಎಲ್ಲೆಂದರಲ್ಲಿ ಹಾಕದಂತೆ ವಿನಂತಿಸಲಾಯಿತು.

ಬೆಳಿಗ್ಗೆ 7:30 ರಿಂದ 10 ಗಂಟೆಯ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾಪೆರ್Çೀರೆಶನ್ ಬ್ಯಾಂಕ್ ಡಿ.ಜಿ.ಎಂ ಶ್ರೀ ರವಿಶಂಕರ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ ವಿ, ಸುಜಿತ್ ಭಂಡಾರಿ, ಹಾಗೂ ಹಿಂದೂ ವಾರಿಯರ್ಸ್ ತಂಡದ ಸದಸ್ಯರು ಸೇರಿದಂತೆ ಅನೇಕರು ಪ್ರಥಮ ಶ್ರಮದಾನದಲ್ಲಿ ಕೈಜೋಡಿಸಿದರು. ಈ ಅಭಿಯಾನಗಳಿಗೆ ಎಂಆರ್‍ಪಿಎಲ್ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ

ಸ್ವಚ್ಛ ಸುರತ್ಕಲ್ : ರಾಮಕೃಷ್ಣ ಮಿಷನ್ ಹಾಗೂ ನಾಗರಿಕ ಸಲಹಾ ಸಮಿತಿ ಸುರತ್ಕಲ್ ಜಂಟಿ ಸಹಯೋಗದಲ್ಲಿ 8ನೇ ವಾರದ ಸ್ವಚ್ಛ ಸುರತ್ಕಲ್ ಅಭಿಯಾನ 9-12-18 ರಂದು ಇಡ್ಯಾ ಪರಿಸರದಲ್ಲಿ ನಡೆಯಿತು. ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಡಾ. ಟಿ ಆರ್ ಶೆಟ್ಟಿ ಈ ವಾರದ ಶ್ರಮದಾನಕ್ಕೆ ಚಾಲನೆ ನೀಡಿದರು. ಇಡ್ಯಾ ಪಶ್ಚಿಮ ಭಾಗ, ನಾರಾಯಣ ಗುರು ಮಂದಿರ, ಕಿಲೇರಿಯಾ ಮಸೀದಿ ಹಾಗೂ ಶಾಲಾ ಆವರಣದಲ್ಲಿ ಸ್ವಚ್ಛತಾ ಕೈಂಕರ್ಯ ಜರುಗಿತು. ಮನಪಾ ಸದಸ್ಯ ಶ್ರೀ ಅಶೋಕ ಶೆಟ್ಟಿ, ಜೆ ಡಿ ವೀರಪ್ಪ, ಸ್ವಚ್ಛ ಸುರತ್ಕಲ್ ಅಭಿಯಾನದ ಸಂಚಾಲಕ ಪೆÇ್ರ. ರಾಜಮೋಹನ್ ರಾವ್, ಸಂಯೋಜಕ ಸತೀಶ ಸದಾನಂದ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾದರು. ಕುಳಾಯಿ ನಾಗರಿಕ ಸಲಹಾ ಸಮಿತಿ, ಬದ್ರಿಯಾ ಹೆಲ್ತ್ ಲೀಗ್, ಇಡ್ಯಾ ಸ್ಪೊರ್ಟ್ಸ್ ಕ್ಲಬ್, ಕರ್ನಾಟಕ ರಾಜ್ಯ ಟೈಲರ್ ಅಸೋಶಿಯೇಶನ್, ಸುರತ್ಕಲ್ ಕಾರು ಚಾಲಕ ಮಾಲಕರ ಸಂಘ, ಶಿಕ್ಷಕ ರಕ್ಷಕ ಸಂಘ, ಸುರತ್ಕಲ್ ಕ್ರಿಕೆಟ್ ಅಕಾಡಮಿ, ರೋಟರಿ ಕ್ಲಬ್ ಬೈಕಂಪಾಡಿ, ಗಣೇಶೋತ್ಸವ ಸಮಿತಿ ಕುಳಾಯಿ ಇತ್ಯಾದಿ 20 ಕ್ಕೂ ಮಿಕ್ಕಿ ಸಂಘಸಂಸ್ಥೆಗಳ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.

ಸ್ವಚ್ಛ ಪುತ್ತೂರು: ರಾಮಕೃಷ್ಣ ಮಿಷನ್ ಸ್ವಚ್ಛ ಪುತ್ತೂರು ತಂಡದಿಂದ 9-12-18 ರಂದು ಬೆಳಿಗ್ಗೆ ಮೂರನೇ ಹಂತದ ಅಭಿಯಾನವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶುಭಾರಂಭಗೊಳಿಸಲಾಯಿತು. ಪುತ್ತೂರು ನಗರಸಭಾ ಸದಸ್ಯ ಜಗನ್ನಿವಾಸ ರಾವ್ ಹಾಗೂ ಈಶ ಶಿಕ್ಷಣ ಸಂಸ್ಥೆಯ ಶ್ರೀ ಗೋಪಾಲಕೃಷ್ಣ ಇವರುಗಳು ಅಭಿಯಾನಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ನಂತರ ಶ್ರೀ ಮಹಾಲಿಂಗೇಶ್ವರ ರಥಬೀದಿಯಲ್ಲಿರುವ ಶಿವನ ಬೃಹತ್ ಮೂರ್ತಿಯ ಸುತ್ತಮುತ್ತ ಸ್ವಚ್ಛತಾ ಶ್ರಮದಾನ ಜರುಗಿತು. ಸ್ವಚ್ಛ ಪುತ್ತೂರು ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ, ಸಂಯೋಜಕ ಕೃಷ್ಣಾ ಜಿ. ನರೇಂದ್ರ ಪಿಯು ಕಾಲೇಜಿನ ಪ್ರಾಚಾರ್ಯೆ ಹರಿಣಿ ಪುತ್ತೂರಾಯ, ವಿನೋದ ಆಚಾರ್ಯ, ಸಂದೀಪ್ ಲೋಬೊ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ಸಂಪರ್ಕ – 9448353162 (ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿüಯಾನ)


Spread the love

Exit mobile version