Home Mangalorean News Kannada News 5000ಮೀ ಓಟದಲ್ಲಿ ಚಿನ್ನ ಗೆದ್ದ ತಮಿಳುನಾಡಿನ ಸೋರಿಯಾ

5000ಮೀ ಓಟದಲ್ಲಿ ಚಿನ್ನ ಗೆದ್ದ ತಮಿಳುನಾಡಿನ ಸೋರಿಯಾ

Spread the love
RedditLinkedinYoutubeEmailFacebook MessengerTelegramWhatsapp

ಮಂಗಳೂರು: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟೀಯ ಮಟ್ಟದ 19ನೇ ಫೇಡರೇಶನ್ ಕಪ್ ಮೊದಲ ಪಂದ್ಯಾಟ 5000ಮೀ ಓಟದಲ್ಲಿ ತಮಿಳುನಾಡಿನ ಹುಡುಗಿ ಸೋರಿಯಾ ಚಿನ್ನ ಗೆದ್ದಿದ್ದಾರೆ.

federation_e1_20150501-009

federation_e2_20150501-003

ಈ ಸಂದರ್ಭ ಮಂಗಳೂರಿಯನ್.ಕಾಂ ಜತೆ ಅಭಿಪ್ರಾಯ ಹಂಚಿಕೊಂಡ ತಮಿಳುನಾಡಿನ ಸೋರಿಯಾ, ನನ್ನದೇ ಹಳೆಯ ಓಟದ ರೇಕಾರ್ಡ್ 16.20 ನಿಮಿಷದಲ್ಲಿ ಓಟ ಮುಗಿಸಿದ್ದೆ. ಆದರೆ ಇಂದು 16.55.90 ಸಮಯವನ್ನು ನಾನು ತೆಗೆದುಕೊಂಡಿದ್ದು ಬೇಸರವಾಗಿದೆ. ಹೀಗಾಗಿ ನನ್ನ ಸಾಧನೆಯಲ್ಲಿ ತೃಪ್ತಿ ಉಂಟಾಗಿಲ್ಲ. ಇನ್ನು ಮುಂದಕ್ಕೆ 10,000 ಮೀಟರ್ ಓಟದಲ್ಲಿ ಸ್ಪರ್ಧಿಸಲಿದ್ದು ಉತ್ತಮವಾಗಿ ಓಡುವ ಭರವಸೆ ವ್ಯಕ್ತ ಪಡಿಸಿದರು.

ಇನ್ನುಳಿದಂತೆ ಮಹಿಳೆಯರ ವಿಭಾಗದ 5000ಮೀ ಓಟದಲ್ಲಿ ಕೇರಳದ ಪಿ.ವಿ ಚೈತ್ರ ದ್ವೀತಿಯ ಸ್ಥಾನ ಪಡೆದರೆ ಹರ್ಯಾಣದ ಪರಿತಿ ಲಾಂಬಾ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪುರುಷರ 5000ಮೀ. ಓಟದಲ್ಲಿ ಸೇನೆಯವರಾದ ಜಿ. ಲಕ್ಷಮನ್ ಚಿನ್ನ ಗೆದ್ದಿದ್ದು, ಗೊಪಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಓಎನ್ ಜಿಸಿಯ ಸುರೇಶ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.


Spread the love

Exit mobile version