ಮುಲ್ಕಿ ಪೋಲಿಸರಿಂದ ಜ್ಯುವೆಲರಿ, ಮನೆ,ವಾಹನ ಹಾಗೂ ಅಂಗಡಿ ಕಳವು ಆರೋಪಿಗಳ ಬಂಧನ
ಮುಲ್ಕಿ: ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಜ್ಯುವೆಲರಿ, ಮನೆ ಕಳವು, ವಾಹನ ಕಳವು ಮಾಡುತ್ತಿದ್ದ ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕರು ಸೇರಿದಂತೆ 5 ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಸವಾದ್ (24) ಮತ್ತು ಜಿತಿನ್ (21) ಎಂದು ಗುರುತಿಸಲಾಗಿದೆ.
ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ 2016ನೇ ಇಸವಿಯಿಂದ 2018ನೇ ಜುಲೈಎ ತನಕ ಕಳ್ಳತನ ಮಾಡಿದ ಕುರಿತು ಒಪ್ಪಿಕೊಂಡಿರುತ್ತಾರೆ. ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20 ದಿನಗಳ ಹಿಂದೆ ಚರಂತಿಪೇಟೆಯ ರತ್ನ ಜ್ಯುವೆಲರ್ಸ್ ಗೋಡೆಗೆ ಕನ್ನ ಹಾಕಿ ಸೊತ್ತುಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡು ಬಳಿಕ ವಿಚಾರಣೆ ನಡೆಸಿದಲ್ಲಿ ಮೋಟಾರು ಸೈಕಲ್, ಮನೆ ಕಳವು, ಮಾಡಿರುವುದನ್ನು ಬಯಲಿಗೆಳೆಯುವುದರಲ್ಲಿ ಯಶಸ್ವಿಯಾಗಿರುತ್ತಾರೆ. ಹಾಗೂ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕರನ್ನು ವಶಕ್ಕೆ ಪಡೆದು ಕಳವು ಮಾಡಿದ ಸೊತ್ತನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಾಗೂ ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು,, ಗ್ಯಾಸ್ ಕಟ್ಟರ್, ಗ್ಯಾಸ್ ಕಟ್ಟಿಂಗ್ ಮಿಷನ್, ಕಬ್ಬಿಣದ ರಾಡ್, ಕೊಡಲಿ, ಕಟ್ಟಿಂಗ್ ಮಿಷನ್, ಚೇನಾ, ಸುತ್ತಿಗೆ, ಗ್ಯಾಸ್ ಸಿಲಿಂಡರ್, ಹಾಗೂ ಕಳವು ಮಾಡಿದ ಸೊತ್ತುಗಳಾದ 5 ಗ್ರಾಮ ತೂಕ ಬಂಗಾರದ ಗಟ್ಟಿ, ಬೆಳ್ಳಿಯ ಮಾಂಗಲ್ಯ ಸರ, ಬೆಳ್ಳಿಯ ಮಕ್ಕಳ ಬಳೆಗಳು, ಬ್ಯಾಟರಿ, ಮೊಬೈಲ್ ಸೇರಿದಂತೆ ಒಟ್ಟು 8 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧಿನ ಪಡಿಸಿಕೊಳ್ಳಲಾಗಿದೆ.