ಸ್ವಚ್ಛತಾ ಹೀ ಸೇವಾ ಅಭ್ಯಾನ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸೈನಿಕರು ಸ್ವಚ್ಛತಾ ಹೀ ಸೇವಾ ಅಭ್ಯಾನವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರ ಸಂಯೋಜನೆಯೊಂದಿಗೆ ಸೆಪ್ಟೆಂಬರ್ 28 ರಂದು ಎಡಪದವು ಗ್ರಾಮದಲ್ಲಿ ಆಯೋಜಿಸಲಾಗಿತ್ತ್ತು.
ಈ ಸಂದರ್ಭದಲ್ಲಿ ಶ್ರೀ ರಾಮಕ್ರಷ್ಣ ಮಿಷನ್, ಮಂಗಳೂರು ಇಲ್ಲಿನ ಶ್ರೀಗಳಾದ ಜಿತಕಾಮಂದಾಜಿಯವರು ಸದರಿ ಅಭ್ಯಾನವನ್ನು ಉದ್ಘಾಟಿಸಿ ಮಾತನಾಡಿ ಸಭೆಗೆ ಸ್ವಚ್ಛತೆಯ ಬಗ್ಗೆ ವಿವಿಧ ಉದಾಹರಣಾತ್ಮಕ ವಿಷಯಗಳನ್ನು ತಿಳಿಸಿ ಅರಿವು ಮೂಡಿಸಿದರು.
ಇದಲ್ಲದೆ ಹಿರಿಯ ಮಾಜಿ ಸೈನಿಕರಾದ ಬ್ರಿಗೇಡಿಯರ್ (ನಿವೃತ್ತ) ಐಎನ್ ರೈಯವರು ಹಾಗೂ ಕರ್ನಲ್ (ನಿವೃತ್ತ) ಶರತ್ ಭಂಡಾರಿಯವರು ಮಾತನಾಡಿ ಸಭೆಗೆ ಸ್ವಚ್ಛತೆಯನ್ನು ಕಾಪಾಡುವ ವಿಷಯದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮಾಜಿ ವಿಧಾನ ಸಭಾ ಪರಿಷತ್‍ನ ಸದಸ್ಯರಾದ ಮಾಜಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಸಭೆಗೆ ಸ್ವಚ್ಛತೆಯ ಪ್ರಮಾಣ ವಚನವನ್ನು ಭೋದಿಸಿದರು. ತದನಂತರ ಜಿಲ್ಲೆಯ ಮಾಜಿಸೈನಿಕರು, ಎನ್‍ಸಿಸಿ, ಎನ್‍ಎಸ್‍ಎಸ್ ತಂಡದ ವಿದ್ಯಾರ್ಥಿಗಳು ಮತ್ತು ಸಮಾರಂಭದಲ್ಲಿ ಪಾಲ್ಗೊಂಡತಹ ಮಹಿಳೆಯರು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡು, ಸ್ವಚ್ಛತೆಯ ಬಗ್ಗೆ ಮುದ್ರಿಸಲಾದ ಬಿತ್ತಿಪತ್ರಗಳನ್ನು ಗ್ರಾಮದಲ್ಲಿ ಹಂಚಿದರು.
ಈ ಸಂದರ್ಭದಲ್ಲಿ ಎಡಪದವು ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಲತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಸಮಾಜ ಸೇವಕರಾದ ಮುರಳೀಧರ ಶೆಟ್ಟಿ, ದಕ್ಷಿಣ ಕನ್ನಡ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ವಿಕ್ರಮದತ್ತ , ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ ಆರ್ ಶೆಟ್ಟಿ, ಎಡಪದವು ಗ್ರಾಮದ ಪಂಚಾಯತಿ ಅಭಿವೃಧ್ದಿ ಅಧಿಕಾರಿ ಭೋಗಮಲ್ಲಣ್ಣ, ಎನ್‍ಸಿಸಿ ಹಾಗೂ ಎನ್‍ಎಸ್‍ಎಸ್ ಕೆಡೆಟ್‍ಗಳು ಮತ್ತು ಸ್ಥಳೀಯ ಸೇನಾ ಭರ್ತಿಕಾರ್ಯಾಲಯದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.