ಮನೆಕಳ್ಳತನ ಮಾಡುತ್ತಿದ್ದ ಮೂವರು ಅಲೆಮಾರಿ ಮಹಿಳೆಯರ ಬಂಧನ

Spread the love

ಮನೆಕಳ್ಳತನ ಮಾಡುತ್ತಿದ್ದ ಮೂವರು ಅಲೆಮಾರಿ ಮಹಿಳೆಯರ ಬಂಧನ

ಮಂಗಳೂರು: ಮನೆ ಕೆಲಸದ ನೆಪದಲ್ಲಿ ಮನೆಗಳಿಂದ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಅಲೆಮಾರಿ ಜನಾಂಗದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗದಗ ಜಿಲ್ಲೆ ಶಿರಹಟ್ಟಿ ನಿವಾಸಿ ದೇವಮ್ಮ (19), ನಾಗಮ್ಮ @ ರೂಪಾ (18), ಗೀತಾ (24) ಎಂದು ಗುರುತಿಸಲಾಗಿದೆ.

ಬುಧವಾರ 12-00 ಗಂಟೆಗೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ  ದೇವಸ್ಥಾನದ ವಠಾರದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ 03 ಜನ ಹೆಂಗಸರು ಚಿಕ್ಕಮಕ್ಕಳೊಂದಿಗೆ ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದುಕೊಂಡು ಸಂಶಯಿತರಾಗಿ ಸುತ್ತಾಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌‌ಐ ನಂದಕುಮಾರ್ ಹಾಗೂ ಸಿಬ್ಬಂಧಿಗಳು,  ಪುತ್ತೂರು ತಾಲೂಕು ಉಪ್ಪಿನಂಗಡಿ ಕಸಬಾ ಗ್ರಾಮದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ತೆರಳಿದಾಗ, 03 ಜನ ಅಲೆಮಾರಿಗಳು  ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು, ತಮ್ಮ ಇರುವಿಕೆಯನ್ನು ಮರೆಮಾಚಲು ನದಿಯ ಕಡೆಗೆ ಓಡಿ ಹೋಗುತ್ತಿದ್ದವರನ್ನು ಸಿಬ್ಬಂಧಿಯವರ ಸಹಕಾರದಿಂದ ಹಿಡಿದುಕೊಂಡು ವಿಚಾರಿಸಲಾಗಿ, ಸದ್ರಿಯವರು ತಡವರಿಸುತ್ತಾ ತಮ್ಮ ಹೆಸರನ್ನು ಸಮರ್ಪಕವಾಗಿ ನೀಡದೇ ಇದ್ದುದ್ದರಿಂದ ಸದ್ರಿಯವರನ್ನು ಪುನಃ ವಿಚಾರಿಸಿದಾಗ ಮೂರು ಜನ ಮಹಿಳೆಯರನ್ನು ವಶಕ್ಕೆ ಪಡೆದು, ಪಂಚರುಗಳೊಂದಿಗೆ ಅವರಲ್ಲಿದ್ದ  ಬ್ಯಾಗ್‌ ಗಳನ್ನು ಪರಿಶೀಲಿಸಲಾಗಿ, ಬ್ಯಾಗ್ ಗಳಲ್ಲಿ ಬಟ್ಟೆ ಬರೆಗಳಿದ್ದು, ಬಟ್ಟೆ ಬರೆಗಳ ಜೊತೆ ಚಿನ್ನಾಭರಣಗಳ ಕಟ್ಟು ಹಾಗೂ ಮೊಬೈಲ್‌ ಗಳಿದ್ದು, ಈ ಚಿನ್ನಾಭರಣಗಳು ಹಾಗೂ ಮೊಬೈಲ್‌ ಗಳ ಬಗ್ಗೆ ಸದ್ರಿ ಮೂವರು ಮಹಿಳೆಯರಲ್ಲಿ ವಿಚಾರಿಸಲಾಗಿ, ಅವರ ವಶದಲ್ಲಿದ್ದ ಚಿನ್ನಾಭರಣಗಳು ಹಾಗೂ ಸೊತ್ತುಗಳ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರವಾಗಲೀ, ದಾಖಲಾತಿಗಳಾಲೀ ಇಲ್ಲದೇ ಇದ್ದುದ್ದರಿಂದ ಮೂವರು ಮಹಿಳೆಯರನ್ನು  ದಸ್ತಗಿರಿ ಮಾಡಲಾಗಿದೆ.

ಈ ವೇಳೆ ಅವರ ವಶದಲ್ಲಿದ್ದ 1] ಚಿನ್ನದ ರೋಫ್  ಚೈನ್ – 01  2] ಚಿನ್ನದ ಉಂಗುರಗಳು – 04 3] ಚಿನ್ನದ ಕಡಗಗಳು – 03 4] VIVO ಮೊಬೈಲ್‌ – 01 05] MI ಮೊಬೈಲ್ -01 06] 03 ಬ್ಯಾಗ್‌ ಹಾಗೂ ಬಟ್ಟೆ ಬರೆಗಳನ್ನು ಸ್ವಾಧೀನಪಡಿಸಿಕೊಳ್ಲಲಾಗಿದೆ. (ಸ್ವಾಧೀನಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ತೂಕ 156.140 ಗ್ರಾಂ. ಆಗಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ರೂ:4,31,680.00 ಆಗಬಹುದು ಹಾಗೂ 02 ಮೊಬೈಲ್‌ಗಳ ಅಂದಾಜು ಮೌಲ್ಯ 8000/- ರೂ ಆಗಬಹುದು, ಚಿನ್ನಾಭರಣ ಮತ್ತು ಸೊತ್ತುಗಳ  ಒಟ್ಟು ಮೌಲ್ಯ ರೂ:4,39,680.00 ರೂ ಆಗಬಹುದು) ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

          ಮೂವರು ಮಹಿಳಾ ಆರೋಪಿತರುಗಳು ಮೂಲತಃ ಗದಗ ಜಿಲ್ಲೆಯವರಾಗಿರುತ್ತಾರೆ. ಇವರು ಅಲೆಮಾರಿ ಜನಾಂಗದವರಾಗಿದ್ದು, ಬೇರೆ ಬೇರೆ ಕಡೆ ಗಳಲ್ಲಿ ಬಿಕ್ಷೆ ಬೇಡಿ  ಅಲ್ಲದೇ   ಸ್ಥಳೀಯವಾಗಿ ಶ್ರೀಮಂತರ ಮನೆಗಳಲ್ಲಿ ತೋಟದ ಕೆಲಸ, ಅಡಿಕೆ ಸುಲಿಯುವುದು, ಮತ್ತು ಮನೆ ಕೆಲಸ ಮಾಡಿ  ಜೀವನ ಸಾಗಿಸುತ್ತಿದ್ದು, ಕೆಲಸಕ್ಕೆ ಹೋಗದ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ , ಬಸ್ ನಿಲ್ದಾಣದಲ್ಲಿ, ಇನ್ನಿತರ ಜನನಿಭಿಡ ಪ್ರದೇಶಗಳಲ್ಲಿ ಚಿಕ್ಕ ಮಕ್ಕಳನ್ನು ಜೊತೆಯಲ್ಲಿರಿಸಿ, ಭಿಕ್ಷೆ ಬೇಡಿ,  ಸಂಪಾದಿಸಿದ ಹಣವನ್ನು ಹೆಚ್ಚಾಗಿ ಮದ್ಯ ಸೇವನೆಗೆ ಮತ್ತು ಶೋಕಿ ಜೀವನಕ್ಕಾಗಿ ಬಳಸುತ್ತಿದ್ದು,  ಸದ್ರಿ ಹಣವು ತಮ್ಮ ಶೋಕಿ ಜೀವನಕ್ಕೆ ಹಾಗೂ ಮದ್ಯಪಾನಕ್ಕೆ ಸಾಕಾಗದೇ ಇದ್ದುದ್ದರಿಂದ ಕೂಲಿ ಕೆಲಸ ಕ್ಕೆಂದು  ತೆರಳಿದ ಮನೆಯ  ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಹವ್ಯಾಸವನ್ನು ಹೊಂದಿರುತ್ತಾರೆ.  ಸದ್ರಿ ಆರೋಪಿತರುಗಳು ಈ ತಿಂಗಳ ಮೊದಲ ವಾರದಲ್ಲಿ ಮಂಗಳೂರು ರೈಲ್ವೆ ನಿಲ್ದಾಣದಲ್ಲಿರುವ ಸಮಯ ಒಂದು ದಿನ ಮಂಗಳೂರಿನ ಬಜಾಲ್ ಎಂಬಲ್ಲಿರುವ ಆಟೋರಿಕ್ಷಾ ಚಾಲಕರ ಮನೆಗೆ  ಕೂಲಿ ಕೆಲಸದ ಬಗ್ಗೆ  ಹೋಗಿದ್ದು, ಆ ಸಮಯ  03 ಜನರು ಸೇರಿಕೊಂಡು, ಆವರ ಮನೆಯಿಂದ ಈ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ಸಮಯ ತಿಳಿಸಿರುತ್ತಾರೆ. ಅಲ್ಲದೇ ಇತರೇ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಇತ್ತೀಚೆಗೆ ಒಂದು ವಾರದಿಂದ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ವಾಸ್ತವ್ಯ ಹೂಡಿದ್ದು, ಅಲ್ಲದೇ ಉಪ್ಪಿನಂಗಡಿ ಸಮೀಪ ತೋಟದ ಕೆಲಸಕ್ಕಾಗಿ ಬಂದಿರುವುದಾಗಿ, ಅಲ್ಲದೇ  ಸದ್ರಿಯವರುಗಳು ಉಪ್ಪಿನಂಗಡಿಯಲ್ಲಿನ  ಶ್ರೀಮಂತರ ಮನೆಗೆ ಕೂಲಿ ಕೆಲಸಕ್ಕೆ ತೆರಳಿ, ಸದ್ರಿ ಮನೆಯಿಂದ ಕಳ್ಳತನ ಮಾಡುವ ಸಂಚು ರೂಪಿಸಿರುವುದು ವಿಚಾರಣೆ ಸಮಯ  ತಿಳಿದು ಬಂದಿರುತ್ತದೆ.

ಸದ್ರಿ ಪ್ರಕರಣದ ಪತ್ತೆಯ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ| ಬಿ. ಆರ್ ರವಿಕಾಂತೇಗೌಡ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಸಜಿತ್‌ ವಿ,ಜೆ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಶ್ರೀನಿವಾಸ್ ಬಿ ಎಸ್‌‌  ಹಾಗೂ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗೋಪಾಲ ನಾಯ್ಕ ರವರ ಆದೇಶದಂತೆ, ಉಪ್ಪಿಂಗಡಿ ಪೊಲೀಸ್ ಠಾಣಾ ಪಿಎಸ್‌‌ಐ ನಂದ ಕುಮಾರ್ ಎಂ.ಎಂ ಹಾಗೂ ಸಿಬ್ಬಂಧಿಗಳಾದ ದೇವದಾಸ್, ಸಂಗಯ್ಯಕಾಳೆ, ಹರಿಶ್ಚಂದ್ರ, ಗಣೇಶ್, ಚೋಮ, ಪ್ರತಾಪ್‌, ಜಗಧೀಶ್, ಶ್ರೀಧರ, ಮನೋಹರ ಪಿ.ಸಿ, ಇರ್ಷಾದ್‌, ಸಚಿನ್,ನಾರಾಯಣ ಗೌಡ,  ಯಶೋಧ, ರೇಣುಕಾ, ನಿವೇದಿತಾ ಹಾಗೂ ಪ್ರೀತಿದೀಪಾ  ರವರುಗಳು  ಸಹಕರಿಸಿರುತ್ತಾರೆ.


Spread the love
1 Comment
Inline Feedbacks
View all comments
drona
6 years ago

Such gangs are commonly seen at Manipal Udipi Parkala areas.
Police need to be alert and act swiftly.
They need to be sent back to their districts.