ಗಾಯಕ ಪದ್ಮಶ್ರಿ ಹರಿಹರನ್ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಶ್ರಯದಲ್ಲಿ ನಡೆಯಲಿರುವ 25ನೇ ವರ್ಷದ ಆಳ್ವಾಸ್ ವಿರಾಸತ್ 2019 ಜನವರಿ ೪ರಂದು ಉದ್ಘಾಟನಾ ಸಮಾರಂಭದಲ್ಲಿ ದೇಶದ ಖ್ಯಾತ ಗಾಯಕ ಪದ್ಮಶ್ರಿ ಹರಿಹರನ್ ಅವರಿಗೆ ಆಳ್ವಾಸ್ ವಿರಾಸತ್-2019 ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನವರಿ 4-6ರವರೆಗೆ ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ಶ್ರಿÃಮತಿ ವನಜಾಕ್ಷಿ ಕೆ.ಶ್ರಿÃಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ರಾಷ್ಟಿçÃಯ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಸಂಸ್ಕೃತಿ ಪ್ರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
ಆಳ್ವಾಸ್ ವಿರಾಸತ್ನಲ್ಲಿ ಕಳೆದ ೨೫ ವರ್ಷಗಳಿಂದ ಮಹೋನ್ನತ ಸಾಂಸ್ಕೃತಿಕ ಪ್ರತಿಭೆಯೊಂದನ್ನು ಗುರುತಿಸಿ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರೂ.೧ ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಈ ಬಾರಿಯ ಪ್ರಶಸ್ತಿಯನ್ನು ಪಡೆಯುತ್ತಿರುವವರು ಭಾರತೀಯ ಚಲನಚಿತ್ರ ರಂಗದಲ್ಲಿ ಹಿನ್ನಲೆ ಗಾಯಕರಾಗಿ ಪ್ರಸಿದ್ಧರಾದ ಹರಿಹರ ಅನಂತ ಸುಬ್ರಮಣಿಯನ್ ಅವರು ಹರಿಹರನ್ ಎಂದೇ ಖ್ಯಾತರು. ಗಜಲ್, ಭಕ್ತಗೀತೆ ಹಾಗೂ ಭಾರತೀಯ ಶಾಸ್ತಿçÃಯ ಸಂಗೀತಗಳಲ್ಲಿ ಅಸಾಧಾರಣ ಪ್ರತಿಭೆಯಾಗಿರುವ ಹರಿಹರನ್ ತಮಿಳು, ಹಿಂದಿ, ಮಲೆಯಾಳಂ, ಕನ್ನಡ, ಮರಾಠಿ, ಭೋಜ್ಪುರಿ ಮತ್ತು ತೆಲುಗು ಭಾಷೆಗಳ ಚಲನಚಿತ್ರರಂಗದ ಹಿನ್ನಲೆ ಗಾಯಕರಾಗಿ ಜನಮನ ಗೆದ್ದವರು. ಕೇರಳದ ತಿರುವಂತಪುರದಲ್ಲಿ ಜನಿಸಿರುವ ಹರಿಹರನ್ ಅವರು ಸಂಗೀತ ಸಂಯೋಜಕರೂ ಆಗಿದ್ದು ೩೦ಕ್ಕಿಂತಲೂ ಅಧಿಕ ಗಜಲ್ ಆಲ್ವಂಗಳನ್ನು ಬಿಡುಗಡೆ ಮಾಡಿದ್ದಾರೆ. ೧೯೯೬ರಲ್ಲಿ `ಕಲೋನಿಯಲ್ ಕಸಿನ್ಸ್’ ಎಂಬ ಆಲ್ಬಂನ್ನು ಖ್ಯಾತ ಹಾಡುಗಾರ ಹಾಗೂ ಸಂಗೀತ ನಿರ್ದೇಶಕ ಲೆಸ್ಲಿ ಲೆವಿಸ್ ಅವರೊಂದಿಗೆ ತಯಾರಿಸಿ ಫ್ಯೂಶನ್ ಸಂಗೀತದ ಸಾಧಕರಾಗಿಯೂ ಹೊರಹೊಮ್ಮಿದ್ದಾರೆ.
ಹರಿಹರನ್ ಅವರ ಸಂಗೀತ ಪ್ರತಿಭೆಗೆ ೨೦೦೪ರಲ್ಲಿ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರಿà ಪ್ರಶಸ್ತಿ ಸಂದಿದೆ. ಅನುಮಲಿಕ್ ಸಂಯೋಜನೆಯ ಬಾರ್ಡರ್ ಸಿನಿಮಾದ ಮೇರೆ ದುಶ್ಮನ್ ಮೇರೆ ಭಾಯಿ ಹಾಗೂ ಅಜಯ್ ಅತುಲ್ ಸಂಯೋಜನೆಯ ಮರಾಠಿ ಚಿತ್ರ ಜೋಗ್ವಾದ ಜೀವ್ ರಾಂಗ್ಳ ಹಾಡುಗಳಿಗೆ ಎರಡು ಬಾರಿ ರಾಷ್ಟಿçÃಯ ಪುರಸ್ಕಾರ ಸಹಿತ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆಂದು ತಿಳಿಸಿದ್ದಾರೆ.
ಆಳ್ವಾಸ್ ಪಿಆರ್ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿದ್ದರು.