Spread the love
6 ಅನುಮಾನಾಸ್ಪದ ವ್ಯಕ್ತಿಗಳು ವಶಕ್ಕೆ
ಮಂಗಳೂರು: ನಗರದ ಪಂಪ್ವೆಲ್ನ ಹೋಟೆಲ್ನಲ್ಲಿ ತಂಗಿದ್ದ ಅನುಮಾನಾಸ್ಪದ 6 ವ್ಯಕ್ತಿಗಳನ್ನು ನಗರದ ಕದ್ರಿ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಮಡಿಕೇರಿ, ಕೇರಳ ಹಾಗೂ ಮಂಗಳೂರಿನ ಈ ವ್ಯಕ್ತಿಗಳು, ತಮ್ಮ ಕಾರಿನ ಮುಂಭಾಗದಲ್ಲಿ ‘ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಟಿಂಗ್ ಬ್ಯೂರೋ’ ಎಂಬ ಫಲಕ ಹಾಕಿಕೊಂಡಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು, 6 ಜನರನ್ನು ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೂಕ್ತ ಉತ್ತರ ನೀಡದೇ ಇರುವುದರಿಂದ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Spread the love