6ನೇ ವೇತನ ಆಯೋಗ ಜಾರಿ ಮಾಡಲು ಡಿ’ ನೌಕರರ ಸಂಘದಿಂದ ಒತ್ತಾಯ ಮತ್ತು ಮನವಿ

Spread the love

6ನೇ ವೇತನ ಆಯೋಗ ಜಾರಿ ಮಾಡಲು ಡಿ’ ನೌಕರರ ಸಂಘದಿಂದ ಒತ್ತಾಯ ಮತ್ತು ಮನವಿ

ಮ0ಗಳೂರು : ಜುಲೈ 30 ರಂದು ಮಂಗಳೂರು ಉರ್ವಸ್ಟೋರ್‍ನ ತುಳುಭವನ ಸಭಾಂಗಣದಲ್ಲಿ ಜರುಗಿದ ಬೃಹತ್ ರಕ್ತದಾನ, ಆರೋಗ್ಯ-ತಪಾಸಣೆ, ನೇತ್ರ-ತಪಾಸಣೆ, ದಂತ-ತಪಾಸಣೆ, ಆಯುಷ್ ಚಿಕಿತ್ಸೆ ಮತ್ತು ಉಚಿತ ಔಷಧಿ ವಿತರಣೆ. ಈ ಕಾರ್ಯಕ್ರಮದಲ್ಲಿ .ಐವನ್. ಡಿಸೋಜಾ ಮುಖ್ಯ ಸಚೇತಕರು, ವಿಧಾನ ಪರಿಷತ್ತ್ ಕರ್ನಾಟಕ ಸರಕಾರ. ಇವರಿಗೆ ಸಂಘದ ವತಿಯಿಂದ 6ನೇ ವೇತನ ಆಯೋಗ ಶೀಘ್ರದಲ್ಲೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವಂತೆ ಮನವಿಯನ್ನು ಸಂಘದ ವತಿಯಿಂದ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಸಂಘದ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ ಪ್ರಸ್ತಾವನೆ ನೀಡಿ ಸ್ವಾಗತ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸುರೇಂದ್ರರಾವ್ (ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್) ದೀಪ ಬೆಳಗಿಸಿ ನೇರವೇರಿಸಿದರು. ಮುಖ್ಯ ಅಥಿತಿಗಳಾಗಿ ಧರ್ಮ ಗುರುಗಳು, ಸೈಂಟ್ ಡೋಮೆನಿಕ್ ಚರ್ಚ್, ಅಶೋಕನಗರ ಉರ್ವ. ಪಾ||ಎಕ್ವಿನ್ ನೊರಾನ್ಹ್, ಅಧ್ಯಕ್ಷರು ರೆಡ್‍ಕ್ರಾಸ್ ದ.ಕ ಮಂಗಳೂರು. ಡಾ|| ಸುಶೀಲ್ ಜತ್ತನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ದ.ಕ. ಡಾ|| ರಾಮಕೃಷ್ಣ ರಾವ್. ಎಂ, ಜಿಲ್ಲಾ ವೆನ್‍ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು. ಡಾ|| ರಾಜೇಶ್ವರಿ ದೇವಿ.ಹೆಚ್, ಸಮಸ್ತ ಸರಕಾರಿ ನೌಕರರು, ಸಂಘದ ಸದಸ್ಯರು, ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ, ನೇತ್ರ ತಪಾಸಣೆ, ಆಯುಷ್ ತಪಾಸಣೆ, ಉಚಿತ ಔಷಧಿ, ದಂತ ಚಿಕಿತ್ಸೆ, ಆರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದರು. ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಸತತ 30 ಬಾರಿ ರಕ್ತದಾನ ಮಾಡಿರುವ ವಾಹನ ಚಾಲಕರು, (ತಾಲೂಕು ಆರೋಗ್ಯ ಕೇಂದ್ರ ಬಂಟ್ವಾಳ), ಲಕ್ಷಣ ಗೌಡ, ವಾಹನ ಚಾಲಕರು, (ಮೀನುಗಾರಿಕೆ ಇಲಾಖೆ, ದ.ಕ ಜಿಲ್ಲಾ ಪಂಚಾಯತ್), ಯೋಗಿಶ್, ಆಪ್ತ ಸಹಾಯಕರು, (ದ.ಕ ಜಿಲ್ಲಾ ಪಂಚಾಯತ್, ಉಪಾಧ್ಯಕ್ಷರ ಶಾಖೆ) ಉದಯ ರವಿ, ಇವರುಗಳನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ, ಐವನ್ ಡಿಸೋಜಾ ಮುಖ್ಯ ಸಚೇತಕರು ಗೌರವಿಸಿದರು. ಎಂದು ಪ್ರಧಾನ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.


Spread the love