Home Mangalorean News Kannada News 7ರಿಂದ 9ನೇ ತರಗತಿವರೆಗಿನ ಪರೀಕ್ಷೆ ಮಾರ್ಚ್ 31ರವರೆಗೆ ಮುಂದೂಡಿಕೆ: ಸಚಿವ ಸುರೇಶ್ ಕುಮಾರ್

7ರಿಂದ 9ನೇ ತರಗತಿವರೆಗಿನ ಪರೀಕ್ಷೆ ಮಾರ್ಚ್ 31ರವರೆಗೆ ಮುಂದೂಡಿಕೆ: ಸಚಿವ ಸುರೇಶ್ ಕುಮಾರ್

Spread the love

7ರಿಂದ 9ನೇ ತರಗತಿವರೆಗಿನ ಪರೀಕ್ಷೆ ಮಾರ್ಚ್ 31ರವರೆಗೆ ಮುಂದೂಡಿಕೆ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ವೈರಾಣು ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವುದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದೀಗ 7ರಿಂದ 9ನೇ ತರಗತಿಯವರೆಗಿನ ಪರೀಕ್ಷೆಯನ್ನು ಮುಂದೂಡಿದೆ.

ಒಂದು ವಾರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ಮಾಲ್, ಥಿಯೇಟರ್ ಗಳಿಗೆ ಬಂದ್ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ 1ರಿಂದ 6ನೇ ತರಗತಿಯವರೆಗಿನ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿತ್ತು.

ಇದೀಗ 7ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 31ರವರೆಗೆ ಮುಂದೂಡಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. 6ನೇ ತರಗತಿವರೆಗಿನ ಮಕ್ಕಳಿಗೆ ಪರೀಕ್ಷೆ ರದ್ದುಗೊಳಿಸಿದ್ದಾಗ ತಮ್ಮ ಮಕ್ಕಳ ಮೇಲೆ ಏಕೆ ಕಾಳಜಿಯಿಲ್ಲ ಎಂದು 7ನೇ ತರಗತಿ ನಂತರದ ವಿದ್ಯಾರ್ಥಿಗಳ ಪೋಷಕರು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು.


Spread the love

Exit mobile version