7 ನೇ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಅದ್ದೂರಿ ಚಾಲನೆ
ಮಂಗಳೂರು: ಬಹು ನಿರೀಕ್ಷಿತ 7 ನೇ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಶನಿವಾರ ಕರಾವಳಿ ಉತ್ಸವ ಮೈದಾನದಲ್ಲಿ ಚಾಲನೆ ದೊರಕಿತು.
ಬಳಿಕ ಮಾತನಾಡಿದ ಸನೀಲ್ ಅವರು ನಮ್ಮ ಬಾಲ್ಯದ ದಿನಗಳಲ್ಲಿ ನಾವು ಲಗೋರಿಯನ್ನು ಆಡುತ್ತಿದ್ದು ಈಗ ಅದೇ ಆಟ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಮಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟವನ್ನು ಆಯೋಜಿಸಿರುವುದಕ್ಕೆ ದೀಪಕ್ ಮತ್ತು ಅವರ ತಂಡವನ್ನು ಅಭಿನಂದಿಸಿದ ಮೇಯರ್ ಇಂದಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ಮಾತ್ರ ಬೆಂಬಲ ದೊರೆಯುತ್ತಿರುವುದರ ಪರಿಣಾಮ ಇನ್ನಿತರ ಪಂದ್ಯಾಟಗಳು ಮೂಲೆಗುಂಪಾಗುತ್ತಿವೆ. ಲಗೋರಿ ಒಂದು ಗ್ರಾಮೀಣ ಕ್ರೀಡೆಯಾಗಿದ್ದು ನಾವೆಲ್ಲರೂ ಬೆಂಬಲಿಸಬೇಕಾಗದೆ.
ಯಾವುದೇ ಪಂದ್ಯಾಟಗಳಲ್ಲಿ ಗೆಲವು ಸೋಲು ಪ್ರಮುಖವಲ್ಲ ಆದರೆ ಭಾಗವಹಿಸುವುದು ಮುಖ್ಯ. ಗೆದ್ದವರು ಬೀಗದೆ ಸೋತವರು ಕುಗ್ಗದೆ ಸೋತವರು ನಾಳೆ ನನಗೂ ಗೆಲುವಿದೆ ಎನ್ನುವುದು ಅರಿತುಕೊಳ್ಳಬೇಕು ಎಂದರು.
ಲಗೋರಿ ಪಂದ್ಯಾಟದ ಬ್ರಾಂಡ್ ಅಂಬಾಸಿಡರ್ ಸಂಜನಾ, ಕಾರ್ಪೊರೇಟರ್ ವಸಂತಿ ಆಚಾರ್, ಸಿನಿಮಾ ತಾರೆ ಅಪೇಕ್ಷಾ ಪುರೋಹಿತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ನೀತಾ ಮುರಳೀಧರ ರಾವ್, ತುಷಾರ್ ಎಮ್, ಜಾದವ್, ದೀಪಕ್ ಗಂಗೂಲಿ ಉಪಸ್ಥಿತರಿದ್ದರು.
ಪಾಥ್ ವೇಯ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ತಂಡದ ನಾಯಕಿ ಕಾವ್ಯ ಅತ್ತಾವರ್ ಪ್ರತಿಜ್ಞಾವಿಧಿ ಭೋಧಿಸಿದರು. ಮೇಯರ್ ಸನೀಲ್ ಹಾಗೂ ನಟಿ ಅಪೇಕ್ಷಾ ಲಗೋರಿ ಆಡುವುದರ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು.