Home Mangalorean News Kannada News 7.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ

7.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ

Spread the love

7.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ
ಮಂಗಳೂರು: ನಗರದ ಯೆಯ್ಯಾಡಿಯ ಆ್ಯಕ್ಸಿಸ್ ಬ್ಯಾಂಕಿನಿಂದ ಬೆಂಗಳೂರಿನ ಕೋರಮಂಗಲ ಆ್ಯಕ್ಸಿಸ್ ಬ್ಯಾಂಕಿಗೆ ಹಣ ರವಾನೆ ಮಾಡದೆ ವಂಚಿಸಿದ ಎಸ್ ಐ ಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಯ ಮೂವರನ್ನು ಬಂಧಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರು ಬಂಧಿತರನ್ನು ಬೊಲೆರಗೋ ವಾಹನ ಚಾಲಕ ಚಿತ್ರದುರ್ಗದ ಕರಿಬಸಪ್ಪ ಗನ್ ಮ್ಯಾನ್ ಕೊಡಗಿನ ಪೂವಪ್ಪ, ಹಣ ವಂಚಿಸಲು ಮಾರ್ಗದರ್ಶನ ನೀಡಿದ ಕೊಡಗಿನ ಕಾರಿಯಪ್ಪ ಯಾನೆ ಕಾಶಿ ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ರೂ 6,30 ಕೋಟಿ ವಶಪಡಿಸಲಾಗಿದೆ.
ಮೇ 11 ರಂದು ಬೆಳಿಗ್ಗೆ ರೂ 7.5 ಕೋಟಿ ಹಣವನ್ನು ಎಸ್ ಐ ಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಗೆ ಸೇರಿದ ಬೊಲೆರೊ ವಾಹನದಲ್ಲಿ ಆರೋಪಿಗಳು ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಯೆಯ್ಯಾಡಿ ಶಾಖೆಯ ಮುಖ್ಯಸ್ಥ ರಂಜಿತ್ ಅವರು ಕೋರಮಂಗಲ ಶಾಖೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ ಸಕಾಲದಲ್ಲಿ ಹಣ ತಲುಪದ ಕಾರಣ ಸಂಶಯಗೊಂಡ ಬ್ಯಾಂಕ್ ಅಧಿಕಾರಿಗಳು ಕಂಪೆನಿಯ ಮುಖ್ಯಸ್ಥರ ಮಾಹಿತಿ ನೀಡಿದ್ದಾರೆ ಅದರಂತೆ ಕಂಪೆನಿಯ ಸಚಿನ್ ಎಂಬವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನೀಖೆ ನಡೆಸಿದಾಗ ಆರೋಪಿಗಳು ಸೋಮವಾರ ಪೇಟೆಯಿಂದ 20 ಕಿಮಿ ದೂರದಲ್ಲಿನ ಕುಂಬಾರುಗುಡಿಗೆ ಎಂಬಲ್ಲಿನ ಕಾಡಿನಲ್ಲಿ ಹಣ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ಪಡೆದೆಉ ಅದರಂತೆ ಕಾರ್ಯಚಾರಣೆ ನಡೆಸಿದ ಪೋಲಿಸರು ಮೂವರನ್ನು ಬಂಧಿಸದ್ದಾರೆ. ಪ್ರಕರಣದ ಕಸ್ಟೋಡಿಯನ್ ಪರಶುರಾಮರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ಕಾರ್ಯಚಾರಣೆಗೆ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ಶೃತಿ, ಸಿಸಿಆರ್ ಬಿ ಘಟಕದ ಎಸಿಪಿ ವೆಲೆಂಟನ್ ಡಿಸೋಜ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಚರಣೆ ನಡೆಸಲಾಗಿತ್ತು.


Spread the love

Exit mobile version