Spread the love

ಸ್ಕೌಟ್ಸ್-ಗೈಡ್ಸ್‍ನಿಂದ ಮಕ್ಕಳಲ್ಲಿ ಸೃಜನಶೀಲತೆ: ಪಿ.ಜಿ. ಆರ್.ಸಿಂಧ್ಯಾ

ಮಂಗಳೂರು: ಮಕ್ಕಳ ಸಾಧನೆ ಮತ್ತು ಅವರ ಬೆಳವಣಿಗೆಯಲ್ಲಿ ಪೆÇೀಷಕರು ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಕರ್ನಾಟಕ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ಅವರು ಸೋಮವಾರ ಪದವಿ ಪೂರ್ವ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ನಾಯಕತ್ವ ತರಬೇತಿ ಹಾಗೂ ಜಿಲ್ಲಾ ಪ್ರಾಂಶುಪಾಲರ ಸಂಘದ ಡೈರಿ ಬಿಡುಗಡೆ ಮತ್ತು ಶೈಕ್ಷಣಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯು ಎಲ್ಲದರಲ್ಲೂ ಮುಂದುವರಿದಿದ್ದು ಬೇರೆ ಜಿಲ್ಲೆಯ ಶಿಕ್ಷಕರಿಗೆ ಇಲ್ಲಿನ ಪ್ರಾಂಶುಪಾಲರ ಸಂಘ ಹಾಗೂ ಶಿಕ್ಷಣದ ಗುಣಮಟ್ಟ ಆದರ್ಶವಾಗಿದೆ. ದೇಶದಲ್ಲಿ ಶಿಸ್ತಿನ ಕೊರತೆ ಬಹಳ ಇದೆ, ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಶಿಸ್ತು ಸಂಯಮ ಸಮಯ ಪಾಲನೆ ಇವುಗಳನ್ನು ಅಳವಡಿಸಿದರೆ ಜೀವನ ಪಯರ್ಂತ ಅದನ್ನು ಪಾಲಿಸುತ್ತಾರೆ. ಮಕ್ಕಳಿಗೆ ಮೊದಲು ಶಿಕ್ಷಣಕ್ಕೆ ಆದ್ಯತೆಯನ್ನು ನೀಡಬೇಕು, ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೆ ಪೆÇ್ರೀತ್ಸಾಹಿಸಬೇಕು ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ನಿರ್ದೇಶಕಿ ಸಿಂಧೂ ಬಿ. ರೂಪೇಶ್ ಮಾತನಡಿ, ಶಿಸ್ತು ನಾಯಕತ್ವ ಗುಣ, ಸ್ವಯಂಸೇವಕ, ಸಮಾಜಕಾರ್ಯ ಈ ರೀತಿಯ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಪಠ್ಯ ಚಟುವಟಿಕೆಗಳು ಮಕ್ಕಳಿಗೆ ಮುಖ್ಯವಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು.

ನಾಯಕತ್ವ ಗುಣವು ಎಲ್ಲರಿಗೂ ಅಗತ್ಯ ಇದು ಒಬ್ಬರಿಗೆ ಮಾತ್ರವಲ್ಲ ಗುಂಪು ಚಟುವಟಿಕೆಗಳಲ್ಲಿ ಎಲ್ಲರ ಏಳಿಗೆಗೆ ಮತ್ತು ಎಲ್ಲರೂ ಜೊತೆಗೆ ಮುಂದೆ ಬರಲು ಸಹಕಾರಿಯಾಗಿದೆ. ರೋವರ್ಸ್ ಮತ್ತು ರೇಜರ್ಸ್, ಸ್ಕೌಟ್ ಮತ್ತು ಗೈಡ್ ಇದರಲ್ಲಿ ಪ್ರತಿ ವರ್ಷವೂ ಎಷ್ಟು ಮಕ್ಕಳ ಸೇರ್ಪಡೆಯಾಗುತ್ತಿದೆ ಎಂಬ ಅಂಕಿ ಅಂಶವನ್ನು ದಾಖಲಿಸಬೇಕು ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಕೆ. ಗಂಗಪ್ಪ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯಾಗಿದೆ. ಶೈಕ್ಷಣಿಕವಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಸ್ತು, ಸಮಯ ಪಾಲನೆಯನ್ನು ಈ ರೀತಿಯ ಸಹಪಠ್ಯ ಚಟುವಟಿಕೆಗಳು ನೀಡುತ್ತದೆ ಎಂದರು.

ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ಭಟ್, ಹಿರಿಯ ತರಬೇತುದಾರ ಗುರುಮೂರ್ತಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಣ್ಣ ಸಿ.ಡಿ, ವಿಕಾಸ ಪದವಿ ಪೂರ್ವ ಕಾಲೇಜು ಸಂಚಾಲಕ ವಾಮನ ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ರತ್ನಾಕರ ಬನ್ನಡಿ ವಂದಿಸಿದರು. ಉಮೇಶ್. ಕೆ. ಆರ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗಹಿಸಿದ್ದರು.


Spread the love