Spread the love

ಮಂಗಳೂರು ಧರ್ಮಪ್ರಾಂತ್ಯದ ಮೆಗಾ ಬೈಬಲ್ ಸಮಾವೇಶಕ್ಕೆ ಎರಡನೇ ದಿನವೂ ಅಪಾರ ಜನಸ್ತೋಮ

ವರದಿ ಮತ್ತು ಚಿತ್ರಗಳು: ಕೆನರಾ ಸಂವಹನ ಕೇಂದ್ರ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ (MDSC) ಮತ್ತು ಬೈಬಲ್ ಆಯೋಗವು ಮಂಗಳೂರಿನ ಕಾರ್ಡೆಲ್ ಹೋಲಿ ಕ್ರಾಸ್ ಚರ್ಚ್‌ ಮೈದಾನದಲ್ಲಿ ನಡೆದ ಮೆಗಾ ಬೈಬಲ್ ಸಮಾವೇಶದ ಎರಡನೇ ದಿನದಂದು ಅಭೂತಪೂರ್ವ ಜನಸ್ತೋಮವನ್ನು ಕಂಡಿತು. ಫೆಬ್ರವರಿ 22, 2024 ರಂದು ಪ್ರಾರಂಭವಾದ ಈವೆಂಟ್ ಹೆಚ್ಚಿನ ಸಂಖ್ಯೆಯ ಪಾಲ್ಗೊಳ್ಳುವವರನ್ನು ಆಕರ್ಷಿಸುತ್ತಲೇ ಇದೆ.

ಎರಡನೆ ದಿನದ ಮಹಾಪೂಜೆಯನ್ನು ಶಿವಮೊಗ್ಗದ ಧರ್ಮಾಧ್ಯಕ್ಷರಾದ ರೈ| ರೆ|ಡಾ| ಫ್ರಾನ್ಸಿಸ್ ಸೆರಾವೊ, ಬೆಳ್ತಂಗಡಿ ಧರ್ಮಾಧ್ಯಕ್ಷರಾದ ರೈ| ರೆ|ಡಾ| ಲಾರೆನ್ಸ್ ಮುಕ್ಕುಜಿ ಮತ್ತು ಹಲವಾರು ಧರ್ಮಗುರುಗಳು ನೆರವೇರಿಸಿದರು.

ಆಧ್ಯಾತ್ಮಿಕ ನವೀಕರಣದ ಗುರಿಯನ್ನು ಹೊಂದಿರುವ ಈ ಸಮಾವೇಶವು ಮಂಗಳೂರು ಧರ್ಮಪ್ರಾಂತ್ಯದಲ್ಲಿ ಕ್ಯಾಥೋಲಿಕ್ ವರ್ಚಸ್ಸಿನ ನವೀಕರಣ ಚಳುವಳಿಯ ಸುವರ್ಣ ಮಹೋತ್ಸವ ವರ್ಷದ ಆರಂಭವನ್ನು ಸೂಚಿಸುತ್ತದೆ.

ಕೇರಳದ ಡಿವೈನ್ ರಿಟ್ರೀಟ್ ಸೆಂಟರ್‌ನಿಂದ ರೆ.ಫಾ. ಜೋಸೆಫ್ ಎಡಟ್ಟು ವಿ.ಸಿ. ಅವರು ನಡೆಸಿಕೊಡುವ ಸಮಾವೇಶನದಲ್ಲಿ ದೇವರ ಸ್ತುತಿ ಸ್ತೋತ್ರ, ವಿಮೋಚನೆಯ ಪ್ರಾರ್ಥನೆಗಳು, ಸಾಮೂಹಿಕ ಪೂಜೆ- ಆರಾಧನೆ ಗಳಿಂದ ಕೂಡಿದ್ದವು.

ಬಿಷಪ್ ಲಾರೆನ್ಸ್ ಪೂಜಾ ಪ್ರವಚನದಲ್ಲಿ ಯೇಸು ಕ್ರಿಸ್ತರ ಜೀವನ ಮತ್ತು ಪವಿತ್ರ ಆತ್ಮದ ಪರಿವರ್ತಕ ಪ್ರಭಾವದ ಮೂಲಕ ನಮ್ಮ ಆತ್ಮಗಳ ಶುದ್ಧೀಕರಣದ ಆಗತ್ಯತೆ ಮೇಲೆ ಬೋಧಿಸಿದರು. “ನಾವು ಯೇಸುವನ್ನು ನಮ್ಮ ರಾಜ ಮತ್ತು ಯಜಮಾನನಾಗಿ ಸ್ವೀಕರಿಸಿದಂತೆ, ನಮ್ಮನ್ನು ಆತನಿಂದ ದೂರ ಸೆಳೆಯುವ ದುಷ್ಟಶಕ್ತಿಯ ಪ್ರಯತ್ನಗಳ ವಿರುದ್ಧ ನಿರಂತರ ಹೋರಾಟವನ್ನು ನಡೆಸುತ್ತಿರಬೇಕು.”

“ಪ್ರಭು ಯೇಸುವನ್ನು ನಮ್ಮ ರಕ್ಷಕನನ್ನಾಗಿ ಸ್ವೀಕರಿಸುವ ನಮಗೆ, ಆತನ ಜೀವನ ನೀಡುವ ದೈವವಾಕ್ಯಗಳು ನಮ್ಮನ್ನು ಶುದ್ಧೀಕರಿಸುತ್ತವೆ ಮತ್ತು ಎಲ್ಲಾ ರೀತಿಯ ದುಷ್ಟ ಬಂಧನಗಳಿಂದ ನಮ್ಮನ್ನು ಮುಕ್ತಗೊಳಿಸುತ್ತವೆ.” ಎಂದು ಹೇಳಿದರು. ದೇವರ ಚಿತ್ತಕ್ಕೆ ಶರಣಾಗಿ ಮತ್ತು ನಮ್ಮ ಕರೆಗೆ ಯೋಗ್ಯವಾದ ಜೀವನವನ್ನು ನಡೆಸುವಂತೆ” ಅವರು ನೆರೆದಿರುವ ನಿಷ್ಠಾವಂತರನ್ನು ಆಹ್ವಾನಿಸಿದರು, “ಈ ಬೈಬಲ್ ಸಮಾವೇಶದ ಮೂಲಕ, ನಮ್ಮನ್ನು ಪ್ರೀತಿಸಿದ ಮತ್ತು ನಮಗಾಗಿ ತನ್ನ ಜೀವನವನ್ನು ತ್ಯಾಗ ಮಾಡಿದ ಯೇಸು ಕ್ರಿಸ್ತನು ನಮಗೆ ತನ್ನ ಪ್ರೀತಿಯನ್ನು ನೀಡುತ್ತಾನೆ ಮತ್ತು ಹೊಸ ಜೀವನ ಕರುಣಿಸುತ್ತಾನೆ”ಎಂದು ಭೋಧಿಸಿದರು.

ಎಂಡಿಎಸ್‌ಸಿಯ ಆಧ್ಯಾತ್ಮಿಕ ನಿರ್ದೇಶಕ ಫಾ.ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಕಮಿಷನ್‌ನ ಡಯೋಸಿಸನ್ ಡೈರೆಕ್ಟರ್ ಫಾ.ವಿಸೆಂಟ್ ಸಿಕ್ವೇರಾ, ಕಾರ್ಯಕ್ರಮದ ಸಂಯೋಜಕ ಕೆವನ್ ಡಿಸೋಜಾ, ಎಂಡಿಎಸ್‌ಸಿ ಕಾರ್ಯದರ್ಶಿ ಶ್ರೀಮತಿ ಬ್ಲಾಸಮ್ ರೇಗೊ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸಹೋದರ ಜೆರೆಮಿಯಾ, ಕ್ರಿಸ್ಟೋಫರ್ ಮತ್ತು ಅರುಣ್ ಲೋಬೋ ನೇತೃತ್ವದಲ್ಲಿ ಉತ್ಸಾಹಭರಿತ ಸ್ತುತಿ ಸ್ತೋತ್ರ ಆರಾಧನೆ ಭಕ್ತಿಯುತವಾಗಿ ನಡೆಯಿತು. ಕಾರ್ಡೆಲ್ ಚರ್ಚ್ ಗಾಯಕ ತಂಡವು ಗಾಯನದಲ್ಲಿ ಸೇರಿಕೊಂಡಿತು. ರೆ.ಫಾ.ಎಡಟ್ಟು ವಿ.ಸಿ. ದೇವರ ವಾಕ್ಯದ ಮೇಲೆ ಪ್ರವಚನೆ ಮತ್ತು ವಿಮೋಚನೆ ಪ್ರಾರ್ಥನೆ ನಡೆಸಿ ಭಕ್ತರನ್ನು ಆಳವಾಗಿ ದೇವರಲ್ಲಿ ಸೆಳೆಯುವಲ್ಲಿ ಪ್ರೇರಣಾದಾಯಕಾರಾದರು.

ನಾಲ್ಕು ದಿನಗಳಲ್ಲಿ ಮಂಗಳೂರು ಮತ್ತು ಇತರ ಕರ್ನಾಟಕ ಧರ್ಮಪ್ರಾಂತ್ಯದಾದ್ಯಂತ ವರ್ಚಸ್ವಿ ನಾಯಕರಿಗೆ ಅರ್ಧ ದಿನದ ಆಧ್ಯಾತ್ಮಿಕ ತರಬೇತಿ ಫಾದರ್ ಜೋಸೆಫ್ ಎಡಟ್ಟು ನಡೆಸಿದರು.


Spread the love

Exit mobile version