8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ಮೂವರ ಬಂಧನ

Spread the love

8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ಮೂವರ ಬಂಧನ

ಬಂಟ್ವಾಳ: 8 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಗೂಡಿನ ಬಳಿಯ ನಿವಾಸಿ ಗುಜರಿ ವ್ಯಾಪಾರಿ ಶೇಕಬ್ಬ(65), ಬೇಕರಿ ಸಾಮಾಗ್ರಿಗಳನ್ನು ಲೈನ್ ಸೇಲ್ ಮಾಡುವ ಅಂಬಾರಿ ಯಾನೆ ರಝಾಕ್ (35) ಹಾಗೂ ಹೊಟೇಲ್ ಕಾರ್ಮಿಕ ನವಾಝ್ (22) ಎಂದು ಗುರುತಿಸಲಾಗಿದೆ.

ಸಪ್ಟೆಂಬರ್ 19ರಂದು 8 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ನೀಡಿದ ದೂರನ್ನು ಬಂಟ್ವಾಳ ನಗರ ಠಾಣೆಯಲ್ಲಿ ಸ್ವೀಕರಿಸಿದ್ದು, ಪಿರ್ಯಾದಿ 8 ವರ್ಷದ ಬಾಲಕಿ ತನ್ನ ಅಜ್ಜಿಯ ಮನೆ ಗೂಡಿನಬಳಿ ಯಲ್ಲಿ ರುವಾಗ ನೆರೆಮನೆಯ ಅಂಬಾರಿ ಎಂಬಾತನ ಮನೆಗೆ ಹೋಗಿದ್ದು, ಅವನು ರಾತ್ರಿ 8 ಗಂಟೆ ಸಮಯಕ್ಕೆ ಮನೆ ಟೆರೇಸ್ ಲೈಂಗಿಕ ದೌರ್ಜನ್ಯ ಮಾಡಿ ಬೆದರಿಕೆ ಒಡ್ಡಿರುತ್ತಾನೆ. ಇದಾದ ಮನೆ ಹತ್ತಿರದ ಶೇಕಬ್ಬ ಗೂಡಿನ ಬಳಿ ಈತನು ಅಲ್ಲೇ ಹತ್ತಿರದ ಹೊಸ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಸಿರುತ್ತಾನೆ ಎಂದು ದೂರು ದಾಖಲಾಗಿತ್ತು ಆ ಪ್ರಕಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ..

ರಝಕ್, ತಂದೆ ಯೂಸುಫ್ ಪಿರ್ಯಾದಿ 8 ವರ್ಷದ ಬಾಲಕಿಗೆ ತನ್ನ ಮನೆ ಟೆರೇಸ್ ಕರೆದೊಯ್ದು ಲೈಂಗಿಕ ದೌರ್ಜನ್ಯ ಮಾಡಿ ಬೆದರಿಕೆ ಒಡ್ಡಿರುತ್ತಾನೆ. ಶೇಖಬ್ಬ 8 ವರ್ಷದ ಬಾಲಕಿಯನ್ನು ಗುಜರಿ ಅಂಗಡಿಯ ಹತ್ತಿರದ ಹೊಸ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಸಿರುತ್ತಾನೆ. ನವಾಜ್ ಬಾಲಕಿಗೆ ತನ್ನ ಗುಪ್ತಅಂಗವನ್ನು ತೋರಿಸಿ ಪ್ರೇರೇಪಿಸಿ ದೌರ್ಜನ್ಯ ಎಸಗಿರುತ್ತಾನೆ.

ಮೇಲಿನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು


Spread the love