ರೋಶನಿ ನಿಲಯದಲ್ಲಿ ಅಂತರಾಷ್ಟ್ರೀಯ ಸಮಾವೇಶ

Spread the love

ರೋಶನಿ ನಿಲಯದಲ್ಲಿ ಅಂತರಾಷ್ಟ್ರೀಯ ಸಮಾವೇಶ
“CRIFO 2K25 – Forensic Spectrum”

ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ ಸ್ನಾತಕೋತ್ತರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ (IQAC), ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜು, ರೋಶನಿ ನಿಲಯ, ಮಂಗಳೂರು, Tconnects, Getjobs ಮತ್ತು Skills in Security and Investigations Virtual Protect Security Pvt. Ltd. ಹಾಗೂ Covert Security India Consulting Services LLP, ಬೆಂಗಳೂರು ಇವರ ಸಹಯೋಗದಲ್ಲಿ CRIFO 2K25
“Forensic Spectrum: An Intersection of Technology and Crime Investigation” ಎಂಬ ವಿಚಾರದೊಂದಿಗೆ ಅಂತರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಸಮಾವೇಶವು ಫೆಬ್ರವರಿ 28 ಮತ್ತು ಮಾರ್ಚ್ 1, 2025 ರಂದು ನಮ್ಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.

ಶ್ರೀ ಯತೀಶ್ ಎನ್, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇವರು ಬೆಳಿಗ್ಗೆ 9:15 ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಯಾಗಿ ಮೇಜರ್ ಸೌರಭ್ ಶ್ರೀವತ್ಸವ, ನಿರ್ದೇಶಕರು, ಕ್ಲೀನ್ ಪ್ಲೇ ಕನ್ಸಲ್ಟಿಂಗ್ ಸರ್ವೀಸ್, ಬೆಂಗಳೂರು ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜಿನ ಪರೀಕ್ಷಾ ನಿಯಂತ್ರಕಿ ಹಾಗೂ ಸಹ ಪ್ರಾಧ್ಯಾಪಕಿ ಶ್ರೀಮತಿ ಸಿಸಿಲಿಯಾ ಎಫ್. ಗೋವಿಯಸ್ ರವರು ವಹಿಸಲಿದ್ದಾರೆ.

CRIFO 2K25 ಕಾರ್ಯಕ್ರಮದ ಸಹಯೋಜಕರು ಶ್ರೀ ಸಾಯಿ ಕೃಷ್ಣ ಡೊಮಲ, ವ್ಯವಸ್ಥಾಪಕ ನಿರ್ದೇಶಕರು, TConnects: A Risk Management Job Portal, Virtual Protect Security Private Ltd., ಹಾಗೂ ಕಾರ್ಯಕ್ರಮದ ಸಂಯೋಜಕಿಯಾದ ಡಾ. ಸರಿತಾ ಡಿಸೋಜ, ಮುಖ್ಯಸ್ಥೆ, ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ, ಸ್ನಾತಕೋತ್ತರ ವಿಭಾಗ ಮತ್ತು IQAC ಸಂಯೋಜಕಿ, ಹಾಗೂ ಕುಮಾರಿ ವೇದಾಶಿಣಿ ಎಸ್‌ ಗೌಡ, ವಿದ್ಯಾರ್ಥಿಸಂಯೋಜಕಿ, ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ, ಸ್ನಾತಕೋತ್ತರ ವಿಭಾಗ, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಮಂಗಳೂರು ಉಪಸ್ಥಿತರಿರಲಿದ್ದಾರೆ.

ವಿಶ್ವದ ವಿವಿಧ ದೇಶಗಳಲ್ಲಿರುವ ಅನೇಕ ಸಂಸ್ಥೆಗಳ ಪ್ರಾಧ್ಯಾಪಕರು, ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಸೇರಿ ಸುಮಾರು 150 ಜನ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. "Forensic Spectrum" ಎಂಬುದು ಆಧುನಿಕ ತಂತ್ರಜ್ಞಾನ ಮತ್ತು ಅಪರಾಧ ತನಿಖೆಯ ಸಂಗಮವನ್ನು ಸೂಚಿಸುತ್ತಿದ್ದು, ಇದು ಸಾಕ್ಷ್ಯ ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ವಿಧಾನದಲ್ಲಿ ಪರಿವರ್ತನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ವಿಚಾರವು ವೈಜ್ಞಾನಿಕ ಪರೀಕ್ಷೆಗಳು, ಡಿಜಿಟಲ್ ಫೊರೆನ್ಸಿಕ್, ಸುಧಾರಿತ ಇಮೇಜಿಂಗ್ ತಂತ್ರಗಳು ಮತ್ತು ದತ್ತಾಂಶ ವಿಶ್ಲೇಷಣೆ ಮುಂತಾದ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ತನಿಖಾಧಿಕಾರಿಗಳು ಅಪರಾಧ ಸ್ಥಳವನ್ನು ಪುನರ್ ನಿರ್ಮಿಸಲು, ಆರೋಪಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಪ್ರಸ್ತುತ ಸಮಾವೇಶದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಅನಂತ್ ಪ್ರಭು ಜಿ, ಕಂಪ್ಯೂಟರ್ ಎಂಜಿನಿಯರಿಂಗ್ ಪ್ರೊಫೆಸರ್, ಸೈಬರ್ ಸುರಕ್ಷತೆ ಮತ್ತು ಸೈಬರ್ ಕಾನೂನು ತರಬೇತುದಾರರು “AI and Digital Forensics: A New Frontier In Cyber Crime Investigation” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಡಾ. ವಜಾಘತಾಲಿ ಮೊಹಮ್ಮದ್, ಪೋಸ್ಟ್ ಡಾಕ್ಟೋರಲ್ ಸೈಂಟಿಸ್ಟ್ (ನ್ಯೂರೋಕೆಮಿಸ್ಟ್ರಿ), ಜೈವಿಕ ರಸಾಯನಶಾಸ್ತ್ರ ಮತ್ತು ಜೈವಿಕ ಭೌತಶಾಸ್ತ್ರ ವಿಭಾಗ, ಸ್ಟಾಕ್‌ಹೋಮ್ ಯುನಿವರ್ಸಿಟಿ, ಸ್ವೀಡನ್ ಅವರು “Mastering Research & Grants: A Roadmap To Publication & Funding Success” ಕುರಿತು ಉಪನ್ಯಾಸ ನೀಡಲಿದ್ದಾರೆ.
ಶ್ರೀಮತಿ ಅಶ್ವಿನಿ ಡಿಸೋಜ, ವಕೀಲರು “An Overview of Criminal Law: BNS and Emerging Legal Trends” ವಿಷಯದ ಕುರಿತು ಮಾಹಿತಿ ನೀಡಲಿದ್ದಾರೆ.
ಶ್ರೀ ಸಾಯಿ ಕೃಷ್ಣ ಡೊಮಲ, ವ್ಯವಸ್ಥಾಪಕ ನಿರ್ದೇಶಕರು, TConnects: A Risk Management Job Portal, Virtual Protect Security Pvt. Ltd. ಅವರು “Empowering Organizations with Smart Resource & Skill Ecosystems” ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಶ್ರೀ ತೇಜಸ್ ಅಭಿಷೇಕ್ ಎನ್, ಟೀಮ್ ಲೀಡ್, ಸೆಕ್ಯುರಿಟಿ ಆಪರೇಷನ್, Virtual Protect Security, ಅವರು “Transforming Fleet Security Through Intelligent Risk Management” ಭದ್ರತಾ ವಾಹನದ ಪ್ರದರ್ಶನ ಮತ್ತು ಕಾರ್ಯವೈಖರಿಯನ್ನು ವಿವರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ, ವಿವಿಧ ಸ್ಪರ್ಧೆಗಳಾದ ರಸಪ್ರಶ್ನೆ, ಟ್ರೆಶರ್ ಹಂಟ್ ಹಾಗೂ ಸ್ಟ್ರೆಸ್ ಇಂಟರ್ವ್ಯೂ ಮತ್ತು ಹಲವು ವಿಷಯದಲ್ಲಿ ನಡೆಸಿದ ಸಂಶೋಧನಾ ಪ್ರಬಂಧಗಳ ಮಂಡಣೆಯನ್ನು ಆಯೋಜಿಸಲಾಗಿದೆ. ಇದೇ ದಿನದಂದು ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ,ಸ್ನಾತಕೋತ್ತರ ವಿಭಾಗ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ , ರೋಶನಿ ನಿಲಯ, ಮಂಗಳೂರು ಮತ್ತು Virtual Protect Security Pvt. Ltd., ಬೆಂಗಳೂರು ನಡುವಿನ ಶೈಕ್ಷಣಿಕ ಸಹಯೋಗದ ಒಪ್ಪಂದ (MOU) ಸಹಿ ಮಾಡಲಾಗುವುದು.

ಸಮಾರೋಪ ಸಮಾರಂಭ :
ಸಮಾರೋಪ ಸಮಾರಂಭ ಮಾರ್ಚ್ 1, 2025, ಮಧ್ಯಾಹ್ನ 12:30ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಸಹ ಪ್ರಾಧ್ಯಾಪಕಿ ಶ್ರೀಮತಿ ವಿನೀತಾ ಕೆ., (ನಿವೃತ್ತ) – ಮಾಜಿ ನಿಬಂಧಕರು (ಮೌಲ್ಯಮಾಪನ) & ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಪದವಿ ವಿಭಾಗದ ಮುಖ್ಯಸ್ಥೆ, ಅವರು ಪಾಲ್ಗೊಳ್ಳಲಿದ್ದಾರೆ. ಗೌರವಾತಿಥಿಗಳಾಗಿ ಶ್ರೀ ಸೋಮಶಂಕರ ಎನ್., ಪೊಲೀಸ್ ನಿರೀಕ್ಷಕರು ಹಾಗೂ ಬೆರಳುಮುದ್ರೆ ತಜ್ಞರು, ಬೆರಳು ಮುದ್ರೆ ಘಟಕ, ಮಂಗಳೂರು ನಗರ ಹಾಗೂ ಡಾ. ರೋಸಾ ನಿಮ್ಮಿ ಮ್ಯಾಥ್ಯೂ, IQAC ಸಹ ಸಂಯೋಜಕ, ಕೌನ್ಸೆಲಿಂಗ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಇವರು ಪಾಲ್ಗೊಳ್ಳಲಿದ್ದಾರೆ. ಕುಮಾರಿ ಫೆಬಾ ಆರ್‌ ಶಮ್ಮಾ, ವಿದ್ಯಾರ್ಥಿ ಸಂಯೋಜಕಿ, ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ, ಸ್ನಾತಕೋತ್ತರ ವಿಭಾಗ, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಮಂಗಳೂರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸೋಫಿಯಾ ಎನ್ ಫರ್ನಾಂಡಿಸ್, ಪ್ರಾಂಶುಪಾಲರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ , ಮಂಗಳೂರು ವಹಿಸಲಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments