ದ.ಕ, ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ

Spread the love

ದ.ಕ, ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಇಂದಿನಿಂದಲೇ ಹೊಸ ಹಾಲಿನ ದರ ಜಾರಿಯಾಗಲಿದ್ದು, ಪರಿಷ್ಕೃತ ದರ ಪಟ್ಟಿ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ನಂದಿನಿ ಹಾಲಿನ ಅಧಿಕೃತ ಡೀಲರ್‌ಗಳು ಪರಿಷ್ಕೃತ ದರದಲ್ಲಿಯೇ ವ್ಯವಹರಿಸಿ ಒಕ್ಕೂಟದೊಂದಿಗೆ ಕೈಜೋಡಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಸರಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಲ ನಿರ್ದೇಶನದಂತೆ, ಏ.1ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಡೀಲರುಗಳು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗರಿಷ್ಠ ಮಾರಾಟ ದರಕ್ಕೆ ಮೀರದಂತೆ ಮಾರಾಟ ಮಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಕೋರಲಾಗಿದೆ.

ಗರಿಷ್ಠ ಮಾರಾಟ ದರ: ನಂದಿನಿ ಟೋನ್ಡ್ ಹಾಲು (500 ಮಿ.ಲೀ.) 24ರೂ., ನಂದಿನಿ ಟೋನ್ಡ್ ಹಾಲು (1000 ಮಿ.ಲೀ.) 46ರೂ., ನಂದಿನಿ ಹೋಮೊಜಿನೈಸ್ಡ್‌ ಹಸುವಿನ ಹಾಲು (500 ಮಿ.ಲೀ.) 26ರೂ., ನಂದಿನಿ ಹೋಮೊಜಿನೈಸ್ಡ್‌ ಹಸುವಿನ ಹಾಲು (6 ಲೀ. ಜಂಬೋ) 312ರೂ., ನಂದಿನಿ ಶುಭಂ ಹಾಲು (500 ಮಿ.ಲೀ.) 27ರೂ., ಮೊಸರು (200 ಗ್ರಾಂ) 15ರೂ., ಮೊಸರು (415 ಗ್ರಾಂ) 27ರೂ., ಮೊಸರು (6 ಕೆಜಿ ಜಂಬೋ) 336ರೂ., ಸಿಹಿ ಲಸ್ಸಿ (200 ಮಿ.ಲೀ.)15ರೂ., ಮ್ಯಾಂಗೋ ಲಸ್ಸಿ (200 ಮಿ.ಲೀ.) 19ರೂ., ಮಸಾಲ ಮಜ್ಜಿಗೆ (200 ಮಿ.ಲೀ.) 12ರೂ., ಸ್ಪೈಸಿ ಮಜ್ಜಿಗೆ (180 ಮಿ.ಲೀ.) 8ರೂ., ಜೀರಾ ಮಜ್ಜಿಗೆ (250 ಮಿ.ಲೀ.) 14ರೂ., ಸಾದಾ ಮಜ್ಜಿಗೆ (500 ಮಿ.ಲೀ.) 26ರೂ., ಸಾದಾ ಮಜ್ಜಿಗೆ (1000 ಮಿ.ಲೀ.) 51ರೂ.

ಒಕ್ಕೂಟದಲ್ಲಿ ಹಳೆಯ ದರಗಳು ಮುದ್ರಿತವಾಗಿರುವ ಪೌಚ್‌ ಫಿಲಂ ದಾಸ್ತಾನು ಮುಗಿಯುವವರೆಗೆ ಹಳೆಯ ದರಗಳು ಮುದ್ರಿತವಾಗಿರುವ ಪ್ಯಾಕೆಟ್‌ಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ಯಾಕ್‌ ಮಾಡಿ ಸರಬರಾಜು ಮಾಡಲಾಗುವುದು. ಎಲ್ಲ ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರುಗಳು ಪರಿಷ್ಕೃತ ದರದಲ್ಲಿಯೇ ವ್ಯವಹರಿಸಿ ಒಕ್ಕೂಟದೊಂದಿಗೆ ಸಹಕರಿಸಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments