Home Mangalorean News Kannada News 9.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಗೆ ಶಿಲಾನ್ಯಾಸ

9.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಗೆ ಶಿಲಾನ್ಯಾಸ

Spread the love

ಕೊಂಪದವು: 9.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಗೆ ಶಿಲಾನ್ಯಾಸ 

ಮಂಗಳೂರು:  ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶನಿವಾರ ಶಾಸಕ ಮೊಹಿದೀನ್ ಬಾವಾ ಶಿಲಾನ್ಯಾಸ ನೆರವೇರಿಸಿದರು.

ಕೊಂಪದವು ನೆಲ್ಲಿತೀರ್ಥ ದೇವಸ್ಥಾನ ಸಮೀಪದ ಜಾಗದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್‍ನಲ್ಲಿ ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೆರೆಯುವುದಾಗಿ ಪ್ರಕಟಿಸಿದ್ದರು. ಅದರಂತೆ ಮಂಗಳೂರು ಉತ್ತರ ಕ್ಷೇತ್ರದ ಗುರುಪುರ ಹೋಬಳಿಯ ಕೊಂಪದವಿನಲ್ಲಿ  ಸುಮಾರು 9.5 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಅತ್ಯಾಧುನಿಕ ವಸತಿ ಶಾಲೆ ಸ್ಥಾಪನೆಯಾಗಲಿದೆ. ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿಲಾಗಿದೆ ಎಂದು ಅವರು ಹೇಳಿದರು. ಈ ಭಾಗದ ಮೂಲಸೌಕರ್ಯ ವ್ಯವಸ್ಥೆಗಳನ್ನು ಇನ್ನಷ್ಟು ಸುಧಾರಿಸಲು ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಕೃಷ್ಣ ಅಮೀನ್, ಮುಖಂಡರಾದ ಪೃಥ್ವೀರಾಜ್, ದುರ್ಗಾಪ್ರಸಾದ್ ಶೆಟ್ಟಿ, ಶಿವಪ್ಪ ಮತ್ತಿತರರು ಇದ್ದರು.


Spread the love

Exit mobile version