ಹೆಣಗಳು ಅಳುತ್ತಿವೆ

Spread the love

ಹೆಣಗಳು ಅಳುತ್ತಿವೆ

ನಾನು ನಿರತನಾದೆ ಕೊರೋನಾ ರೋಗಿಗಳ ಸೇವೆಯಲ್ಲಿ
ವೈದ್ಯನಾಗಿ ಕರ್ತವ್ಯ ಮೆರೆದೆ ಆಸ್ಪತ್ರೆ ಕೋಣೆಯಲಿ
ಅರಿವಿಲ್ಲದೆ ಸದ್ದಿಲ್ಲದೆ ಮಹಾಮಾರಿಗೆ ಆದೆ ನಾ ಬಲಿ
ಸಿಕ್ಕಿಲ್ಲ ಅವಕಾಶ ಹೇಳಲು ವಿದಾಯ ಹೆಂಡತಿ ಮಕ್ಕಳಲ್ಲಿ

ಕನಸಲ್ಲೂ ಎಣಿಸಿರಲಿಲ್ಲ ಮಾಡುವುದು ನನ್ನ ಅಂತ್ಯ
ಕೊರೋನಾವೆಂಬ ಮಹಾಮಾರಿಯ ಪೆಡಂಭೂತ
ಸೇವೆಯಲ್ಲಿರುವಾಗ ಹೇಳಿದೆ ನನ್ನ ಕೊನೆಯ ಆಸೆ
ನನ್ನ ಹುಟ್ಟಿದ ಮಣ್ಣಿನಲ್ಲಿ ವಿಲೀನವಾಗೊ ಮಹದಾಸೆ

ಕೂಗಿತು ನನ್ನ ಶವ, ನೀವೆಲ್ಲಾ ಪ್ರತಿಭಟಿಸಿದಾಗ
ಆತ್ಮವು ಪರಿತಪಿಸಿತು ನಿಮ್ಮಬಹುಮಾನ ನೆನೆದಾಗ
ಶವ ಹೂಳಲು ಬಿಡದ ಕ್ರೂರತೆ ನಿಮ್ಮದು
ನಿಮ್ಮ ಬದುಕಿಸ ಹೋಗಿ ಶವವಾದ ಧನ್ಯತೆ ನನ್ನದು

ಜಾತಿ, ಧರ್ಮ, ಬಂದುತ್ವ ಭಾರತೀಯ ಸಂಸ್ಕೃತಿ
ಕೊರೋನಾಗಿಂತ ಭೀಕರ ನಿಮ್ಮಯ ವಿಕೃತಿ
ವೈದ್ಯನಾಗಿರುವಾಗ ನನ್ನನು ದೇವರಂತೆ ಪೂಜಿಸಿದರಿ
ಕೊರೋನಾಕ್ಕೆ ಬಲಿಯಾದಾಗ ನನ್ನ ದೇಹವನ್ನು ದ್ವೇಷಿಸಿದಿರಿ

ಜೀವನ ಶಾಶ್ವತವಲ್ಲ ತಿಳಿಯೋ ಮನುಜ
ಇಂದು ನಾನು, ನಾಳೆ ನೀನು ಮಣ್ಣಿನ ಖಣಜ
ಕೊನೆಯಾಗದೇ ನಿಮ್ಮ ರಾಜಕೀಯ ಪಿತೂರಿ
ಹೆಣಗಳು ಅಳುತ್ತಿವೆ ಹುಡುಕಿ ಸ್ಮಶಾನದ ದಾರಿ!

                                                                 

ವಾಯ್ಲೆಟ್ ಪಿರೇರಾ

Also Read:


Spread the love
1 Comment
Inline Feedbacks
View all comments
4 years ago

It is sad to see the situation of the world specially those countries where the dead bodies are filed in line for burial. we have not seen this kind of situation where even the beloved are not able to say good bye. Living become mum but the bodies speak and communicate a lot