Home Mangalorean News Kannada News #MeToo ಅಭಿಯಾನ ಹೆಣ್ಣಿನ ಮಾನ ಹರಾಜು ಹಾಕುವ ಅಭಿಯಾನ ಆಗಬಾರದು: ಸಚಿವೆ ಜಯಮಾಲಾ

#MeToo ಅಭಿಯಾನ ಹೆಣ್ಣಿನ ಮಾನ ಹರಾಜು ಹಾಕುವ ಅಭಿಯಾನ ಆಗಬಾರದು: ಸಚಿವೆ ಜಯಮಾಲಾ

Spread the love

#MeToo ಅಭಿಯಾನ ಹೆಣ್ಣಿನ ಮಾನ ಹರಾಜು ಹಾಕುವ ಅಭಿಯಾನ ಆಗಬಾರದು: ಸಚಿವೆ ಜಯಮಾಲಾ

ಬೈಂದೂರು: “ಮೀಟೂ” ಅಭಿಯಾನ ಹೆಣ್ಣಿನ ಮಾನ ಹರಾಜು ಹಾಕುವ ಅಭಿಯಾನವಾಗಬಾರದು ಎಂದು ನಟಿ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದ್ದಾರೆ.

ಬೈಂದೂರಿನಲ್ಲಿ ಶಿವಮೊಗ್ಗ ಲೋಕಸಭೆ ಉಪಚುನವಣೆ ಪ್ರಚಾರದ ವೇಳೆ ಮಾದ್ಯಮಗಳೊಡನೆ ಮಾತನಾಡಿದ ಸಚಿವೆ “ಮೀಟೂ ಹೆಣ್ಣೊಬ್ಬಳ ಮಾನ ಹರಾಜು ಹಾಕುವ ಅಭಿಯಾನವಾಗಬಾರದು. ಹೆಣ್ಣು ತನ್ನ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳ ಬಯಸಿದಾಗ ಆಕೆಗೆ ಬೆಂಬಲ ನೀಡಬೇಕು. ಹಾಗೆಯೇ ಹೆಣ್ಣಿನ ರಕ್ಷಣೆ ಎನ್ನುವ ಹೆಸರಲ್ಲಿ ಗಂಡನ್ನು ದೂಷಿಸಬಾರದು” ಎಂದರು.

“ಕನ್ನಡ ಚಿತ್ರರಂಗಕ್ಕೆ 85 ವರ್ಷಗಳ ಇತಿಹಾಸ ಇದೆ. ಮೀಟೂ ಅಭಿಯಾನದಿಂದ ಚಿತ್ರರಂಗವನ್ನು ಇಬ್ಬಾಗ ಮಾಡಲು ಸಾಧ್ಯವಿಲ್ಲ.” ಎಂದ ಜಯಮಾಲಾ ತಮ್ಮ ಕಾಲದ ಚಿತ್ರರಂಗವನ್ನು ನೆನೆದಿದ್ದಾರೆ.

“ಡಾ. ರಾಜ್ ಕುಮಾರ್ ಕಾಲಘಟ್ಟದವಳಾದ ನಾನು ಚಿತ್ರರಂಗವನ್ನು ಬಹು ವರ್ಷಗಳಿಂದ ಕಂಡಿದ್ದೇನೆ. ನಮ್ಮ ಕಾಲ ಸುವರ್ಣಯುಗವಾಗಿತ್ತು. ನನಗೆ ಇದುವರೆಗೆ ಇಂತಹಾ ಯಾವಕಹಿ ಅನುಭವಗಳಾಗಿಲ್ಲ. “46 ವರ್ಷ 75 ಸಿನಿಮಾ ಮಾಡಿದ್ದೇನೆ.ನನಗೆ ಯಾವ ಕೆಟ್ಟ ಅನುಭವವಾಗಿಲ್ಲ” ಎಂದಿದ್ದಾರೆ.

ನಟ ಅರ್ಜುನ್ ಸರ್ಜಾ ಸರಳ ವ್ಯಕ್ತಿ. ಸಜ್ಜನ ಹುಡುಗ, ಆತನ ತಂದೆಯೊಡನೆ ಸಹ ನಾನು ಅಭಿನಯಿಸಿದ್ದೇನೆ ಎಂದುಜಯಮಾಲಾ ಸ್ಮರಿಸಿದ್ದಾರೆ.

“ಈಗಿನ ಚಿತ್ರರಂಗದ ಕುರಿತು ನನಗೆ ಅಷ್ಟೊಂದು ತಿಳಿದಿಲ್ಲ. ಶ್ರುತಿ ಹರಿಹರನ್ ಹಾಗೂ ಅರ್ಜುನ್ ವಿಚಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮನಿಸಲಿದೆ. ಚೆನ್ನೇಗೌಡರು ಸಭೆ ಕರೆದಿದಾರೆ. ನಾನು ಹೇಳುವುದೆಂದರೆ ಯಾವ ಹೆಣ್ಣಿಗೆ ಸಮಸ್ಯೆ ಆಗಬಾರದು, ಹಾಗೆಯೇ ಯಾವ ಪುರುಷನಿಗೂ ಅನ್ಯಾಯವಾಗಬಾರದು. ಇದೀಗ ಆರಂಬವಾಗಿರುವ ಮೀಟೂ ಅಭಿಯಾನ ಒಂದು ಉತ್ತಮ ಅಭಿಯಾನ. ಇದು ಹೆಣ್ಣಿನ ಆತ್ಮಸ್ಥೈರ್ಯವನ್ನು ಹೆಚಿಸುತ್ತದೆ” ಅವರು ಹೇಳಿದ್ದಾರೆ.


Spread the love

Exit mobile version