29.5 C
Mangalore
Wednesday, April 2, 2025

Landmark – Investors Meet

Click Here for More Information

Congratulations Dear Carol and Delsum

Congratulations On your Wedding Day  Don't write your names in the sky - the wind will blow them away, Don't leave them in the sand -...

Ian Mascarenhas (27), son of Stephen Bondel

Ian Mascarenhas (27), son of Stephen (Hemacharya) and Anna Mascarenhas, brother of Ina passed away on December 23. The body will be kept for public...

Lagori Championship 2018

ಬಾಲ್ಯದ ನೆನಪುಗಳು ಮತ್ತೊಮ್ಮೆ ಹಸಿರಾಗುತ್ತಿದೆ.ಕರ್ನಾಟಕದ ಕರಾವಳಿಯ ಮಣ್ಣಿನಲ್ಲಿ ಗ್ರಾಮೀಣ ಸೊಗಡಿನ ಲಗೋರಿ ಕ್ರೀಡೆ ನಿಮ್ಮೆಲ್ಲರ ನೆನಪುಗಳಿಗೆ ನೀರೆರೆಯಲು ಅಣಿಯಾಗುತ್ತಿದೆ. ಬಾಲ್ಯಕಾಲದಲಿ ಆಟದ ಮೈದಾನದಲಿ ಆಡಿದ ಆಟಗಳಲ್ಲಿ ಮನಸ್ಸಿನಂಗಳದಿಂದ ಎಂದೂ ಅಳಿಯದೆ ಇರುವಂತಹ ಕೆಲವೊಂದು ಗ್ರಾಮೀಣ ಸೊಗಡಿನಾಟಗಳಲ್ಲಿ ಲಗೋರಿಯು ಒಂದು ಆದರೆ ಇತ್ತೀಚಿನ ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಲಗೋರಿಯಂತಹ ಹಲವಾರು ಗ್ರಾಮೀಣ ಸೊಗಡಿನ ಕ್ರೀಡೆಗಳು ಅಳಿವಿನಂಚಿನಲ್ಲಿವೆ. ಇಂತಹ ಅಳಿವಿನಂಚಿನ ಕ್ರೀಡೆಗಳಲ್ಲಿ ಲಗೋರಿಯು ಒಂದು. ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟಲಗೋರಿ. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮ್ಯ ಪ್ರದೇಶಗಳಲ್ಲಿ ಮಾತ್ರ ಸಿಗುವವರು. ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸಿವವರು. ಮೊದಲನೆಯ ತಂಡದವರು 7ರಿಂದ 9ಕಲ್ಲುಗಳನ್ನು ಒಂದರ ಮೇಲೊಂದುಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು. ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ. ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾದರು ಕಲ್ಲುಗಳನ್ನು ಜೋಡಿಸುವುದರಲ್ಲಿಯಶಸ್ವಿಯಾದಲ್ಲಿ ಆ ತಂಡವೇ ಈ ಆಟದಲ್ಲಿ ವಿಜಯಿಗಳು. ಇಂತಹ ಸುಂದರ ಗ್ರಾಮೀಣ ಕೀಡೆಯನ್ನು  ಮುಖ್ಯವಾಹಿನಿಗೆ ತರುವ ಕಾರ್ಯವೂ ಕರಾವಳಿಯಲ್ಲಿ ಪಾತ್‌ವೇ ಎಂಬ ಸಂಸ್ಥೆಯಿಂದನಡೆಯುತ್ತಿದೆ ಬಾಲ್ಯದಲ್ಲಿ ಪ್ಲಾಸ್ಟಿಕ್ ಬಾಲ್ ಅಥವಾ ಪೇಪರ್‌ ಬಾಲ್ ಹಾಗು ಹೆಂಚಿನ ಬಿಲ್ಲೆಗಳನ್ನು ಉಪಯೋಗಿಸಿ ಆಡುತ್ತಿದಂತಹ ಲಗೋರಿ ಕ್ರೀಡೆಗೆ ಆಧುನಿಕ ಸ್ಪರ್ಶವನ್ನು ನೀಡಿ ಕಳೆದ ಬಾರಿ ಜುಲೈ ತಿಂಗಳಿನಲ್ಲಿಜಿಲ್ಲಾ ಮಟ್ಟದ "ಮೊದಲ ಲಗೋರಿ ತುಳುನಾಡು ಕಪ್‌"ನ್ನು ಅದ್ದೂರಿಯಾಗಿ ಆಯೋಜಿಸಿ ಸೈ ಎನಿಸಿಕೊಂಡಿದೆ. ಇದರಲ್ಲಿ ಕರಾವಳಿಯ ಸುಮಾರು 20 ತಂಡಗಳು ಭಾಗವಹಿಸಿದ್ದವು. ಹಾಗೂ ಇದರಆಯೋಜನೆಯಿಂದ ಪ್ರಭಾವಗೊಂಡ " ಅಮೇಚುರ್ ಲಗೋರಿ ಫೆಡರೇಷನ್ ಆಫ್ ಇಂಡಿಯಾ " ಏಳನೇ ರಾಷ್ಟ್ರೀಯ ಲಗೋರಿ ಚಾಂಪಿಯನ್‌‌ ಶಿಪ್ ನ್ನು ಪಾತ್‌ವೇ ತಂಡದೊಂದಿಗೆ ಜೊತೆಯಾಗಿಮಂಗಳೂರಿನಲ್ಲಿ ಆಯೋಜಿಸಲು ಒಪ್ಪಿಕೊಂಡಿತು. ರಾಷ್ಟ್ರೀಯ ಲಗೋರಿ ಚಾಂಪಿಯನ್ ಶಿಪನ್ನು ಆಯೋಜಿಸುವ ಜವಾಬ್ದಾರಿ ಈಗ ಪಾತ್‌ವೇ ತಂಡದ ಮೇಲಿದೆ. ಹಾಗು ಇದರಲ್ಲಿ ದೇಶದ  20 ರಿಂದ 25 ತಂಡಗಳು ಭಾಗವಹಿಸಲಿದೆ.ಈ ಕ್ರೀಡಾಕೂಟಯಶಸ್ವಿಯಾಗಬೇಕಾದರೆ ಜನರ ಸಹಕಾರ ಬೇಕು. ಲಗೋರಿಯ ಜೊತೆಜೊತೆಗೆ ಸಮಾಜದಲ್ಲಿ ತುಳಿತಕ್ಕೊಳಗಾಗುತ್ತಿರುವ ಮಂಗಳಮುಖಿಯರ ಕೀಳರಿಮೆಯನ್ನು ಕೂಡ ದೂರ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ವಿಶೇಷವಾದ ಕಾರ್ಯವನ್ನುಈ ಪಾತ್‌ವೇ ತಂಡವು ಮಾಡುತ್ತಿದೆ. ಪಾತ್‌ವೇ ಲಗೋರಿಯ ರಾಯಭಾರಿಯಾಗಿ ಯಾವುದೆ ಮಾಡೆಲ್ಸ್‌ಗಳನ್ನು ಆಯ್ಕೆ ಮಾಡದೆ ಪರಿವರ್ತನ ಎಂಬ ಸಂಸ್ಥೆಯ ಸಂಜನಾ ಎಂಬ ಲಿಂಗತ್ವ  ಅಲ್ಪಸಂಖ್ಯಾತೆಯನ್ನು ಆಯ್ಕೆ ಮಾಡಿ ಸಮಾಜಕ್ಕೆ ಮಾದರಿಯಾಗಿ ಎಲ್ಲರು ಹುಬ್ಬೇರಿಸಿ ಶ್ಲಾಘಿಸುವಂತಹ ಕಾರ್ಯವನ್ನು ಮಾಡುತ್ತಿದೆ. ಇಂತಹ ಅದ್ವಿತೀಯ ಹೆಜ್ಜೆ ಇಡುತ್ತಿರುವ ಪಾತ್‌ವೇ ಸಂಸ್ಥೆಗೆ ಸಮುದಾಯ ಜೀವಿಗಳ ಹಾಗೂ ಕ್ರೀಡಾ ಪ್ರೇಮಿಗಳಿಂದ ಸಹಕಾರ ಬೇಕಾಗಿದೆ. ಆರ್ಥಿಕವಾಗಿ ಪ್ರಬಲವಾಗಿರದ ಫೆಡರೇಶನ್ ಹಾಗುಪಾತ್‌ವೇ ತಂಡವೂ ವಿಭಿನ್ನವಾದ ಒಂದು ಹೆಜ್ಜೆಯನ್ನು ಇಡುತ್ತಿದೆ.ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿ ಕೋರಿದೆ. ಈ ಲಗೋರಿ ಕ್ರೀಡಾಕೂಟವು ಜನವರಿ 5,6 ಹಾಗು 7 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಇದು ಅನೇಕ ಟಿವಿ ಮಾಧ್ಯಮಗಳಲ್ಲಿಪ್ರಸಾರವಾಗಲಿದೆ. ಇಂತಹ ಸುಂದರ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಆಯೋಜಿಸಲಾಗಿರುವ ಕ್ರೀಡೆಯನ್ನು ಆಯೋಜಿಸಲು...

Members Login

Obituary

Congratulations