ಅ. 24-ನ. 10 : ದಕ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ “ಮಾದಕ ದ್ರವ್ಯ ವಿರೋಧಿ ಅಭಿಯಾನ

Spread the love

ಅ. 24-ನ. 10 : ದಕ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ “ಮಾದಕ ದ್ರವ್ಯ ವಿರೋಧಿ ಅಭಿಯಾನ

ಮಂಗಳೂರು: ಅಕ್ಟೋಬರ್ 24 ರಿಂದ ನವಂಬರ್ 10ರವರೆಗೆ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಡೆಯುವ “ಮಾದಕ ದ್ರವ್ಯ ವಿರೋಧಿ ಅಭಿಯಾನ”ದ ಉದ್ಘಾಟನ ಸಮಾರಂಭ ನಾಳೆ ಮಂಗಳೂರಿನ ಆಲೋಶಿಯಸ್ ಕಾಲೇಜಿನಲ್ಲಿ ಬೆಳಿಗ್ಗೆ 9:00 ಘಂಟೆಗೆ ನಡೆಯಲಿದೆಯಂದು ಜಿಲ್ಲಾ ಎನ್.ಎಸ್.ಯು.ಐ ಅದ್ಯಕ್ಷರಾದ ಅಬ್ದುಲ್ ಬಿನ್  ಪತ್ರಿಕಾ  ಗೋಷ್ಠಿಯಲ್ಲಿ ತಿಳಿಸಿದರು.

ಉಧ್ಘಾಟನ ಸಮಾರಂಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ,ಆಹಾರ ಮತ್ತು ನಾಗರಿಕ ಸರಭರಾಜು ಸಚಿವರಾದ ಯು.ಟಿ ಖಾದರ್,ಮಂಗಳೂರು ಶಾಸಕರಾದ ಜೆ.ಆರ್.ಲೋಬೊ ಮತ್ತು ಮೊಯಿದಿನ್ ಭಾವ,ಜಿಲ್ಲಾ ಯುವ ಕಾಂಗ್ರೇಸ್ ಅದ್ಯಕ್ಷರಾದ ಮಿಥುನ್ ರೈ ಹಾಗೂ ಹಲವಾರು ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರೀಕಾಗೋಷ್ಟಿಯಲ್ಲಿ ಜಿಲ್ಲಾ ಎನ್.ಎಸ್.ಯು.ಐ ಅದ್ಯಕ್ಷರಾದ ಅಬ್ದುಲ್ ಬಿನ್, ಯುವಕಾಂಗ್ರೇಸ್ ರಾಜ್ಯಕಾರ್ಯದರ್ಶಿ ಸುಹೈಲ್ ಕಂದಕ್, ಎನ್.ಎಸ್.ಯು.ಐ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಹಮದ್ ಸವಾದ್,ರಹ್ಮಾನ್ ಹೌಫ್ ಮತ್ತು ಸದಸ್ಯರಾದ ಸುಹಾನ್ ಆಳ್ವ,ನಿರಾಲ್ ಶೆಟ್ಟಿ,ಸಂಜಯ್,ಅವೀಜ್ ಉಪಸ್ಥಿತರಿದ್ದರು.

ಸಿ.ಎಂ ಸಿದ್ದರಾಮಯ್ಯರಿಂದ ಮಾದಕ ದ್ರವ್ಯ ವಿರೋದಿ ಅಭಿಯಾನಕ್ಕೆ ಚಾಲನೆ

ಎನ್.ಎಸ್.ಯು.ಐ ದಕ್ಷಿಣಕನ್ನಡ ಜಿಲ್ಲಾ ಸಮಿತಿ ಇದರ ವತಿಯಿಂದ ಅಕ್ಟೋಬರ್ 24 ರಿಂದ ನವಂಬರ್ 10ರವರೆಗೆ ನಡೆಯಲಿರುವ ‘ಮಾಧಕ ದ್ರವ್ಯ ವಿರೋದಿ ಅಭಿಯಾನದ’ ಪೋಸ್ಟರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಭರಾಜು ಸಚಿವರಾದ ಯು.ಟಿ ಖಾದರ್,ಜಿಲ್ಲಾ ಎನ್.ಎಸ್.ಯು.ಐ ಅದ್ಯಕ್ಷರಾದ ಅಬ್ದುಲ್ಲ ಬಿನ್ನು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಸವಾದ್,ಹೌಫ್ ರಹ್ಮಾನ್ ಹಾಗೂ ರಾಜ್ಯ ಕಾರ್ಯದರ್ಶಿ ರೂಪೇಶ್ ರೈ,ಫಾರೂಕ್, ಸವಾದ್ ಗೂನಡ್ಕ, ರುಶೈದ್,ಸಿರಾಜ್ ಉಪಸ್ಥಿತರಿದ್ದರು.


Spread the love