ಅ. 31, ಕೊಂಕಣಿ ಮಾನ್ಯತಾಯ ದಿನದ ಸಂಭ್ರಮಾಚರಣೆ

Spread the love

ಅ. 31, ಕೊಂಕಣಿ ಮಾನ್ಯತಾಯ ದಿನದ ಸಂಭ್ರಮಾಚರಣೆ

ಮಂಗಳೂರು: ಕಳೆದ 44 ವರ್ಷಗಳಿಂದ ಕೊಂಕಣಿ ಭಾಷೆಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ವತಿಯಿಂದ ಡೊನ್ ಬೊಸ್ಕೊ ಹಾಲನಲ್ಲಿ ಕೊಂಕಣಿ ಮಾನ್ಯತಾಯ ದಿವಸವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ಅಂತರ ಶಾಲಾ ಮತ್ತು ಕಾಲೇಜ ವಿಭಾಗದಲ್ಲಿ ವಿವಿಧ ವಿನೋದಾವಳಿ ಸ್ಪರ್ಧೇಗಳನ್ನು ಆಯೋಜಿಸಲಾಗಿದೆ. ಪ್ರತಿ ಒಂದು ವಿದ್ಯಾ ಸಂಸ್ಥೆಗೆ ತಮ್ಮ ಪ್ರತಿಭೆಯನ್ನು ತೋರಿಸಲು 15 ನಿಮಿಷಗಳ ಕಾಲಾವಕಾಶ ದೊರಕಲಿದ್ದು ಅಷ್ಟರೊಳಗೆ ಅವರು ಕೊಂಕಣಿ ಭಾಷೆಯಲ್ಲಿ ಹೊವಿಯೊಗಳನ್ನು ಹೇಳುವುದು, ಪದ್ಯ ಹೇಳುವುದು, ಕಿರು ನಾಟಕ ಆಡುವುದು, ನ್ರತ್ಯ ಪ್ರದರ್ಶನ ಹಾಗೂ ಇತರ ಸಾಂಸ್ಕøತೀಕ ಪ್ರದರ್ಶನ ನೀಡಲು ಅವಕಾಶವಿದೆ. ಅ.20ರಂದು ನಡೆಯಬೇಕಾಗಿದ್ದ ಈ ಕಾರ್ಯಕ್ರಮವನ್ನು ಮಾಜಿ ಪ್ರಧಾನಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರ ಅಕಾಲ ಮೃತ್ಯುವಿಂದಾಗಿ ಮುಂದೂಡಲಾಗಿತ್ತು.

ಕಳೆದ ವರ್ಷ ಕೊಂಕಣೀ ಮಾನ್ಯತಾಯ ದಿವಸದ ಬೆಳ್ಳಿ ಹಬ್ಬವನ್ನು ಆಚರಿಸಲಾಗಿತ್ತು. ಈ ಬಾರಿ ಅದರ ಸಮಾರೋಪ ಸಮಾರಂಭವು ಅದೇ ಹಾಲನಲ್ಲಿ ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆ. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಭಾಷಾ ಮಂಡಳದ ಮಾಜಿ ಅಧ್ಯಕ್ಷ ಪೌಲ ಮೋರಾಸ ಮಾನ್ಯತಾ ದಿವಸದ ಸಂದೇಶವನ್ನು ನೀಡಲಿದ್ದಾರೆ. ಸಮಾಜ ಸೇವಕ ಹಾಗೂ ಲೆಕ್ಕ ಪರಿಶೋಧಕ ನಂದಗೋಪಾಲ ಶೆಣೈ ಮುಖ್ಯ ಅತಿಥಿಗಳಾಗಿರುತ್ತಾರೆ. ಶ್ರೀ ಕೆ. ಸಿ. ಪ್ರಭು, ಶ್ರೀ ಕೆ.ಪಿ ಪ್ರಶಾಂತ ರಾವ, ಶ್ರೀ ಕ್ರಿಸ್ಟೋಫರ ಮಿಸ್ಕಿತ್, ಶ್ರೀ ಪ್ರಶಾಂತ ಶೇಟ್ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ಉಪಾಧ್ಯಕ್ಷ ಶ್ರೀ ಕೃಷ್ಣಾನಂದ ಪೈ ಗೌರವಾನ್ವಿತ ಅತಿಥಿಗಳಾಗಿರುತ್ತಾರೆ.

1995ರಲ್ಲಿ ಪ್ರಥಮ ಬಾರಿಗೆ ಜಾತಿ ಮತ ಭೇದವಿಲ್ಲದೆ ಜಗತ್ತಿನಾದ್ಯಂತ ಹಂಚಿ ಹೋಗಿರುವ ಕೊಂಕಣಿಗಳನ್ನು ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಒಂದುಗೂಡಿಸಿ ಪ್ರಥಮ ವಿಶ್ವ ಕೊಂಕಣಿ ಸಮ್ಮೇಳನವನ್ನು ಕೊಂಕಣಿ ಭಾಷಾ ಮಂಡಳ ಆಯೋಜಿಸಿತ್ತು ಎಂದು ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷ ವೆಂಕಟೇಶ ಎನ್. ಬಾಳಿಗಾ ತಿಳಿಸಿದ್ದಾರೆ.


Spread the love