ಅಂತರ್ ಜಿಲ್ಲಾ ಕಳವು ಆರೋಪಿ ಸೆರೆ; ಚಿನ್ನ ವಶ

Spread the love

ಅಂತರ್ ಜಿಲ್ಲಾ ಕಳವು ಆರೋಪಿ ಸೆರೆ; ಚಿನ್ನ ವಶ

ಉಡುಪಿ: ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು, ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ದಾಸಬೈಲು ನಿವಾಸಿ ಪ್ರದೀಪ್ ಆರ್. ಮೊಯಿಲಿ (30) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ. ಸಂಜೀವ್ ಎಂ. ಪಾಟೀಲ್‌ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಉಡುಪಿ ಡಿವೈಎಸ್‌ಪಿ ಎಸ್‌.ಕೆ. ಕುಮಾರ ಸ್ವಾಮಿ ರವರ ಮಾರ್ಗದರ್ಶನದಲ್ಲಿ ಉಡುಪಿ ವೃತ್ತ ನಿರೀಕ್ಷಕರಾದ ನವೀನ್‌ ಚಂದ್ರ ಜೋಗಿ ರವರ ಸೂಚನೆಯ ಮೇರೆಗೆ ಉಡುಪಿ ನಗರ ಪೊಲಿಸ್‌ ಠಾಣಾ ಪಿಎಸ್‌ಐ ಅನಂತಪದ್ಮನಾಭ ಕೆ.ವಿ. ರವರು ಉಡುಪಿ ನಗರ ಪೊಲೀಸ್‌ ಠಾಣಾ ಕಳವು ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಉಡುಪಿ ಜಿಲ್ಲೆಯ ಕಾಪು, ಶಿರ್ವ, ಪಡುಬಿದ್ರೆ ಠಾಣೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಸುರತ್ಕಲ್‌, ವೇಣೂರು ಪೊಲೀಸ್‌ ಠಾಣಾ ಪ್ರಕರಣಗಳಲ್ಲಿ ಆರೋಪಿತನಾಗಿರುವ ಪ್ರದೀಪ್‌ ಆರ್. ಮೊಯಿಲಿ (30), ತಂದೆ: ದಿ. ರಾಮ ಮೊಯಿಲಿ, ವಾಸ: ದಾಸಬೈಲು ಮನೆ, ಇನ್ನ ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು, ಉಡುಪಿ ಎಂಬಾತನನ್ನು ದಸ್ತಗಿರಿ ಮಾಡಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ರೂಪಾಯಿ 61,000/- ಮೌಲ್ಯದ ಒಟ್ಟು 19.290 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಗೋಪಾಲಕೃಷ್ಣ ಜೋಗಿ, ವಿಜಯ .ಸಿ , ಜೀವನ್‌, ಪ್ರಸನ್ನ , ಗಣೇಶ, ಸಂತೋಷ್‌ ರಾಥೋಡ್‌ ಮತ್ತು  ಪ್ರಸಾದ್‌ರವರುಗಳು ಸಹಕರಿಸಿದ್ದರು.


Spread the love