ಅಂತಾರಾಷ್ಟ್ರೀಯ ಕ್ರೀಡಾಪಟು ಅಡ್ವೋಕೇಟ್ “ಪನ್ನ ಪ್ರಸಾದ್ರವರಿಗೆ” ಮಂಗಳೂರು ನಗರಪಾಲಿಕೆಯಿಂದ ಕ್ರೀಡಾ ಪ್ರೋತ್ಸಾಹ ಧನ
ಮಾಸ್ಟರ್ ಅತ್ಲೇಟ್ “ಇಂಟರ್ನ್ಯಾಷನಲ್ ಸ್ಪ್ರಿಂಟ್ ಚಾಂಪಿಯನ್, (Twice) “ ಭಾರತವನ್ನು ನಾಲ್ಕು ಬಾರಿ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಂಡು ಸತತ ಪದಕ ಪಡೆದುದಲ್ಲದೆ, ಸಿಂಗಾಪೂರದಲ್ಲಿ ನಡೆದ 36ನೇ ಮಾಸ್ಟರ್ ಅತ್ಲೇಟಿಕ್ ಮೀಟ್ 2015 ಮತ್ತು 19ನೇ ಅಂತಾರಾಷ್ಟ್ರೀಯ ಏಷ್ಯಾನ್ ಕ್ರೀಡಾ ಚಾಂಪಿಯನ್ಶಿಪ್ 2016ನಲ್ಲಿ ಭಾರತ 216 ಪದಕಗಳೊಂದಿಗೆ ಚೈನಾ ಮತ್ತು ಜಪಾನ್ನನ್ನು ಹಿಂದಿಕ್ಕಿ ಭಾರತ ಚಾಂಪಿಯನ್ಶಿಪ್ ಪಡೆಯಲು ಶಕ್ತರಾಗಿ ಮುಂದಕ್ಕೆ “ನ್ಯೂಜಿಲ್ಯಾಂಡ್ನ ಅಕ್ಲ್ಯಾಂಡ್ನಲ್ಲಿ” ನಡೆಯುವ ವಲ್ಡ್ ಮಾಸ್ಟ್ರ್ ಚಾಂಪಿಯನ್ಶಿಪ್ 2017ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆಯನ್ನು ಪಡೆದ ಮಂಗಳೂರಿನ ಹಿರಿಯ ನ್ಯಾಯಾವಾದಿ ಲಯನ್ ಡಿ. ಪದ್ಮನಾಭ ಕುಮಾರ್ರವರಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ರೂ. 50,000 ಕ್ರೀಡಾಪ್ರೋತ್ಸಾಹ ಧನದ ಚೆಕ್ನ್ನು ಮೇಯರ್ ಹರಿನಾಥರವರು, ಸಚೇತಕ ಶಶಿಧರ್ ಹೆಗ್ಡೆ, ಸ್ತಾಯಿ ಸಮಿತಿಯ ಅಧ್ಯಕ್ಷ ಲೆನ್ಸ್ ಪಿಂಟೊ ಮತ್ತು ಇತರ ಕಾರ್ಪೋರೇಟರ್ ಅವರ ಸಮ್ಮಖದಲ್ಲಿ ಸಮ್ಮಾನಿಸಲಾಯಿತು.
ಇದು ಸೇರಿ ಮಿಸ್ಟ್ರ್ ಕುಮಾರರವರಿಗೆ ಕ್ರೀಡಾಕೂಟದಲ್ಲಿ ಕೊಡ¯್ಪಟ್ಟ ಎರಡನೇ ಪ್ರೋತ್ಸಾಹ ಧನವಾಗಿರುತ್ತದೆ. ಪ್ರಸ್ತುತ ನಗರಪಾಲಿಕೆಯ ನಿಯಮಗಳ ಪ್ರಕಾರ ಹಿರಿಯ ಕ್ರೀಡಾಳು 40 ಮತ್ತು 50 ವರ್ಷ ಮೇಲಟ್ಟರವರಿಗೆ ಎರಶು ಹಾಗೂ ಮೂರು ವರುಷಗಳಿಗೊಮ್ಮೆ ಕ್ರೀಡಾಪ್ರೋತ್ಸಾಹ ಧನಕ್ಕೆ ಅರ್ಹರು. ಮಿ. ಕುಮಾರ್ರವರು ಎರಡನೇ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಅಲ್ಲದೇ ವಲ್ಡ್ ಮಾಸ್ಟರ್ ಗೇಮ್ಸ್ ಪಾಲ್ಗೊಲು ಅರ್ಹತೆ ಪಡೆದ ಪ್ರಥಮ ಭಾರತದ ಹಿರಿಯ ವೇಗದ ಓಟಗಾರರೆಂಬ ಹೆಗ್ಗಳಿಕೆ ಈಗಾಗಲೇ ಪಾತ್ರರಾಗಿರುತ್ತಾರೆ.
ಸದ್ರಿ ಕ್ರೀಡಾಪ್ರೋತ್ಸಾಹಕ್ಕಾಗಿ ಶ್ರಮಿಸಿದ ಮಹಾನಗರ ಪಾಲಿಕೆಯ ಎಲ್ಲ ಕಾರ್ಪೋರೇಟರ್ ಸಿಬ್ಬಂದಿಗಳ ಜೊತೆಗೆ ಸಚೇತಕ ಶಶಿಧರ್ ಹೆಗ್ದೆಯವರಿಗೆ ಮಿ. ಕುಮಾರ್ರವರು ಅನಂತ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.