ಅಕ್ಟೋಬರ್ 8: ಉಡುಪಿ ಜಿಲ್ಲೆಯಲ್ಲಿ 237 ಮಂದಿಗೆ ಕೊರೋನಾ ಪಾಸಿಟಿವ್ ದೃಢ

Spread the love

ಅಕ್ಟೋಬರ್ 8: ಉಡುಪಿ ಜಿಲ್ಲೆಯಲ್ಲಿ 237 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 237 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 18779 ಕ್ಕೆ ಏರಿಕೆಯಾಗಿದೆ.

ಕಳೆದ ಹಲವಾರು ದಿನಗಳಿಂದ ಆರೋಗ್ಯ ನೌಕರರ ಮುಷ್ಕರದ ಪರಿಣಾಮವಾಗಿ ಜಿಲ್ಲಾ ಕೋವಿಡ್ ಬುಲೆಟಿನ್ ಪ್ರಕಟವಾಗುತ್ತಿರಲಿಲ್ಲ. ಗುರುವಾರದಿಂದ ಮತ್ತೆ ಜಿಲ್ಲಾ ಕೋವಿಡ್ ಬುಲೆಟಿನ್ ಪ್ರಕಟವಾಗಿದ್ದು,

ಸೋಂಕಿತರಲ್ಲಿ ಉಡುಪಿಯ 123, ಕುಂದಾಪುರದ 68, ಕಾರ್ಕಳದ 68 ರೋಗಿಗಳು ಇದ್ದಾರೆ. 143 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 94 ಮಂದಿಗೆ ಲಕ್ಷಣಗಳು ಇಲ್ಲ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 2944 ಜನರ ಗಂಟ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗುರುವಾರ 2734 ವರದಿಗಳು ನೆಗೆಟಿವ್ ಬಂದಿದ್ದು 379 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ

ಜಿಲ್ಲೆಯಲ್ಲಿ ಗುರುವಾರ ಒರ್ವ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು ಈ ವರೆಗೆ ಮೃತಪಟ್ಟವರ ಸಂಖ್ಯೆ 162 ಆಗಿದೆ.


Spread the love