ಅಕ್ರಮ ಅನಿಲ ಸಿಲಿಂಡರ್‍ಗಳ ಪತ್ತೆ

Spread the love

ಅಕ್ರಮ ಅನಿಲ ಸಿಲಿಂಡರ್‍ಗಳ ಪತ್ತೆ

ಮ0ಗಳೂರು :   ಆಹಾರ ಸಚಿವರ ನಿರ್ದೇಶನದಲ್ಲಿ ಹಾಗೂ ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರವರ ಮಾರ್ಗದರ್ಶನದಂತೆ ಜುಲೈ 16 ರಂದು ಮಂಗಳೂರು ಅನೌಪಚಾರಿಕ ಪಡಿತರ ಕಚೇರಿಯ ಸಹಾಯಕ ನಿರ್ದೇಶಕರು,  ಆಹಾರ ನಿರೀಕ್ಷಕರು ಮತ್ತು ಕದ್ರಿ ಪೋಲೀಸ್ ಠಾಣಾ ಸಿಬ್ಬಂದಿಗಳು ಕುಲಶೇಖರ-ಕಲ್ಪನೆ ಕೋರ್ಡೆಲ್ ಚರ್ಚ್ ಕಾಂಪೌಂಡಿನ ಬಳಿ ಇರುವ ಮನೆಗೆ ಧಾಳಿ ಮಾಡಿದ್ದು, ಕಾರ್ಯಾಚರಣೆ ನಡೆಸಿದಾಗ ಮನೆಯ ಕಾಂಪೌಂಡಿನಲ್ಲಿ ಸರಕಾರೀ ಸ್ವಾಮ್ಯದ ಐ.ಓ.ಸಿ.; ಬಿ.ಪಿ.ಸಿ ಹಾಗೂ ಹೆಚ್.ಪಿ.ಸಿ ಕಂಪೆನಿಗಳಿಗೆ ಸೇರಿದ 32  ಗೃಹ ಬಳಕೆಯ ಅನಿಲ ಸಿಲಿಂಡರುಗಳು ಹಾಗೂ 9 ವಾಣಿಜ್ಯ ಬಳಕೆಯ ಅನಿಲ ಸಿಲಿಂಡರುಗಳು ಪತ್ತೆಯಾಗಿರುತ್ತವೆ.

ಸದರಿ ಮನೆಯಲ್ಲಿ ಬಾಡಿಗೆದಾರರಾಗಿರುವ ಅನಂತರಾಜ್ ಆರ್.ರವರಿಗೆ ಸೇರಿದ ಸಿಲಿಂಡರುಗಳಾಗಿದ್ದು, ಸಿಲಿಂಡರುಗಳ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರು ಪಡಿಸಲು ವಿಫಲರಾಗಿರುವುದರಿಂದ, ಅನಧಿಕೃತ ದಾಸ್ತಾನು ಮಾಡಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಉದ್ದೇಶಿಸಿರುವುದರಿಂದ, ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂಗಳು ಹಾಗೂ ಎಲ್.ಪಿ.ಜಿ.ನಿಯಂತ್ರಣ ಆದೇಶ 2000ದ ನಿಯಮಗಳ ಉಲ್ಲಂಘನೆಗಾಗಿ 41 ಅನಿಲ ಸಿಲಿಂಡರುಗಳನ್ನು ಸರಕಾರದ ಪರ ವಶ ಪಡಿಸಿಕೊಂಡು ಆರೋಪಿಯ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

 


Spread the love