ಅಕ್ರಮ ಗೋಸಾಗಾಟ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರ ದಾಳಿ, ಒರ್ವನ ಬಂಧನ

Spread the love

ಅಕ್ರಮ ಗೋಸಾಗಾಟ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರ ದಾಳಿ, ಒರ್ವನ ಬಂಧನ

ಮಂಗಳೂರು: ದನಕರುಗಳನ್ನು ವಧೆ ಮಾಡುವ ಸಲುವಾಗಿ ಅಕ್ರಮವಾಗಿ ಸಾಗಾಟ ಮಾಡಲು ಮಿನಿ ಟೆಂಪೋವೊಂದಕ್ಕೆ ತುಂಬಿಸುತ್ತಿದ್ದಾಗ ಪುಂಜಾಲಕಟ್ಟೆ ಠಾಣಾ ಪೊಲೀಸ್ ಉಪನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ಒರ್ವನನ್ನು ಬಂಧೀಸಿದ್ದಾರೆ.

ಬಂಧಿತರನ್ನು ಮೊಹಮ್ಮದ್ ರಾಹೀಲ್ (18) ಎಂದು ಗುರುತಿಸಲಾಗಿದೆ.

ಬಂಟ್ವಾಳ ತಾಲೂಕು, ಕಾವಳಮುಡೂರು ಗ್ರಾಮದ, ಎನ್.ಸಿ ರೋಡ್ ಜನಪ್ರಿಯ ಬಜಾರ್ ಬಳಿ ಇರುವ ಮಹಮ್ಮದ್ ಹನೀಫ್ ಎಂಬವರ ಮನೆ ಮುಂದೆ ಸುಮಾರು 6-7 ಮಂದಿ ಎಲ್ಲಿಂದಲೋ ಕದ್ದು ತಂದ ದನಕರುಗಳನ್ನು ವಧೆ ಮಾಡುವ ಸಲುವಾಗಿ ಅಕ್ರಮವಾಗಿ ಸಾಗಾಟ ಮಾಡಲು ಮಿನಿ ಟೆಂಪೋವೊಂದಕ್ಕೆ ತುಂಬಿಸುತ್ತಿದ್ದಾಗ ಪುಂಜಾಲಕಟ್ಟೆ ಠಾಣಾ ಪೊಲೀಸ್ ಉಪನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಂದಾಜು ರೂ 31000 ಬೆಲೆಬಾಳುವ 07 ಹಸುಗಳು,09 ಕರುಗಳು ಹಾಗೂ ಸ್ಕಾರ್ಫಿಯೋ ಕಾರು, ಓಮ್ನಿ ಕಾರು ಅಶೋಕ್ ಲೈಲ್ಯಾಂಡ್ ಮಿನಿ ಟೆಂಪೋ, 2 ದ್ವಿಚಕ್ರ ವಾಹನಮೊಬೈಲ್ ಸೆಟ್ಗಳು- 5-ಅಂದಾಜು ಮೌಲ್ಯ ರೂ 17000/- ಸೇರಿದಂತೆ ಒಟ್ಟು ಅಂದಾಜು ಮೌಲ್ಯ ರೂ: 12,48,000/-ಗಳ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love