ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ

Spread the love

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ

ಕುಂದಾಪುರ: ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹಟ್ಟಿಯಂಗಡಿ ನಿವಾಸಿ ಪ್ರವೀಣ (38) ಮತ್ತು ಹೆಮ್ಮಾಣಿ ನಿವಾಸಿ ಬಸವರಾಜ (49) ಎಂದು ಗುರುತಿಸಲಾಗಿದೆ.

ಮೇ 6ರಂದು ಕುಂದಾಪುರ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಶ್ರೀಧರ್ ನಾಯ್ಕ ಅವರಿಗೆ ಬಸ್ರೂರು ಗ್ರಾಮದ ಹಟ್ಟಿಕುದ್ರು ಹಣ್ಣು ಮಂಡೆ ಮನೆ ಎಂಬಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದ ಅದರಂತೆ ಸ್ಥಳಕ್ಕೆ ತೆರಳಿದಾಗ ಇಬ್ಬರು ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು KA-20-B-2101 ನೇ ವಾಹನದಲ್ಲಿ ತುಂಬಿರುವುದು ಧೃಢಪಟ್ಟಿದ್ದು, KA-20-B-2101 ನೇ ನಂಬ್ರದ ಪಿಕಪ್ ವಾಹನವನ್ನು (ಮೌಲ್ಯ ರೂಪಾಯಿ-3,00,000/), ಅದರಲ್ಲಿದ್ದ ಚೀಲಗಳಲ್ಲಿ ತುಂಬಿ ಲೋಡ್ ಮಾಡಿದ್ದ 1 ಯುನಿಟ್ ಮರಳು ( ಮೌಲ್ಯ ರೂಪಾಯಿ 3,000/-), ಸಲಿಕೆ -1 ( ಮೌಲ್ಯ ರೂಪಾಯಿ 200/-), ನ್ನು ಸ್ವಾಧೀನಪಡಿಸಿ ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ.

ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love