ಅಕ್ರಮ ಸ್ಪೋಟಕ ಸಾಗಾಟ ; ಒರ್ವನ ಬಂಧನ
ಮಂಗಳೂರು: ಅಕ್ರಮವಾಗಿ ಸ್ಪೋಟಕಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಡಿಸಿಐಬಿ ಪೋಲಿಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಸವನಗುಡಿ ನಿವಾಸಿ ಚಿನ್ನಸ್ವಾಮಿ (70) ಎಂದು ಗುರುತಿಸಲಾಗಿದೆ.
ಸಪ್ಟೆಂಬರ್ 24ರಂದು ಸುನೀಲ್ ವೈ ನಾಯಕ್, ಪಿ.ಐ ಡಿ.ಸಿ.ಐ.ಬಿ ಮಂಗಳೂರು ಜೊತೆಯಲ್ಲಿದ್ದ ಸಿಬ್ಬಂದಿಗಳೊಂದಿಗೆ ಬಿಸಿರೋಡ್, ಬಂಟ್ವಾಳ, ಪುಂಜಾಲಕಟ್ಟೆ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು ಬೆಳಿಗ್ಗೆ 11.00 ಗಂಟೆಗೆ ಪುಂಜಾಲಕಟ್ಟೆಯಲ್ಲಿದ್ದ ಸಮಯ ಬಂದ ಖಚಿತ ವರ್ತಮಾನ ಏನೆಂದರೆ ನೆಲ್ಲಿಗುಡ್ಡೆಯಿಂದ ಪುಂಜಾಲಕಟ್ಟೆ ಕಡೆಗೆ KA-21-S-9835 ನೇ ನಂಬ್ರದ ಕಪ್ಪು ಬಣ್ಣದ ಹೋಂಡಾ ಆಕ್ಟಿವಾ ವಾಹನದಲ್ಲಿ ಪುಂಜಾಲಕಟ್ಟೆಯ ಚಿನ್ನಸ್ವಾಮಿ ಎಂಬಾತನು ಅಕ್ರಮವಾಗಿ ಸ್ಪೋಟಕಗಳನ್ನು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿರುತ್ತದೆ.
ಸದರಿ ಮಾಹಿತಿಯಂತೆ ಪುಂಜಾಲಕಟ್ಟೆಯಿಂದ ಎನ್.ಸಿ ರೋಡ್ನಿಂದಾಗಿ ನೆಲ್ಲಿಗುಡ್ಡೆ ಕಡೆಗೆ ಹೋಗುತ್ತಿದ್ದು, ಕೆದ್ದಳಿಕೆ ಸ.ಹಿ.ಪ್ರಾ ಶಾಲೆಯ ಕಪ್ಪು ಬಣ್ಣದ ಹೋಂಡಾ ಆಕ್ಟಿವಾ ವಾಹನವನ್ನು ನಿಲ್ಲಿಸಿ, ಸದ್ರಿ ವಾಹನವನ್ನು ಪರಿಶೀಲಿಸಲಾಗಿ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದದನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿ ಈತನಿಂದ 15 ಜಿಲೆಟಿನ್ಕಡ್ಡಿ, 99 ಡಿಟೋನೇಟರ್ ಮತ್ತು ಸಾಗಾಟ ಮಾಡಲು ಉಪಯೋಗಿಸಿದ ಹೋಂಡಾ ಆಕ್ಟಿವಾ ಸ್ವಾಧೀನಪಡಿಸಿಕೊಂಡಿದ್ದು, ಒಟ್ಟು ಅಂದಾಜು ಮೌಲ್ಯ ರೂ 1,05,000/- ಆಗಿರುತ್ತದೆ. ಆರೋಪಿ ಮತ್ತು ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಪುಂಜಾಲಕಟ್ಟೆ ಠಾಣೆಗೆ ಸೂಕ್ರ ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.
ಈ ಪತ್ತೆಕಾರ್ಯವನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ| ಬಿ.ಆರ್ ರವಿಕಾಂತೇ ಗೌಡ ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಶ್ರೀ ಸಜಿತ್ ರವರ ಸೂಚನೆಯಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ವೈ ನಾಯಕ್ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಗಳಾದ ನಾರಾಯಣ, ,ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್, ಉದಯ ಗೌಡ, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ಎಸ್, ಶೋನ್ ಶಾ, ಸುರೇಶ್ ಕುಮಾರ್ ರವರು ಭಾಗವಹಿಸಿರುತ್ತಾರೆ.