ಅಕ್ರಮವಾಗಿ ಸಾಗಿಸುತ್ತಿದ್ದ 14 ಜಾನುವಾರುಗಳನ್ನು ರಕ್ಷಿಸಿದ ಗಂಗೊಳ್ಳಿ ಪೊಲೀಸರು

Spread the love

ಅಕ್ರಮವಾಗಿ ಸಾಗಿಸುತ್ತಿದ್ದ 14 ಜಾನುವಾರುಗಳನ್ನು ರಕ್ಷಿಸಿದ ಗಂಗೊಳ್ಳಿ ಪೊಲೀಸರು

ಕುಂದಾಪುರ: ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು 14 ಜಾನುವಾರುಗಳನ್ನು ರಕ್ಷಿಸಿ ಸುಮಾರು ರೂ 2 ಲಕ್ಷ ಮೌಲ್ಯದ ಸೊತ್ತನ್ನು ಗಂಗೊಳ್ಳಿ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.

ಶನಿವಾರ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಅವರು ರೌಂಡ್ಸ್ ಕರ್ತವ್ಯದ ವೇಳೆ ಮರವಂತೆ ಪೇಟೆ ಕಡೆಯಿಂದ ನಾವುಂದ ಕಡೆಗೆ ತೆರಳುತ್ತಿದ್ದ ಮಹೀಂದ್ರ ಗೂಡ್ಸ್ ವಾಹನವನ್ನು ತಡೆದು ನಿಲ್ಲಿಸಿದ್ದು, ವಾಹನದ ಚಾಲಕ ನಿಲ್ಲಿಸಿದೆ ಹೋಗಿದ್ದು ವಾಹನವನ್ನು ಬೆನ್ನಟ್ಟಿಕೊಂಡು ಹೋದಾದ ವಾಹನವನ್ನು ಸ್ವಲ್ಪ ಮುಂದೆ ಕೊಂಡು ಹೋಗಿ ಎಡಕ್ಕೆ ತಿರುಗಿಸಿ ಒಂದು ಮನೆಯ ಹಿಂಭಾಗದಲ್ಲಿ ನಿಲ್ಲಿಸಿ ಚಾಲಕನು ಓಡಿ ಹೋಗಿದ್ದಾನೆ. ನಿಲ್ಲಿಸಿದ ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ 14 ಜಾನುವಾರುಗಳನ್ನು ಕ್ರೂರವಾಗಿ ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಕಟ್ಟಿರುವುದು ಕಂಡು ಬಂದಿದೆ.

ಕೊಟ್ಟಿಗೆಯ ಬಳಿ ಇದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಕೊಟ್ಟಿಗೆಯು ತನ್ನದೆಂದು ತನ್ನ ಹೆಸರು ಸಿ.ಎನ್ ಖಾದರ್ ಎಂಬುದಾಗಿ ತಿಳಿಸಿದ್ದು, ಓಡಿ ಹೋದ ವಾಹನ ಚಾಲಕನ ಹೆಸರು ಕೇಳಿದಾಗ, ರವಿ ಎಂದು ಹೇಳಿ, . ತನಗೆ ತೀವ್ರ ತರದ ಕಾಲು ನೋವಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯಲು ವೈದ್ಯರಲ್ಲಿಗೆ ಹೋಗುತ್ತೇನೆ ಎಂದು ಹೇಳಿ ಒಂದು ವಾಹನದಲ್ಲಿ ಹೊರಟು ಹೋಗಿರುತ್ತಾರೆ,

ಪೊಲೀಸರು 53,650/- ರೂಪಾಯಿ ಮೌಲ್ಯದ 14 ಜಾನುವರುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 1,50,000/-ರೂಪಾಯಿ ಮೌಲ್ಯದ   MAHINDRA MAXIMO ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love