ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ – ಅಶೋಕ್ ರೈ ಖಂಡನೆ
ಮಂಗಳೂರು: ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ ನೀಡಿರುವುದನ್ನು ಪುತ್ತೂರು ಶಾಸಕ ಅಶೋಕ್ ರೈ ಖಂಡನೆ ಮಾಡಿದ್ದಾರೆ
ಅಡಿಕೆ ದರ ಇಳಿಕೆಯಾಗಿ ಎರಡೂ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ನೆಲಕ್ಕೆ ಬೀಳಲಿದ್ದು, ಭೂತಾನ್ನಿಂದ ಅಡಿಕೆ ಆಮದು ಮಾಡುವ ನೀತಿ ಅತ್ಯಂತ ಆತಂಕಕಾರಿ ವಿಚಾರವಾಗಿದೆ. ಭೂತಾನ್ ನಿಂದ ನಿರಂತರವಾಗಿ ಅಡಿಕೆ ಆಮದುಗೊಂಡರೆ ಇಲ್ಲಿ ಅಡಿಕೆ ದರ ಕೇವಲ ರೂ.120 ಕ್ಕೆ ತಲುಪುವ ಅಪಾಯವಿದೆ ಇದರಿಂದ ಜಿಲ್ಲೆಯ ಜನತೆಯ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ.
ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರಲಿಕ್ಕಿಲ್ಲ. ದಳ್ಳಾಲಿಗಳ ಇದರ ಮಧ್ಯೆ ಸೇರಿಕೊಂಡು ಇದನ್ನು ಮಾಡಿರುವ ಸಾಧ್ಯತೆಯೂ ಇದೆ. ಜನಪ್ರತಿನಿಧಿಗಳು ಈ ಬಗ್ಗೆ ಸರಿಯಾದ ಮಾಹಿತಿಯನ್ನು ಕೇಂದ್ರದ ಸಚಿವರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಬೇಕು.
ಜಿಲ್ಲೆಯಲ್ಲಿ ಕ್ಯಾಂಪ್ಕೋ ಇದೆ. ಇವರು ನಿದ್ದೆ ಮಾಡುವುದಲ್ಲ ಎಂಪಿಗಳನ್ನು ಕರೆದುಕೊಂಡು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿ ಈ ಆಮದು ತಡೆಯುವ ಕೆಲಸಕ್ಕೆ ಮುಂದಾಗಬೇಕು. ಸರ್ಕಾರದ ಬೆಂಬಲಬೆಲೆ ತೆಗೆದುಕೊಂಡು ಕೇವಲ ವ್ಯಾಪಾರ ಮಾತ್ರ ಮಾಡುವುದಲ್ಲ ರಾಜ್ಯದ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರನ್ನು ಈ ವಾರದಲ್ಲಿ ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.
ಇದೊಂದು ಪಕ್ಷಾತೀತವಾದ ಹೋರಾಟವಾಗಬೇಕಾಗಿದ್ದು, ಈ ಆಮದು ನಿರಂತರವಾದರೆ ಅತ್ಯಂಕ ಸಂಕಷ್ಷ ಇಲ್ಲಿಯ ಜನತೆಯದ್ದಾಗಲಿದೆ. ಈ ಆಮದಿಗೆ ಅನುಮತಿ ನೀಡಿರುವುದು ಕೇಂದ್ರ ಸರ್ಕಾರದ ತಪ್ಪು ನಡೆಯಾಗಿದೆ. ಹಿಂದೆಯೂ ಇದೇ ರೀತಿ ಆದಾಗ ಅಡಿಕೆ ದರಕ್ಕೆ ತೀವ್ರವಾದ ಹೊಡೆತ ಬಿದ್ದಿತ್ತು ಎರಡೂ ಜಿಲ್ಲೆಗಳ ಕೃಷಿಕರ ಬದುಕಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದರು.