ಅತ್ತೂರು ಪುಣ್ಯಕ್ಷೇತ್ರದ ಮೊಬೈಲ್ ಟವರ್ ಸಮಸ್ಯೆಯ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ

Spread the love

ಅತ್ತೂರು ಪುಣ್ಯಕ್ಷೇತ್ರದ ಮೊಬೈಲ್ ಟವರ್ ಸಮಸ್ಯೆಯ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ

ಕಾರ್ಕಳ: ಹಲವು ವರ್ಷಗಳಿಂದ ಜಗತ್ಪ್ರಸಿದ್ದ ಅತ್ತೂರು ಸಂತ ಲಾರೇನ್ಸ್ ಪುಣ್ಯಕ್ಷೇತ್ರದಲ್ಲಿ ತಲೆದೋರಿದ್ದ ಮೊಬೈಲ್ ಟವರ್ ಸಮಸ್ಯೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಕಲ್ಪಿಸಿದ್ದಾರೆ. ಮೋದಿಯವರ ಸೂಚನೆಯಂತೆ ಪುಣ್ಯಕ್ಷೇತ್ರದಲ್ಲಿ ತಾತ್ಕಾಲಿಕ ಮೊಬೈಲ್ ಟವರ್ ನಿರ್ಮಾಣಗೊಂಡಿದ್ದು, ಶಾಶ್ವತ ಮೊಬೈಲ್ ಟವರ್ ನಿರ್ಮಾಣಕ್ಕೆ ರೂಪುರೇಷೆ ಸಿದ್ದಗೊಂಡಿದೆ.

fr-george-dsouza

image002attur-shrine-minor-basilica

ಇತ್ತೀಚೆಗೆ ಪೋಪ್ ಫ್ರಾನ್ಸಿಸ್ ಅವರಿಂದ ಮೈನರ್ ಬೆಸಿಲಿಕಾ ಎಂಬ ಘೋಷಣೆಯೊಂದಿಗೆ ಮೇಲ್ದರ್ಜೆಗೇರಿದ ಅತ್ತೂರು ಪುಣ್ಯಕ್ಷೇತ್ರದಲ್ಲಿ ಹಲವು ವರುಷಗಳಿಂದ ಮೊಬೈಲ್ ಸಂಪರ್ಕ ಸಮಸ್ಯೆಯಾಗಿತ್ತು. ಈ ಬಗ್ಗೆ ಕ್ಷೇತ್ರದ ಧರ್ಮಗುರು ವಂದನೀಯ ಜಾರ್ಜ್ ಡಿ’ಸೋಜಾ ಭೇಟಿ ಮಾಡದ ಜನಪ್ರತಿನಿಧಿಗಳಿಲ್ಲ. ಕ್ಷೇತ್ರದ ಶಾಸಕರಿಂದ ಹಿಡಿದು ಕೇಂದ್ರ ಸರಕಾರದ ವಿವಿಧ ಮಂತ್ರಿಗಳ ವರೆಗೂ ಹಲವಾರು ಬಾರಿ ಮನವಿ ನೀಡುತ್ತಾ ಬಂದಿದ್ದರು. ಆದರೆ ಅವರ ಮನವಿಗೆ ಮಾತ್ರ ಸಿಕ್ಕ ಸ್ಪಂದನೆ ಶೂನ್ಯ. ಬಳಿಕ 2016 ಅಗೋಸ್ತ್ 21 ರಂದು ಕೇಂದ್ರದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅವರಿಗೆ ಪತ್ರ ಬರೆದೂ ಕೂಡ ಅದಕ್ಕೂ ಸ್ಪಂದನೆ ಲಭಿಸಿರಲಿಲ್ಲ.

image001pmo-responds-mobile-connectivity-karkala-attur-20161202 image002pmo-responds-mobile-connectivity-karkala-attur-20161202 image003pmo-responds-mobile-connectivity-karkala-attur-20161202 image004pmo-responds-mobile-connectivity-karkala-attur-20161202

ಕೊನೆಯ ಪ್ರಯತ್ನ ಎಂಬಂತೆ ವಂ ಜಾರ್ಜ್ ಅವರು 2016 ಸೆಪ್ಟೆಂಬರ್ 2 ರಂದು ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರು. ವಂ ಜಾರ್ಜ್ ಅವರ ಪತ್ರಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿಯವರ ಕಾರ್ಯಾಲಯ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಚಿವಾಲಯದ ಅಧಿಕಾರಿಗಳಿಗೆ ಆದೇಶ ನೀಡಿದೆ. ಪ್ರಧಾನಿಯವರ ಕಾರ್ಯಾಲಯದ ಆದೇಶದಂತೆ ಕಾರ್ಯಪ್ರವೃತ್ತರಾದ ಸಚಿವಾಲಯ ಕ್ರಮ ಕೈಗೊಂಡಿರುವ ಕುರಿತು ಏಳು ದಿನಗಳ ಒಳಗಾಗಿ ಧರ್ಮಗುರುಗಳಿಗೆ ಪತ್ರ ತಲುಪಿದೆ.

ಬಳಿಕ ಬಿಎಸ್ ಎನ್ ಎಲ್ ಮಂಗಳೂರು ವಿಭಾಗದ ಮುಖ್ಯಸ್ಥ ರವಿ ಅವರು ಧರ್ಮಗುರುಗಳಿಗೆ ಪತ್ರ ಬರೆದಿದ್ದು, ಸಮಸ್ಯೆ ತ್ವರಿತ ಗತಿಯಲ್ಲಿ ಬಗೆಹರಿಸುವ ಭರವಸೆ ನೀಡಿದ್ದು, ಕೆಲದಿನಗಳ ಹಿಂದೆ ತಾತ್ಕಾಲಿಕ ಮೊಬೈಲ್ ಟವರ್ ನಿರ್ಮಿಸಿದ್ದಾರೆ. ಅಲ್ಲದ ಶಾಶ್ವತ ಮೊಬೈಲ್ ಟವರ್ ನಿರ್ಮಾಣಕ್ಕೆ ರೂಪುರೇಷೆ ಸಿದ್ದಪಡಿಸಿದ್ದು, ಕೆಟ್ಟು ಹೋಗಿದ್ದ ಎರಡು ಸ್ಥಿರ ದೂರವಾಣಿಗಳ ದುರಸ್ತಿ ಕೂಡ ನಡೆಸಿದ್ದು ಒಎಫ್ ಸಿ ಕೇಬಲ್ ಸಂಪರ್ಕ ಕಲ್ಪಿಸಲಾಗಿದೆ.

ಅತ್ತೂರು ಪುಣ್ಯಕ್ಷೇತ್ರವು ಹಲವು ಸಮಯದಿಂದ ಮೊಬೈಲ್ ಸಂಪರ್ಕದ ಸಮಸ್ಯೆಯಾಗಿತ್ತು ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು ಆದರೆ ಪ್ರಯೋಜನವಾಗಿರಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಪ್ರಧಾನಿಯವರಿಗೆ ನೇರ ಪತ್ರ ಬರೆದಿದ್ದೆ ಅದಕ್ಕೆ ಪ್ರಧಾನಿ ಕಚೇರಿಯಿಂದ ತುರ್ತಾಗಿ ಸ್ಪಂದನ ಲಭಿಸಿದೆ. ಪ್ರಧಾನಿ ಕಾರ್ಯಾಲಯದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡಾಗ ದೇಶದ ಪ್ರಗತಿ ಸಾಧ್ಯ ಎನ್ನುತ್ತಾರೆ ವಂ ಜಾರ್ಜ್ ಡಿಸೋಜ.


Spread the love