ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿ ದಾಸ್ತಾನು – ಒರ್ವನ ಬಂಧನ

Spread the love

ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿ ದಾಸ್ತಾನು – ಒರ್ವನ ಬಂಧನ

ಮಂಗಳೂರು: ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿಕೊಂಡ ಆರೋಪದ ಮೇಲೆ ಕಾವೂರು ಪೋಲಿಸರು ಒರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಅಸ್ಸಾಂ ನಿವಾಸಿ ಮೊಬೀರುಲ್ ಇಸ್ಲಾಂ ರಜಬರಭಯ (21) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳ ದಸ್ತಗಿರಿಗೆ ಬಾಕಿ ಇರುತ್ತದೆ.

ಸಪ್ಟೆಂಬರ್ 7 ರಂದು ಕೆ.ಆರ್ ನಾಯ್ಕ್ ಪೊಲೀಸ್ ನಿರೀಕ್ಷಕರು ಕಾವೂರು ಪೊಲೀಸ್ ಠಾಣೆ ರವರಿಗೆ ಕಾವೂರು ಠಾಣಾ ವ್ಯಾಪ್ತಿಯ ಬೋಂದೆಲ್ ಬಳಿ ಮಂಜಲ್ಪಾದೆ ರಸ್ತೆಯಲ್ಲಿರುವ ಗೋದಾಮು ಒಂದರಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿಕೊಂಡಿರುವುದಾಗಿ ಬಂದ ಖಚಿತ ವರ್ತಮಾನದಂತೆ ಸಿಬ್ಬಂಧಿ ಯೊಂದಿಗೆ ದಾಳಿ ನಡೆಸಿ ನಂತರ ಮಂಗಳೂರು ನಗರದ ತಾಲೂಕು ಕಛೇರಿಯ ಆಹಾರ ಶಿರಸ್ತಿದಾರರಾದ ಶ್ರೀಮತಿ ಕಸ್ತೂರಿ ಮತ್ತು ಅಧಿಕಾರಿಗಳು ಗೋಡಾನ್ ನಲ್ಲಿ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿ ರೀಪ್ಯಾಕಿಂಗ್ ಮಾಡುತ್ತಿರುವುದು ದೃಡಪಟ್ಟಿದ್ದು ಗೋದಾಮಿನೊಳಗಡೆ ಮತ್ತು ಮೂರು ವಾಹನಗಳಲ್ಲಿದ್ದ ಒಟ್ಟು 290.00 ಕ್ವಿಂಟಾಲ್ ಅಕ್ಕಿ ಮತ್ತು 9.00 ಕ್ವಿಂಟಾಲ್ ಗೋಧಿಯು ನ್ಯಾಯಬೆಲೆ ಅಂಗಡಿಗಳಿಗೆ ಮತ್ತು ಅಲ್ಪ ಸಂಖ್ಯಾತರ ಹಾಸ್ಟೆಲ್ ಗಳಿಗೆ ಸೇರಿದ್ದಾಗಿರುತ್ತದೆ. ಇದು ಮಾರ್ಗಾಂತರ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ವಶಪಡಿಸಿಕೊಂಡ ಸೊತ್ತುಗಳ ವಿವರಗಳು
1) ಅಕ್ಕಿ ಮತ್ತು ಗೋಧೀಯ ಅಂದಾಜು ಮೌಲ್ಯ ರೂ 8,20,000/-
2) KA-19-AA-5508 ನಂಬ್ರದ ಲಾರಿ ಒಂದು ಇದರ ಅಂದಾಜು ಮೌಲ್ಯ- 6 ಲಕ್ಷ ರೂಪಾಯಿ
3) KA-20-4576 ನಂಬ್ರದ ಮಿನಿ ಲಾರಿ ಒಂದು ಇದರ ಅಂದಾಜು ಮೌಲ್ಯ- 2 ಲಕ್ಷ ರೂಪಾಯಿ
4) KA-19-AA-3040 ನಂಬ್ರ ಪಿಕಪ್ ವಾಹನ ಒಂದು ಇದರ ಅಂದಾಜು ಮೌಲ್ಯ- 1 ಲಕ್ಷ ರೂಪಾಯಿ
5) ಮದ್ಯಾಹ್ನ ಉಪಹಾರ ಯೋಜನೆಯ ಮೊಹರು ಉಳ್ಳ ಖಾಲಿ ಚೀಲ 5 ಇದು ಬೆಳೆಬಾಳುವುದಿಲ್ಲ.
6) ಇಲೆಕ್ಟ್ರಾನಿಕ್ ತೂಕದ ಯಂತ್ರ ಒಂದು ಇದರ ಅಂದಾಜು ಮೌಲ್ಯ 4 ಸಾವಿರ ರೂಪಾಯಿ
7) ಗೋಣಿಚೀಲಗಳನ್ನು ಹೊಲಿಯುವ ಯಂತ್ರ ಒಂದು ಇದರ ಅಂದಾಜು ಮೌಲ್ಯ 500 ರೂಪಾಯಿ\
ಮೇಲಿನ ಸೊತ್ತುಗಳ ಒಟ್ಟು ಮೌಲ್ಯ 17,24,500/-

ಈ ಕಾರ್ಯಚರಣೆಯನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಸುರೇಶ್ ಟಿ ಆರ್, ಡಿ.ಸಿ.ಪಿ (ಅಪರಾಧ & ಸಂಚಾರ) ಉಮಾಪ್ರಶಾಂತ್, ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿ ರಾಜೇಂದ್ರ ಡಿ. ಎಸ್ ರವರ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಕೆ. ಆರ್ ನಾಯ್ಕ್ ರವರು ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ


Spread the love