ಅಫಘಾತದ ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ ಸಚಿವ ಯು.ಟಿ.ಖಾದರ್, ಸಂಗಡಿಗರು
ಮೈಸೂರು: ಮೈಸೂರಿನಲ್ಲಿ ಕಾರ್ಯಕ್ರಮ ಮುಗಿಸಿ ಶನಿವಾರ ಸಂಜೆ ಮಂಗಳೂರು ಕಡೆ ಕಾರಲ್ಲಿ ಮರಳುತ್ತಿದ್ದ ಆಹಾರ ಸಚಿವರಾದ ಯು.ಟಿ.ಖಾದರೆ ಮತ್ತು ಸಂಗಡಿಗರಿಗೆ ಹಿನಕಲ್ ರಸ್ತೆಯಲ್ಲಿ ಅಫಘಾತವಾಗಿ ನರಳುತ್ತಿದ್ದ ಗಾಯಾಳುವನ್ನು ಕಂಡು, ತಕ್ಷಣ ಕಾರು ನಿಲ್ಲಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಸಚಿವರು ಮತ್ತು ಅವರ ಸಂಗಡಿಗರು ಮಾನವೀಯತೆ ಮೆರೆದಿದ್ದಾರೆ.
ಹಿನಕಲ್ ಸಮೀಪ ಸಂಚರಿಸುತ್ತಿದ್ದ ಇಂತಿಯಾಜ್ ಎಂಬವರ ಬೈಕಿಗೆ ದನವೊಂದು ಅಡ್ಡ ಬಂದ ಪರಿಣಾಮ ಬೈಕ್ ಮಗುಚಿ ಸವಾರ ಇಂತಿಯಾಜ್ ಅವರ ತಲೆಗೆ ಗಾಯವಾಗಿತ್ತು. ಅಲ್ಲಿ ನೆರೆದವರು ಅಂಬುಲೆನ್ಸ್ ಗೆ ಕರೆಯನ್ನೂ ಕೂಡ ಮಾಡಿದ್ದರು. ಆದರೆ ಅಂಬುಲೆನ್ಸ್ ಬರುವ ಮೊದಲು, ಆ ದಾರಿಯಲ್ಲೇ ಸಾಗುತ್ತಿದ್ದ ಸಚಿವ ಯು ಟಿ ಖಾದರ್ ತಕ್ಷಣ ಕಾರಿನಿಂದ ಇಳಿದು, ಗಾಯಾಳುವನ್ನು ಎತ್ತಿ ತನ್ನ ಕಾರಿನಲ್ಲೇ ಹಾಕಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದರು.
ಸಚಿವರ ಜೊತೆ ಗೋಪಾಲ ಶೆಟ್ಟಿ ತಲಪಾಡಿ, ಅರುಣ್ ಕುಮಾರ್ ಕಾಪಿಕಾಡು, ಶ್ರೇಯಸ್ ಗೌಡ ಮೈಸೂರು, ಸಚಿವರ ಆಪ್ತಸಹಾಯಕ ಲಿಬ್ ಝತ್, ಕಾರಿನ ಚಾಲಕ ಮೋಹನ್ ಇದ್ದರು.
ಇದಕ್ಕೂ ಮೊದಲೂ ಕೂಡ ಸಚಿವ ಯು ಟಿ ಖಾದರ್ ಹಲವು ಅಫಘಾತ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದರು.
May imaginary god bless this man. Even in the past, UT Khader has shown his willingness to do the right thing and help people in need. This is true leadership and wish him all the best.