ಅಭಿವೃದ್ಧಿ ಯ ಹರಿಕಾರ ಸೊರಕೆಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ: ರಾಜ್ ಬಬ್ಬರ್
ಕಾಪು: ಕಾಂಗ್ರೆಸ್ ಶಾಸಕರಲ್ಲಿ ರಾಜ್ಯದ ಲ್ಲಯೇ ಕಾಪು ಕ್ಷೇತ್ರ ವನ್ನು ಮಾದರಿ ಕ್ಷೇತ್ರ ವನ್ನಾಗಿ ಮಾಡಿದ ಅಭಿವೃದ್ಧಿ ಯ ಹರಿಕಾರ ಸೊರಕೆಯವರನ್ನು ಪ್ರಚಂಡ ಬಹುಮತವನ್ನು ಗೆಲ್ಲಿಸಿ ಅಂತ ಉತ್ತರಪ್ರದೇಶದ ಲೋಕ ಸಭಾ ಸದಸ್ಯ ಖ್ಯಾತ ಬಾಲಿವುಡ್ ನಟ ರಾಜ್ ಬಬ್ಬರ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಹಿರಿಯಡ್ಕ ಬಸ್ ಸ್ಟಾಂಡ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು.
ದೇಶದ ಕಾವಲುಗಾರ ವಿಫಲ ಆಗಿದ್ದಾರೆ. ಮುಂದಿನ ಬಾರಿ ದೇಶದ ಜನ ಈ ಕಾವಲುಗಾರನನ್ನು ಕೆಲಸಕ್ಕೆ ಇಟ್ಟು ಕೊಳ್ಳಲ್ಲ .
ಬಿಜೆಪಿಯವರಿಗೆ ಇಲ್ಲಿ ರಾಜ್ ಬಬ್ಬರ್ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.. ಚುನಾವಣಾ ತಾರಾ ಪ್ರಚಾರಕರಿಲ್ಲ. ಹಾಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಪ್ರಚಾರದಲ್ಲಿ ತೊಡಗಿದ್ದಾರೆ. ಕರ್ನಾಟಕ ಚುನಾವಣೆ ಸಿದ್ಧರಾಮಯ್ಯ ವರ್ಸಸ್ ಮೋದಿ ಆಗಿದೆ. ಮೋದಿ ಪ್ರಚಾರಕ್ಕೆ ಬಂದ್ರೆ ಪಾಸ್ ಬುಕ್ ತೋರಿಸಿ 15 ಲಕ್ಷ ರೂಪಾಯಿ ಯಾವಾಗ ಹಾಕ್ತಿರಿ ಕೇಳಿ ಅಂತಾ ಅವರು ಹೇಳಿದ್ರು.
ಯೋಗಿ ಆದಿತ್ಯನಾಥ್ ಕಾವಿ ಧರಿಸ್ತಾರೆ. ಕಾವಿನ ನಾನು ಗೌರವಿಸ್ತಿನಿ. ಆದರೆ ಕಾವಿ ಬಣ್ಣ ಮಾತ್ರ ನೋಡದೆ ಕಾವಿಯ ಹಿಂದೆ ಅಡಗಿರುವ ಕುತಂತ್ರಿಗಳನ್ನು ಗುರುತಿಸಿ ಅಂತಾ ರಾಜ್ ಬಬ್ಬರ್ ಹೇಳಿದ್ರು.
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಧರ್ಮದಲ್ಲಿ ರಾಜಕೀಯ ಮಾಡಬೇಡಿ. ರಾಜಕೀಯದಲ್ಲಿ ಧರ್ಮ ಇರಬೇಕು ಅನ್ನೊದು ನನ್ನ ಧ್ಯೇಯ. ಶಾಸಕ ಮಂತ್ರಿ ಎನ್ನುವುದಕ್ಕಿಂತ ಹೆಚ್ಚಾಗಿ ಜನಸೇವಕನಾಗಿ ಕೆಲಸ ಮಾಡಿದೀನಿ.ಈಗ ವಿನಯ್ ಕುಮಾರ್ ಸೊರಕೆ ಚುನಾವಣೆ ನಿಂತಿದೀನಿ ಅನ್ನೊದಕ್ಕಿಂತ ಹೆಚ್ಚಾಗಿ ನೀವೇ ಚುನಾವಣೆಗೆ ನಿಂತಿದ್ದೀರಿ ಅನ್ನೊ ರೀತಿಯಲ್ಲಿ ನನ್ನನ್ನು ಬೆಂಬಲಿಸಿ ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಅಂತ ಕಾರ್ಯಕರ್ತರಲ್ಲಿ ವಿನಂತಿ ಮಾಡಿಕೊಂಡ್ರು.
ಕಾಂಗ್ರೆಸ್ ಮುಖಂಡರಾದ ಯು. ಆರ್ ಸಭಾಪತಿ, ಎಂ.ಎ. ಗಫೂರ್, ಸುಧೀರ್ ಹೆಗ್ಡೆ, ಹರೀಶ್ ಕಿಣಿ, ಮಾಲತಿ ಆಚಾರ್ಯ, ಲಕ್ಷ್ಮೀನಾರಾಯಣ ಪ್ರಭು, ಚಂದ್ರಿಕಾ ಕೇಳ್ಕರ್, ವಿಲ್ಸನ್ ರೊಡ್ರಿಗಸ್,, ರಾಬರ್ಟ್, ವಿನೋದ್ ಶೆಟ್ಟಿ, ಇಸ್ಮಾಯಿಲ್ ಅತ್ರಾಡಿ, ಸುರೇಶ್ ನಾಯಕ್, ಶಾಂತಾರಾಮಸೂಡ, ಶ್ರೀಪಾದ ರೈ, ಗಿರೀಶ್ ಉದ್ಯಾವರ, ಶ್ರೀಧರ ಶೆಟ್ಟಿ, ಪ್ರವೀಣ್ ಹೆಗ್ಡೆ, ಪಂಜು ಪೂಜಾರಿ, ಸುಗಂಧಿ ಶೇಖರ್, ರವೀಂದ್ರ ಪೂಜಾರಿ, ವಿನ್ಸೆಂಟ್ ಮೊದಲಾದವರು ಉಪಸ್ಥಿತರಿದ್ದರು